ಸಿರಾಜ್ ದಾಳಿಗೆ ಇಂಗ್ಲೆಂಡ್ ಕಂಗಾಲು – 407 ರನ್‌ಗಳಿಗೆ ಆಲೌಟ್!
ಸಿರಾಜ್ ದಾಳಿಗೆ ಇಂಗ್ಲೆಂಡ್ ಕಂಗಾಲು – 407 ರನ್‌ಗಳಿಗೆ ಆಲೌಟ್! ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಆತಿಥೇಯ ಇಂಗ್ಲೆಂಡ್‌ನ್ನು ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್‌ಗಳಿಗೆ ಆಲೌಟ್ ಮಾಡಿದೆ. ಭಾರತದ ಪರ ಮಾರಕ ವೇಗದ ದಾಳಿಯನ್ನು ನಡೆಸಿದ ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಪ್ರಮುಖ ಪಾತ್ರ ವಹಿಸಿದರು. ಸಿರಾಜ್ 19.3 ಓವರ್‌ಗಳಲ್ಲಿ 70 ರನ್ ನೀಡಿ 6 ಅಮೂಲ್ಯ ವಿಕೆಟ್‌ಗಳನ್ನು ಪತನಗೊಳಿಸಿದರೆ, ಆಕಾಶ್ ದೀಪ್ 20 ಓವರ್‌ಗಳಲ್ಲಿ 80 ರನ್‌ಗಳಿಗೆ 4 ವಿಕೆಟ್ ತೆಗೆದು ತಮ್ಮ ಪ್ರಭಾವ ಬೀರಿದರು. ಇಂಗ್ಲೆಂಡ್ ತಂಡದ 6 ಆಟಗಾರರು ಡಕ್ ಔಟ್.. ಇಂಗ್ಲೆಂಡ್ ಆರಂಭದಲ್ಲಿ ಬಲಿಷ್ಠ ಆಟವನ್ನಾಡಿದರೂ, ಭಾರತದ ಈ ಜೋಡಿ ದಾಳಿಗೆ ಜಗ್ಗಿ 407ರನ್‌ಗೆ ಕುಸಿಯಿತು. ಈ ಬೌಲಿಂಗ್ ದಾಳಿಯ ಫಲವಾಗಿ ಭಾರತ ಪಂದ್ಯದಲ್ಲಿ ನಿಶ್ಚಿತ ಮುನ್ನಡೆ ಗಳಿಸಿದ್ದು, ಮುಂದಿನ ಇನ್ನಿಂಗ್ಸ್‌ಗಳಲ್ಲಿ ಇದರ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 407