Home ಸ್ಪೋರ್ಟ್ಸ್ ಹಿರಿಯ ಕ್ರೀಡಾ ಪತ್ರಕರ್ತ ಸೋಮಶೇಖರ್ ಪಡುಕರೆಗೆ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಹಿರಿಯ ಕ್ರೀಡಾ ಪತ್ರಕರ್ತ ಸೋಮಶೇಖರ್ ಪಡುಕರೆಗೆ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಹಿರಿಯ ಕ್ರೀಡಾ ಪತ್ರಕರ್ತ ಸೋಮಶೇಖರ್ ಪಡುಕರೆಗೆ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಹಿರಿಯ ಕ್ರೀಡಾ ಪತ್ರಕರ್ತ ಸೋಮಶೇಖರ್ ಪಡುಕರೆಗೆ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಮಾಧ್ಯಮ ಅಕಾಡೆಮಿ 2025ನೇ ಸಾಲಿನ ವಾರ್ಷಿಕ ಹಾಗೂ ದತ್ತಿ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಈ ಸಾಲಿನ ವಿಶೇಷ ಪ್ರಶಸ್ತಿಗೆ ಹಿರಿಯ ಕ್ರೀಡಾ ಪತ್ರಕರ್ತ ಸೋಮಶೇಖರ್ ಪಡುಕರೆ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಗೌರವ ಪತ್ರಿಕೆ, 5೦ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.

ಕಳೆದ 32 ವರ್ಷಗಳಿಂದ ಕ್ರೀಡಾ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಸೋಮಶೇಖರ್ ಪಡುಕರೆ ಕರ್ನಾಟಕದ ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿದ್ದಾರೆ. ರಾಜ್ಯದಲ್ಲಿರುವ ಅನೇಕ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ದೊರಕಿಸುವಲ್ಲಿ ಅವರ ಲೇಖನಗಳು ಮಹತ್ವದ ಪಾತ್ರ ವಹಿಸಿವೆ.

ಅವರು ಕೇವಲ ಕರ್ನಾಟಕದ ಕ್ರೀಡಾಪಟುಗಳನ್ನಷ್ಟೇ ಅಲ್ಲದೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಗಳನ್ನು ಕರ್ನಾಟಕದ ಓದುಗರಿಗೆ ಸಮಗ್ರವಾಗಿ ಪರಿಚಯಿಸಿದ್ದಾರೆ. ಇದರಿಂದ ಕ್ರೀಡಾಭಿಮಾನಿಗಳಿಗೆ ಕ್ರೀಡಾಲೋಕದ ಬಗ್ಗೆ ಆಳವಾದ ಅರಿವು ಮೂಡಲು ಸಹಾಯವಾಗಿದೆ.

ವಿಶೇಷವಾಗಿ ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಸರ್ಕಾರದ ನೆರವು ಹಾಗೂ ಸೌಲಭ್ಯಗಳು ಲಭಿಸುವಂತೆ ಮಾಡುವಲ್ಲಿ ಸೋಮಶೇಖರ್ ಪಡುಕರೆ ಅವರ ಲೇಖನಗಳು ಪರಿಣಾಮಕಾರಿಯಾಗಿವೆ. ಅಲ್ಲದೆ, ರಾಜ್ಯದ ಅನೇಕ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಹಾಗೂ ಪ್ರೋತ್ಸಾಹಧನ ದೊರಕುವಂತೆ ಮಾಡುವಲ್ಲಿ ಅವರ ಪತ್ರಿಕೋದ್ಯಮದ ಕೊಡುಗೆ ಗಮನಾರ್ಹವಾಗಿದೆ.

ಸಾಮಾಜಿಕ ಹೊಣೆಗಾರಿಕೆಯನ್ನು ಕ್ರೀಡಾ ಪತ್ರಿಕೋದ್ಯಮದೊಂದಿಗೆ ಸಮರ್ಪಕವಾಗಿ ಬೆಸೆಯುವ ಮೂಲಕ, ರಾಜ್ಯದ ಕ್ರೀಡಾ ಅಭಿವೃದ್ಧಿಗೆ ಮಹತ್ವದ ಸೇವೆ ಸಲ್ಲಿಸಿರುವ ಸೋಮಶೇಖರ್ ಪಡುಕೆರೆ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುತ್ತಿರುವ ಈ ಪ್ರಶಸ್ತಿ, ಅವರ ದೀರ್ಘಕಾಲದ ಸಾಧನೆಗೆ ಸಾರ್ಥಕ ಗೌರವವಾಗಿದೆ.

LEAVE A REPLY

Please enter your comment!
Please enter your name here

17 − eleven =

ಹಿರಿಯ ಕ್ರೀಡಾ ಪತ್ರಕರ್ತ ಸೋಮಶೇಖರ್ ಪಡುಕರೆಗೆ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಹಿರಿಯ ಕ್ರೀಡಾ ಪತ್ರಕರ್ತ ಸೋಮಶೇಖರ್ ಪಡುಕರೆಗೆ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಕರ್ನಾಟಕ ಮಾಧ್ಯಮ ಅಕಾಡೆಮಿ 2025ನೇ ಸಾಲಿನ ವಾರ್ಷಿಕ ಹಾಗೂ ದತ್ತಿ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಈ ಸಾಲಿನ ವಿಶೇಷ ಪ್ರಶಸ್ತಿಗೆ ಹಿರಿಯ ಕ್ರೀಡಾ ಪತ್ರಕರ್ತ ಸೋಮಶೇಖರ್ ಪಡುಕರೆ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಗೌರವ ಪತ್ರಿಕೆ, 5೦ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಕಳೆದ 32 ವರ್ಷಗಳಿಂದ ಕ್ರೀಡಾ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಸೋಮಶೇಖರ್ ಪಡುಕರೆ ಕರ್ನಾಟಕದ ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿದ್ದಾರೆ. ರಾಜ್ಯದಲ್ಲಿರುವ ಅನೇಕ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ದೊರಕಿಸುವಲ್ಲಿ ಅವರ ಲೇಖನಗಳು ಮಹತ್ವದ ಪಾತ್ರ ವಹಿಸಿವೆ. ಅವರು ಕೇವಲ ಕರ್ನಾಟಕದ ಕ್ರೀಡಾಪಟುಗಳನ್ನಷ್ಟೇ ಅಲ್ಲದೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಗಳನ್ನು ಕರ್ನಾಟಕದ ಓದುಗರಿಗೆ ಸಮಗ್ರವಾಗಿ ಪರಿಚಯಿಸಿದ್ದಾರೆ. ಇದರಿಂದ ಕ್ರೀಡಾಭಿಮಾನಿಗಳಿಗೆ ಕ್ರೀಡಾಲೋಕದ ಬಗ್ಗೆ ಆಳವಾದ ಅರಿವು ಮೂಡಲು ಸಹಾಯವಾಗಿದೆ. ವಿಶೇಷವಾಗಿ ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ

Send this to a friend