ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ. ಈ ಕ್ರಿಕೆಟ್ ಟೂರ್ನಿಯು ಏಪ್ರಿಲ್ 18 ಮತ್ತು 19, 2026ರಂದು ಅಳಿಯೂರು ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.

ಟೂರ್ನಿಯ ವಿಜೇತ ತಂಡಕ್ಕೆ ₹25,000 ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುತ್ತದೆ. ರನ್ನರ್-ಅಪ್ ತಂಡಕ್ಕೆ ₹15,000 ಮತ್ತು ಟ್ರೋಫಿ, ತೃತೀಯ ಹಾಗೂ ಚತುರ್ಥ ಸ್ಥಾನಗಳಿಗೆ ಟ್ರೋಫಿ ನೀಡಲಾಗುತ್ತದೆ. ಜೊತೆಗೆ ವೈಯಕ್ತಿಕ ಪ್ರಶಸ್ತಿಗಳೂ ಇರಲಿವೆ.

ಟೂರ್ನಿಯಲ್ಲಿ ಮೂಡ್‌ಬಿದ್ರಿ ಯೂನಿಯನ್‌ನ 2 ಐಕಾನ್ ಆಟಗಾರರು ಭಾಗವಹಿಸಲಿದ್ದಾರೆ. ಅಳಿಯೂರು, ವಲ್ಪಾಡಿ, ಶಿರ್ತಾಡಿ, ಮಕ್ಕಿ, ಕೋನಾಜೆ, ಹೌಡಲ್, ಮರಿಯಾಡಿ, ಪಣಪಿಲ, ಬೊರುಗುಡ್ಡೆ, ದರೆಗುಡ್ಡೆ, ಮಂತ್ರಾಡಿ, ಹೊಸ್ಮಾರ್, ಕೆಲ್ಲಾಪುತ್ತಿಗೆ ಹಾಗೂ ಮರ್ಣಾಡು ಪ್ರದೇಶಗಳ ಆಟಗಾರರಿಗೆ ಬಿಡಿಂಗ್ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಆಸಕ್ತ ಆಟಗಾರರು ತಮ್ಮ ಫೋಟೋ ಮತ್ತು ಮೊಬೈಲ್ ಸಂಖ್ಯೆಯನ್ನು ಕಳುಹಿಸಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಶುಲ್ಕವಾಗಿ ₹200 ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಾಗೇಶ್ (9686431009) ಹಾಗೂ ವಿನೀತ್ (9632690874) ಅವರನ್ನು ಸಂಪರ್ಕಿಸಬಹುದು.

ಈ ಟೂರ್ನಿಯನ್ನು Sports Kannada Live Media ವತಿಯಿಂದ ನೇರ ಪ್ರಸಾರ ಮಾಡಲಾಗುತ್ತದೆ. 

 

Leave a Reply

Your email address will not be published. Required fields are marked *