ಪಾದೆಬೆಟ್ಟು ಗ್ರಾಮದ ಶಶಿಕಲಾ ಆಚಾರ್ಯ ಇವರ ತಂದೆ ಲಕ್ಷ್ಮಣ ಆಚಾರ್ಯ ಹಾಗೂ ತಾಯಿ ಶಾರದಾ ಆಚಾರ್ಯ ಇವರು ಸುಮಾರು 12 ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದು ಯಾವುದೇ ಚಲನವಲನಗಳಿಲ್ಲದೇ ಹಾಸಿಗೆಯಲ್ಲೇ ಮಲಗಿಕೊಂಡಿದ್ದು ಈ ದಂಪತಿಗಳ ಮಗನಾದ ಸುಬ್ರಹ್ಮಣ್ಯ ಆಚಾರ್ಯ ಇವರು ವೃತ್ತಿಯಲ್ಲಿ ಮರದ ಕೆಲಸ ಮಾಡಿಕೊಂಡು ಈ ಕುಟುಂಬಕ್ಕೆ ಬೆನ್ನೆಲುಬಾಗಿದ್ದರು.
ಆದರೆ ಮಗನ ಅಕಾಲಿಕ ಮರಣದಿಂದ ಈ ಕುಟುಂಬಕ್ಕೆ ಜೀವನ ನಡೆಸಲು ಅಸಾಧ್ಯವಾಗಿರುತ್ತದೆ.ಇದನ್ನು ಮನಗಂಡು,ಶಶಿಕಲಾ ಆಚಾರ್ಯ ಕುಟುಂಬಕ್ಕೆ ನೆರವಿನ ಹಸ್ತ ನೀಡುವ ಸದುದ್ದೇಶದಿಂದ ಶ್ರೀವಿಕಾ ಕ್ರಿಕೆಟ್ ಕ್ಲಬ್ ಪಾದೆಬೆಟ್ಟು “ಶ್ರೀವಿಕಾ ಕಪ್-2022” ಆಯೋಜಿಸಿದ್ದಾರೆ.
ಏಪ್ರಿಲ್ ದಿನಾಂಕ 9 ಮತ್ತು 10 ರಂದು ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು,ಗ್ರೂಪ್ ಎ ವಿಭಾಗದಲ್ಲಿ ವಿಶ್ವಕರ್ಮ ಸಮಾಜ ಬಾಂಧವರ ಪಂದ್ಯಾಕೂಟ(ರಾಜ್ಯ ಮಟ್ಟದ ಆಟಗಾರರಿಗೆ ಅವಕಾಶವಿಲ್ಲ),ಗ್ರೂಪ್ ಬಿ ವಿಭಾಗದಲ್ಲಿ ಉಡುಪಿ,ದ.ಕ ಜಿಲ್ಲಾ ಮಟ್ಟದ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಥಮ ಬಹುಮಾನ 30 ಸಾವಿರ ರೂ ಮತ್ತು ದ್ವಿತೀಯ ಬಹುಮಾನ 15 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದೆ.
ಹೆಚ್ಚಿನ ವಿವರಗಳಿಗಾಗಿ 9008857100,8073536342,
8618756075 ಈ ನಂಬರ್ ಗಳನ್ನು ಸಂಪರ್ಕಿಸಬಹುದು.