ಐಟಿ ಚಾಂಪಿಯನ್ಸ್ ಟ್ರೋಫಿ: ರೋಬೋಸಾಫ್ಟ್ ಉಡುಪಿಗೆ ಜಯಮಾಲೆ
ಮೂಲ್ಕಿ, ಮೇ 13 – ಮಂಗಳೂರಿನ ಮ್ಯಾಂಗಲೋರ್ ರಾಯಲ್ಸ್ ಸ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ಮೂಲ್ಕಿಯ ವಿಜಯಾ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಐಟಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರೋಬೋಸಾಫ್ಟ್ ಟೆಕ್ನಾಲಜೀಸ್ ಉಡುಪಿ ತಂಡವು ಪ್ರಶಸ್ತಿ ಜಯಿಸಿತು.
ಶನಿವಾರ ಮತ್ತು ಭಾನುವಾರ ನಡೆದ ಈ ಟೂರ್ನಿಯಲ್ಲಿ ಮಂಗಳೂರು ಮತ್ತು ಸುತ್ತಮುತ್ತಲಿನ ಐಟಿ ಕಂಪನಿಗಳ 12 ತಂಡಗಳು ಪಾಲ್ಗೊಂಡಿದ್ದವು. ರೋಬೋಸಾಫ್ಟ್ ಉಡುಪಿ ತಂಡವು ಪೈಪೋಟಿಯ ಫೈನಲ್ ಪಂದ್ಯದಲ್ಲಿ ಇನ್ಫೋಸಿಸ್ ಮಂಗಳೂರು ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಕೈಗೆತ್ತಿಕೊಂಡಿತು.
**ಪ್ರಥಮ ಬಹುಮಾನವಾಗಿ ₹75,000 ನಗದು ಮತ್ತು ಟ್ರೋಫಿ ರೋಬೋಸಾಫ್ಟ್‌ಗೆ** ದೊರೆತರೆ, **ಇನ್ಫೋಸಿಸ್ ತಂಡಕ್ಕೆ ದ್ವಿತೀಯ ಬಹುಮಾನವಾಗಿ ₹40,000 ನಗದು ಮತ್ತು ಟ್ರೋಫಿ** ನೀಡಲಾಯಿತು.
ಈ ಪಂದ್ಯಾವಳಿಯಲ್ಲಿ **ಯುನಿಫೈಸಿಎಕ್ಸ್, ಇ.ಜಿ.ಡಿ.ಕೆ ಇಂಡಿಯಾ, ಕಾಗ್ನಿಜೆಂಟ್, ನೋವಿಗೋ, ಬಿಕ್ಸ್ ಬೈಟ್ಸ್, ಅಪ್‌ಡಾಪ್ಟ್, ನಿವಿಯಸ್, ಎಂಫಸಿಸ್, ಎಮ್.ರಿಸಲ್ಟ್ ಹಾಗೂ ಸಿಗ್ನಸ್** ತಂಡಗಳು ಭಾಗವಹಿಸಿತ್ತು.
ಮೊದಲ ಸೆಮಿಫೈನಲ್‌ನಲ್ಲಿ ರೋಬೋಸಾಫ್ಟ್ ತಂಡವು ಕಾಗ್ನಿಜೆಂಟ್ ವಿರುದ್ಧ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿತು. ಎರಡನೇ ಸೆಮಿಫೈನಲ್‌ನಲ್ಲಿ ಇನ್ಫೋಸಿಸ್ ಲಿಮಿಟೆಡ್, ನಿವಿಯಸ್ ಸೊಲ್ಯೂಷನ್ಸ್ ತಂಡವನ್ನು ಸೋಲಿಸಿತು.
ವೈಯಕ್ತಿಕ ಪ್ರಶಸ್ತಿಗಳಲ್ಲಿ ರೋಬೋಸಾಫ್ಟ್‌ನ ಪ್ರಜ್ವಲ್ “ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್” ಮತ್ತು “ಮ್ಯಾನ್ ಆಫ್ ದಿ ಸೀರೀಸ್” ಪ್ರಶಸ್ತಿಗೆ ಭಾಜನರಾದರು. ಇನ್ಫೋಸಿಸ್‌ನ ಜೀತೇಶ್ “ಬೆಸ್ಟ್ ಬ್ಯಾಟ್ಸ್‌ಮನ್” ಎಂಬ ಗೌರವ ಪಡೆದರೆ, ರೋಬೋಸಾಫ್ಟ್‌ನ ದಿನೇಶ ಕುಲಾಲ್ “ಟೂರ್ನಮೆಂಟ್‌ನ ಬೆಸ್ಟ್ ಬೌಲರ್” ಪ್ರಶಸ್ತಿಗೆ ಅರ್ಹರಾದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗೋಕರ್ಣನಾಥ ದೇವಸ್ಥಾನ ಮಂಗಳೂರು ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ವಹಿಸಿದ್ದರು.** ACE ಪ್ರಮೋಟರ್ಸ್ & ಡೆವೆಲಪರ್ಸ್ ನ ದರ್ಶನ್ ಜೈನ್, ನಿವಿಯಸ್ ಸೊಲ್ಯೂಷನ್ಸ್ ನ ಶಶಿರ್ ಶೆಟ್ಟಿ, ಮಹಾಮಾಯ ಗ್ರೂಪ್ ನ ಚೈತ್ರೇಶ್ ಶೆಣೈ ಮತ್ತು ಉದ್ಯಮಿ ಶ್ರೀನಾಥ್ ಉಪಸ್ಥಿತರಿದ್ದರು.
ಆಯೋಜಕರಾದ ವೈಭವ್ ಪೈ , ಅಮಿತ್ ರಾಜ್, ಸುಪ್ರೀತ್, ವಸೀಮ್ (ಮ್ಯಾಂಗಲೋರ್ ಮೇರಿ ಜಾನ್), ಮೇಘರಾಜ್, ವಿಘ್ನೇಶ್, ನೆವಿಲ್, ಗಣೇಶ್ ಶೆಟ್ಟಿ, ಪ್ರಶಾಂತ್ ಕೇಶವ್ ಅವರುಗಳ ಪ್ರಯತ್ನದಿಂದ ಟೂರ್ನಿ ಯಶಸ್ವಿಯಾಗಿ ಪೂರ್ಣಗೊಂಡಿತು.
ಅಸ್ತ್ರ ಗ್ರೂಪ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕರಾಗಿದ್ದು, V4 ನ್ಯೂಸ್ 24X7 ಚಾನೆಲ್ ನೇರ ಪ್ರಸಾರ ನೀಡಿತು. ಅವಿನಾಶ್ ಬಂಟ್ವಾಳ್, ಪವನ್ ಶಿರ್ವ ಮತ್ತು ಕಾರ್ತಿಕ್ ಮಂಗಳೂರು ಅಂಪೈರುಗಳಾಗಿ ಕಾರ್ಯ ನಿರ್ವಹಿಸಿದರೆ ದೀಕ್ಷಿತ್ ಮಂಗಳೂರು, ದಿನೇಶ್ ಆಚಾರ್ಯ ಕುಳಾಯಿ ಮತ್ತು ಪಂಚಮ್ ಭಟ್ ಸ್ಕೋರರ್ ಗಳಾಗಿ ಸಹಕರಿಸಿದರು. ಸುರೇಶ್ ಭಟ್ (ಮೂಲ್ಕಿ) ಮತ್ತು ಅಮಿತ್ ಪೈ (ಮಂಗಳೂರು) ಪಂದ್ಯಾವಳಿಯ ವೀಕ್ಷಕ ವಿವರಣೆಗಾರರಾಗಿದ್ದರು.
ಈ ಟೂರ್ನಿಯು ಐಟಿ ಉದ್ಯೋಗಿಗಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವತ್ತ ಕೈಗೊಂಡಿದ್ದ ಯಶಸ್ವಿ ಹೆಜ್ಜೆಯಾಗಿ ಪರಿಗಣಿಸಲಾಯಿತು.