Home ಇತರೆ ಶ್ರೀ ರಾಮ ಮಂದಿರ, ಕೆಸರ್ ಗದ್ದೆಯಲ್ಲಿ 14ನೇ ವರ್ಷದ G.S.B ಸ್ಪರ್ಧಾ ಕಾರ್ಯಕ್ರಮ

ಶ್ರೀ ರಾಮ ಮಂದಿರ, ಕೆಸರ್ ಗದ್ದೆಯಲ್ಲಿ 14ನೇ ವರ್ಷದ G.S.B ಸ್ಪರ್ಧಾ ಕಾರ್ಯಕ್ರಮ

ಶ್ರೀ ರಾಮ ಮಂದಿರ, ಕೆಸರ್ ಗದ್ದೆಯಲ್ಲಿ 14ನೇ ವರ್ಷದ G.S.B ಸ್ಪರ್ಧಾ ಕಾರ್ಯಕ್ರಮ

ಶ್ರೀ ರಾಮ ಮಂದಿರ, ಕೆಸರ್ ಗದ್ದೆಯಲ್ಲಿ 14ನೇ ವರ್ಷದ G.S.B ಸ್ಪರ್ಧಾ ಕಾರ್ಯಕ್ರಮ

ಕೆಸರ್ ಗದ್ದೆಯ ಶ್ರೀ ರಾಮ ಮಂದಿರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ 14ನೇ ವರ್ಷದ G.S.B ಸ್ಪರ್ಧಾ ಕಾರ್ಯಕ್ರಮವನ್ನು ಅತ್ಯಂತ ವೈಭವದಿಂದ ಆಯೋಜಿಸಲಾಗಿದೆ. 

G.S.B ಸಮುದಾಯದ ಪ್ರತಿಭೆ, ಸಂಘಟನೆ ಹಾಗೂ ಸಮುದಾಯ ಬಾಂಧವ್ಯವನ್ನು ಉತ್ತೇಜಿಸುವ ಉದ್ದೇಶದಿಂದ 14ನೇ ವರ್ಷದ G.S.B ಸ್ಪರ್ಧಾ ಕಾರ್ಯಕ್ರಮವನ್ನು ಸುನಂದ ಮಾಧವ ಪ್ರಭು ಸಭಾಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವು ದಿನಾಂಕ 10-01-2026 (ಶನಿವಾರ) ಮಧ್ಯಾಹ್ನ 2.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಹಾಗೂ ದಿನಾಂಕ 11-01-2026 (ಭಾನುವಾರ) ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ G.S.B ಸಮುದಾಯದ ವಿವಿಧ ವಯೋಮಾನದ ಸದಸ್ಯರಿಗೆ ಸ್ಪರ್ಧೆಗಳು ನಡೆಯಲಿದ್ದು, ಮಕ್ಕಳಿಂದ ವೃದ್ಧರ ತನಕ ಎಲ್ಲರಿಗೂ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಸಮುದಾಯದೊಳಗಿನ ಸಾಂಸ್ಕೃತಿಕ ಹಾಗೂ ಬೌದ್ಧಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸ್ಪರ್ಧಾ ಕಾರ್ಯಕ್ರಮದ ಮೂಲಕ ಸಮುದಾಯದೊಳಗಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ.

ಕಾರ್ಯಕ್ರಮದ ಯಶಸ್ವಿಗಾಗಿ ಆಯೋಜಕ ಸಮಿತಿಯ ಸದಸ್ಯರು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಕೆಸರ್ ಗದ್ದೆ ಹಾಗೂ ಸುತ್ತಮುತ್ತಲ ಪ್ರದೇಶದ G.S.B ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.

ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿವಿಧ ಮನೋರಂಜನಾ ಸ್ಪರ್ಧೆಗಳು ಹಾಗೂ ಧಾರ್ಮಿಕ ಸ್ಪರ್ಧೆಗಳು ನೆರವೇರಲಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಸಮಿತಿ ಸದಸ್ಯರು ಹಾಗೂ ಸೇವಾಭಾವಿಗಳಿಂದ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ವಿವಿಧ ಖಾದ್ಯಗಳು ಮತ್ತು ಊಟದ ವ್ಯವಸ್ಥೆಯನ್ನು ಆಯೋಜಕರು ಕಲ್ಪಿಸಿದ್ದಾರೆ.

ಈ ಕುರಿತು ಅಗತ್ಯ ಮಾಹಿತಿಯನ್ನು ಆಯೋಜಕರ ಪರವಾಗಿ ಸುಧೇಶ್ ಭಟ್ ಮೂಡಬಿದ್ರೆ ಅವರು ನೀಡಿದ್ದಾರೆ.

LEAVE A REPLY

Please enter your comment!
Please enter your name here

two + twelve =

ಶ್ರೀ ರಾಮ ಮಂದಿರ, ಕೆಸರ್ ಗದ್ದೆಯಲ್ಲಿ 14ನೇ ವರ್ಷದ G.S.B ಸ್ಪರ್ಧಾ ಕಾರ್ಯಕ್ರಮ

ಶ್ರೀ ರಾಮ ಮಂದಿರ, ಕೆಸರ್ ಗದ್ದೆಯಲ್ಲಿ 14ನೇ ವರ್ಷದ G.S.B ಸ್ಪರ್ಧಾ ಕಾರ್ಯಕ್ರಮ ಕೆಸರ್ ಗದ್ದೆಯ ಶ್ರೀ ರಾಮ ಮಂದಿರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ 14ನೇ ವರ್ಷದ G.S.B ಸ್ಪರ್ಧಾ ಕಾರ್ಯಕ್ರಮವನ್ನು ಅತ್ಯಂತ ವೈಭವದಿಂದ ಆಯೋಜಿಸಲಾಗಿದೆ.  G.S.B ಸಮುದಾಯದ ಪ್ರತಿಭೆ, ಸಂಘಟನೆ ಹಾಗೂ ಸಮುದಾಯ ಬಾಂಧವ್ಯವನ್ನು ಉತ್ತೇಜಿಸುವ ಉದ್ದೇಶದಿಂದ 14ನೇ ವರ್ಷದ G.S.B ಸ್ಪರ್ಧಾ ಕಾರ್ಯಕ್ರಮವನ್ನು ಸುನಂದ ಮಾಧವ ಪ್ರಭು ಸಭಾಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವು ದಿನಾಂಕ 10-01-2026 (ಶನಿವಾರ) ಮಧ್ಯಾಹ್ನ 2.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಹಾಗೂ ದಿನಾಂಕ 11-01-2026 (ಭಾನುವಾರ) ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ G.S.B ಸಮುದಾಯದ ವಿವಿಧ ವಯೋಮಾನದ ಸದಸ್ಯರಿಗೆ ಸ್ಪರ್ಧೆಗಳು ನಡೆಯಲಿದ್ದು, ಮಕ್ಕಳಿಂದ ವೃದ್ಧರ ತನಕ ಎಲ್ಲರಿಗೂ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಸಮುದಾಯದೊಳಗಿನ ಸಾಂಸ್ಕೃತಿಕ ಹಾಗೂ ಬೌದ್ಧಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸ್ಪರ್ಧಾ ಕಾರ್ಯಕ್ರಮದ ಮೂಲಕ ಸಮುದಾಯದೊಳಗಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ

Send this to a friend