ಇಲೆವೆನ್ ಅಪ್ ಕೋಟ ಮತ್ತು ಅಂಶು ಕೋಟೇಶ್ವರ ಚಾಂಪಿಯನ್ಸ್
ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಪ್ರಾಯೋಜಿತ ಬ್ರಹ್ಮಾವರ ಹಾಗೂ ಕುಂದಾಪುರ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಇಲೆವೆನ್ ಅಪ್ ಕೋಟ ಮತ್ತು ಅಂಶು ಕೋಟೇಶ್ವರ ತಂಡ ಪ್ರಶಸ್ತಿ ಜಯಿಸಿದರು.
ಬ್ರಹ್ಮಾವರ ತಾಲೂಕಿನ ಪಂದ್ಯಾಟದ ಫೈನಲ್ ನಲ್ಲಿ ಅಭಿ ಕೋಟ ಸರ್ವಾಂಗೀಣ ಆಟದ ಫಲವಾಗಿ,ಪಾರಂಪಳ್ಳಿ ಕ್ರಿಕೆಟರ್ಸ್ ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಫೈನಲ್ ನ ಪಂದ್ಯಶ್ರೇಷ್ಟ ಮತ್ತು ಸರಣಿ ಶ್ರೇಷ್ಠ ಅಭಿ ಕೋಟ,ಬೆಸ್ಟ್ ಬ್ಯಾಟ್ಸ್‌ಮನ್ ಪುಂಡಲೀಕ ಸಾಸ್ತಾನ ಮತ್ತು ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಯೋಗೀಶ್ ಕೋಟ ತನ್ನದಾಗಿಸಿಕೊಂಡರು.
ಕುಂದಾಪುರ ತಾಲೂಕಿನ ಫೈನಲ್ ಪಂದ್ಯದಲ್ಲಿ ಅಂಶು ಕೋಟೇಶ್ವರ ತಂಡದ ಸಚಿನ್ ಕೋಟೇಶ್ವರ ಅದ್ಭುತ ಬ್ಯಾಟಿಂಗ್ ನಿಂದ ಟೊರ್ಪೆಡೋಸ್ ಕುಂದಾಪುರವನ್ನು ಮಣಿಸಿ ಪ್ರಥಮ ಪ್ರಶಸ್ತಿ ತನ್ನದಾಗಿಸಿಕೊಂಡರು.
ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಸಚಿನ್ ಕೋಟೇಶ್ವರ, ಬೆಸ್ಟ್ ಬ್ಯಾಟ್ಸ್‌ಮನ್ ಗಣೇಶ್(ಬೀಜಾಡಿ) ಟೊರ್ಪೆಡೋಸ್,ಬೆಸ್ಟ್ ಬೌಲರ್ ಸಚಿನ್ ಶೆಟ್ಟಿ ಪಡೆದುಕೊಂಡರು.
*ಸಮಾರೋಪ ಸಮಾರಂಭ*
ಹಿರಿಯ ಆಟಗಾರರು,ಟಿ.ಸಿ.ಎ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಟಿ.ಸಿ.ಅಧ್ಯಕ್ಷರಾದ ಗೌತಮ್ ಶೆಟ್ಟಿ “ಯುವ ಆಟಗಾರರ ಭಾಗವಹಿಸುವಿಕೆಯಿಂದ ಟಿ.ಸಿ.ಎ 7 ತಾಲೂಕುಗಳಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.10 ಓವರ್ ಗಳಲ್ಲಿ ಆಟಗಾರರ ಪರಿಪೂರ್ಣ ಪ್ರದರ್ಶನ ಹೊರಹೊಮ್ಮಿದೆ.ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಯೋಜನೆಗಳು ರಾಜ್ಯದ ಹೆಚ್ಚಿನ ಜಿಲ್ಲೆಗಳ ಗಮನ ಸೆಳೆದಿದ್ದು,ಮೇ 7 ಮತ್ತು 8 ರಂದು ಟಿ.ಸಿ.ಎ ಜಿಲ್ಲಾ ಮತ್ತು ರಾಜ್ಯಮಟ್ಟದ ಪಂದ್ಯಾಟಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದರು.
ಟಿ.ಸಿ.ಎ ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ ಮಾತನಾಡಿ “ಇತ್ತೀಚಿನ ದಿನಗಳಲ್ಲಿ ಓವರ್ ಗಳ ಕಡಿತದಿಂದಾಗಿ ಆಟಗಾರರಿಗೆ ಪ್ರತಿಭೆ ತೋರ್ಪಡಿಸುವ ಅವಕಾಶ ಸಿಗುತ್ತಿಲ್ಲ ಆದ್ದರಿಂದ ಟಿ.ಸಿ.ಎ 10 ಓವರ್ ಗಳ ಪಂದ್ಯಾಟ ಆಯೋಜಿಸಿದೆ.ಈ ಯೋಜನೆ ಯಶಸ್ವಿಯಾಗಲು ಆಟಗಾರರ ಒಗ್ಗಟ್ಟು ಅಗತ್ಯ” ಎಂದರು.
ಹಿರಿಯರಾದ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಮಾತನಾಡಿ “ಆಟಗಾರರು ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಟಿ.ಸಿ.ಎ ಯುವಕರಿಗೆ ಒಳ್ಳೆಯ ಅವಕಾಶ ಕಲ್ಪಿಸಿದೆ ಹಾಗೂ ಆಟಗಾರರ ಪರಿಪೂರ್ಣ ಪ್ರದರ್ಶನ ಹೊರಹೊಮ್ಮಿದೆ” ಎಂದರು.
ಟಿ.ಸಿ.ಎ ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ ಮಾತನಾಡಿ “T.C.A ಯುವ ಆಟಗಾರರ ಪ್ರತಿಭಾ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆ ಸೃಷ್ಟಿಸಿದ್ದು, ಆಟಗಾರರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.
30,40 ಗಜಗಳ ಪಂದ್ಯಾಟಗಳನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ” ಎಂದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಟಿ.ಸಿ.ಎ ಗೌರವಾಧ್ಯಕ್ಷರಾದ ಶ್ರೀಪಾದ ಉಪಾಧ್ಯಾಯ,
ರಾಘವೇಂದ್ರ ಹೊಳ್ಳ,ಸತೀಶ್ ಕುಂದರ್,ನಾಗೇಶ್ ರಾವ್ ಶ್ರೀಲತಾ ಕುಂದಾಪುರ,ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು,ಯಾದವ್ ನಾಯಕ್ ಕೆಮ್ಮಣ್ಣು, ಪ್ರವೀಣ್ ಪಿತ್ರೋಡಿ, ಸತೀಶ್ ಕೋಟ್ಯಾನ್,ನಾರಾಯಣ ಶೆಟ್ಟಿ ಕೋಟೇಶ್ವರ,ಕೋಟ ರಾಮಕೃಷ್ಣ ಆಚಾರ್,ಅರ್ಮಾನ್ ಮತ್ತಿತರರು ಉಪಸ್ಥಿತರಿದ್ದರು.
ಕೆ.ಪಿ.ಸತೀಶ್,ಮನೋಜ್ ನಾಯರ್ ಸಮಾರೋಪ ಸಮಾರಂಭದ ನಿರೂಪಣೆ ನಡೆಸಿದರು.
M9 ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರ ಬಿತ್ತರಗೊಂಡರೆ,ವೀಕ್ಷಕ ವಿವರಣೆಯಲ್ಲಿ ಅಜಯ್ ರಾಜ್ ಮಂಗಳೂರು,ನಾಸೀರ್ ಕೋಟೇಶ್ವರ,ನಿತೇಶ್ ಗೋಲ್ಡನ್ ಮಿಲ್ಲರ್,ರಾಘವೇಂದ್ರ ಚರಣ್ ನಾವಡ ಮತ್ತು ರಂಜಿತ್ ಶೆಟ್ಟಿ ಸಹಕರಿಸಿದರು…