ವಿಶ್ವಸಾಗರ ಹಾಗೂ ವೀರಕೇಸರಿ ಗಂಗೊಳ್ಳಿ ಇವರ ಆಶ್ರಯದಲ್ಲಿ ಫ್ರೆಂಡ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ

ವಿಶ್ವಸಾಗರ ಹಾಗೂ ವೀರಕೇಸರಿ ಗಂಗೊಳ್ಳಿ ಇವರ ಆಶ್ರಯದಲ್ಲಿ ಫ್ರೆಂಡ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ

ವಿಶ್ವಸಾಗರ ಹಾಗೂ ವೀರಕೇಸರಿ ಗಂಗೊಳ್ಳಿ ಇವರ ಆಶ್ರಯದಲ್ಲಿ ಫ್ರೆಂಡ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ

ವಿಶ್ವಸಾಗರ ಹಾಗೂ ವೀರಕೇಸರಿ ಗಂಗೊಳ್ಳಿಇವರ ಆಶ್ರಯದಲ್ಲಿ “ಫ್ರೆಂಡ್ಸ್ ಟ್ರೋಫಿ 2026” ಹೆಸರಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿ ದಿನಾಂಕ ಜನವರಿ 30, 31 ಹಾಗೂ ಫೆಬ್ರವರಿ 1, 2026ರಂದು ಗಂಗೊಳ್ಳಿಯ ಎಸ್.ವಿ.ಪಿ. ಶಾಲಾ ಮೈದಾನದಲ್ಲಿ ನಡೆಯಲಿದೆ.

ಪಂದ್ಯಾವಳಿಯು ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಥಮ ಬಹುಮಾನವಾಗಿ ರೂ. 1,11,111/- ಮತ್ತು ಕ್ರಿಸ್ಟಲ್ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 55,555/- ಮತ್ತು ಕ್ರಿಸ್ಟಲ್ ಟ್ರೋಫಿ ನೀಡಲಾಗುವುದು. ಇದರ ಜೊತೆಗೆ ಉತ್ತಮ ಆಟಗಾರರಿಗೆ ವೈಯಕ್ತಿಕ ಬಹುಮಾನಗಳನ್ನೂ ನೀಡಲಾಗುತ್ತದೆ.

ಪಂದ್ಯಾವಳಿಯಲ್ಲಿ ಪ್ರತಿ ತಂಡಕ್ಕೆ ಆರು ಓವರ್‌ಗಳ ಪಂದ್ಯ (2+2+1+1 ಮಾದರಿ) ಇರಲಿದೆ. ಪಂದ್ಯಗಳು ಕ್ರಿಕೆಟ್ ನಿಯಮಾನುಸಾರ ನಡೆಯಲಿದ್ದು, ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಸ್ಪೋರ್ಟ್ಸ್ ಕನ್ನಡ ಮೂಲಕ ನೇರ ಪ್ರಸಾರವಾಗಲಿದೆ.

ಈ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಲು ಸ್ಥಳೀಯ ಕ್ರೀಡಾಭಿಮಾನಿಗಳು ಹಾಗೂ ಯುವ ಸಮುದಾಯ ಸಕ್ರೀಯವಾಗಿ ಕೈಜೋಡಿಸುತ್ತಿದ್ದು, ಗಂಗೊಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶದ ಕ್ರಿಕೆಟ್ ಪ್ರೇಮಿಗಳಿಗೆ ಇದು ದೊಡ್ಡ ಕ್ರೀಡೋತ್ಸವವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
8105772232 (ಸಂದೀಪ್), 7019939443 (ಗುರು), 9511741385 (ದೀಪಕ್).

Leave a Reply

Your email address will not be published. Required fields are marked *