9.9 C
London
Saturday, June 15, 2024
Homeಕ್ರಿಕೆಟ್ಟೆನಿಸ್ಬಾಲ್ ಕ್ರಿಕೆಟ್ ನ ಕ್ರಿಸ್ ಗೇಲ್ ಖ್ಯಾತಿಯ ಫ್ರೆಂಡ್ಸ್ ಬೆಂಗಳೂರಿನ ಸಾಗರ್ ಭಂಡಾರಿ(S.R.B ಸ್ಪೋರ್ಟ್ಸ್)

ಟೆನಿಸ್ಬಾಲ್ ಕ್ರಿಕೆಟ್ ನ ಕ್ರಿಸ್ ಗೇಲ್ ಖ್ಯಾತಿಯ ಫ್ರೆಂಡ್ಸ್ ಬೆಂಗಳೂರಿನ ಸಾಗರ್ ಭಂಡಾರಿ(S.R.B ಸ್ಪೋರ್ಟ್ಸ್)

Date:

Related stories

ಕನ್ನಡಿಗ ‘ಜ್ಯಾಕ್’ ಕಟ್ಟಿದ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನವನ್ನೇ ಹೊಡೆದು ಹಾಕಿತು..!

ಮೊನ್ನೆ ಮೊನ್ನೆಯೊಷ್ಟೇ ಅಮೆರಿಕ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ...

ಟೆನ್ನಿಸ್ ಲೋಕಕ್ಕೆ ಮತ್ತೆ ಕಳೆ ತರಬಲ್ಲನಾ ಕಾರ್ಲಿಟೋ….???

ಭಾರತ ತಂಡ ತನ್ನ ಅತ್ಯಂತ ಕಡಿಮೆ ಟಿ 20 ಮೊತ್ತವನ್ನು ಕಾಪಿಟ್ಟುಕೊಂಡು...

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...
spot_imgspot_img
ಕರ್ನಾಟಕ ರಾಜ್ಯ ಕಂಡ ಬರಸಿಡಿಲಿನ ಹೊಡೆತದ ಈ ಬಲಗೈ ದಾಂಡಿಗ ತಾಂತ್ರಿಕ, ಮಾಂತ್ರಿಕ ಎಸೆತಗಳನ್ನು ಬಲಶಾಲಿ ಹೊಡೆತಗಳನ್ನಾಗಿ ಮಾರ್ಪಾಡಿಸಿ ಬೌಂಡರಿ,ಸಿಕ್ಸರ್ ಸಿಡಿಸುವುದರಲ್ಲಿ ನಿಸ್ಸೀಮ.
ಹೌದು ಸ್ನೇಹಿತರೇ ಟೆನ್ನಿಸ್ ಕ್ರಿಕೆಟ್ ನ ” ಸಾಗರ್  ಭಂಡಾರಿ” ಯಾರಿಗೆ ತಾನೇ ಗೊತ್ತಿಲ್ಲ.
ಈತ ದಾಂಡಿಗತನಕ್ಕಿಳಿದರೆ ಬೌಲರ್ ಗಳಿಗೆ ನಡುಕ.
ಈ ಆಟಗಾರನಿಗೆ ಎಸೆತಗಳನ್ನು ಎಸೆಯುವುದು
ತಲೆಬೇನೆಯ ವಿಚಾರವೇ ಸರಿ.
ಮೂಲತಃ  ಉಡುಪಿ ಸಮೀಪದ
ಪರ್ಕಳ ಮೂಲದವರಾದ,
ಪ್ರಾರಂಭದ ದಿನಗಳಲ್ಲಿ ಇವರ ಪ್ರತಿಭೆ ಮೊತ್ತಮೊದಲಿಗೆ ಗುರುತಿಸಿ ಕ್ರಿಕೆಟ್ ಗೆ  ಪರಿಚಯಿಸಿದವರು ಸ್ಪಾರ್ಕ್ ಉಡುಪಿಯ ಡಾ.ವಿನೋದ್.
ಸ್ಪಾರ್ಕ್ ತಂಡದಲ್ಲಿ ಮೊತ್ತಮೊದಲ ಬಾರಿ ಅಂಗಣದಲ್ಲಿ ಕಾಣಿಸಿಕೊಂಡ ಸಾಗರ್ ಭಂಡಾರಿ,ನಂತರದ ದಿನಗಳಲ್ಲಿ ಬೆಂಗಳೂರಿನ ಪೀಣ್ಯದ ಅಂಗಣದಲ್ಲಿ ತೋರುತ್ತಿದ್ದ ಅದ್ಭುತ ಪ್ರದರ್ಶನವನ್ನು ಗುರುತಿಸಿದ
ಕರ್ನಾಟಕ ರಾಜ್ಯ ಕಂಡ ಸಹೃದಯಿ ಕ್ರೀಡಾ ಪೋಷಕರಾದ” ಶ್ರೀಯುತ ರೇಣು ಗೌಡ” ರವರು ಕಳೆದ 26 ವರ್ಷಗಳಿಂದ ಕಟ್ಟಿ ಬೆಳೆಸಿದ ಬಲಿಷ್ಡ “ಫ್ರೆಂಡ್ಸ್ ಬೆಂಗಳೂರು” ತಂಡದಲ್ಲಿ
2006 ರಲ್ಲಿ ಭಂಡಾರಿಯವರಿಗೆ ಖಾಯಂ ಸ್ಥಾನವನ್ನು ದೊರಕಿಸಿಕೊಟ್ಟರು.
                   *”ಫ್ರೆಂಡ್ಸ್ ನ ಟ್ರಂಪ್ ಕಾರ್ಡ್”*
ಆರಂಭಿಕ ಆಟಗಾರನಾಗಿ ಸ್ಥಾನ ಭದ್ರಪಡಿಸಿಕೊಂಡ ಇವರು ತನ್ನ “ಒನ್ ಮ್ಯಾನ್ ಶೋ” ಪ್ರದರ್ಶನದ ಮೂಲಕ ತನ್ನ ತಂಡವನ್ನು ಹಲವಾರು ಪ್ರತಿಷ್ಟಿತ ಪಂದ್ಯಾಟಗಳಲ್ಲಿ ತಂಡವನ್ನು ಸೋಲಿನಿಂದ ಪಾರು ಮಾಡಿ, ಚಾಂಪಿಯನ್ ಪಟ್ಟವನ್ನು ತಂದು ಕೊಟ್ಟ
 ರೇಣು ಗೌಡರ ನಂಬಿಕಸ್ಥ ಹುಡುಗ.
ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ವಿಭಾಗದಲ್ಲೂ ಮೇಲುಗೈ ಸಾಧಿಸಿದ ಈ ಆಟಗಾರ ವೇಗದ ಎಸೆತವನ್ನು ಎಸೆದು ಅಗ್ರಕ್ರಮಾಂಕದ ಆಟಗಾರರನ್ನು ಪೆವಿಲಿಯನ್ ಗೆ ಅಟ್ಟುವ ಬಲಗೈ  ಮಾರಕ ವೇಗಿ.
ಗೂಟದ ಹಿಂದೆ ಗೂಟ ರಕ್ಷಕನಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವ ಅದ್ಭುತ ಕೀಪರ್ ಕೂಡ ಹೌದು.
ಈ ಆಟಗಾರ ಸರಣಿ ಶ್ರೇಷ್ಠ ಪ್ರಶಸ್ತಿಗಾಗಿ ಪಡೆದ
3 ದ್ವಿಚಕ್ರ ವಾಹನಗಳನ್ನು ಪಡೆದ ಸಾಹಸಿ ಆಟಗಾರ.
ಕೇರಳದಲ್ಲಿ ನಡೆದ ಪಂದ್ಯಾಟದಲ್ಲಿ,
ಜಾಲಹಳ್ಳಿಯ ರಂಗ ಇಲೆವೆನ್ ಶಾರ್ಟ್ ಪಿಚ್ ಪಂದ್ಯಾಟ ಹಾಗೂ ಇತ್ತೀಚಿಗಷ್ಟೇ ಕೆ.ಆರ್.ಪುರಂ ನಲ್ಲಿ ನಡೆದ
“ನಾಗ ಇಲೆವೆನ್ ಟ್ರೋಫಿ” ಯ ಸರಣಿ ಶ್ರೇಷ್ಠ ಪ್ರಶಸ್ತಿ ಈತನ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿ.
ಇವರು ಕಳೆದ 14 ವರ್ಷಗಳಿಂದ “ಫ್ರೆಂಡ್ಸ್ ಬೆಂಗಳೂರು” ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.ಇದಲ್ಲದೇ ಸಾಗರ್ ಭಂಡಾರಿ ತನ್ನ ಹುಟ್ಟೂರು ಉಡುಪಿಯ ತಂಡಗಳಲ್ಲೂ ತನ್ನ ಶ್ರೇಷ್ಠ ಪ್ರದರ್ಶನವನ್ನು ನೀಡಿರುತ್ತಾರೆ.
ಮುಂಬಯಿಯಲ್ಲಿ ನಡೆಯುವ ಪ್ರತಿಷ್ಟಿತ ಪಂದ್ಯಾವಳಿಗಳಲ್ಲಿ ಸಾಗರ್ ಭಂಡಾರಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಕಳೆದೆರಡು ವರ್ಷಗಳಿಂದ ಹೆಚ್ಚಾಗಿ ನಡೆಯುತ್ತಿರುವ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳಲ್ಲಿ ಕೋಲಾರ,ತುಮಕೂರು,ತಿಪಟೂರಿನ ಪ್ರಸಿದ್ಧ ತಂಡಗಳನ್ನು ಪ್ರತಿನಿಧಿಸಿ ಸ್ಪೋಟಕ ಅರ್ಧಶತಕಗಳಿಸಿ ಬೃಹತ್ ಅಭಿಮಾನಿ ಬಳಗವನ್ನೇ ಸಂಪಾದಿಸಿರುತ್ತಾರೆ.
      *ಸಾಗರದಾಚೆಯೂ ಸಾಗರನ ಕೀರ್ತಿ*
ಸಾಗರನ ಕೀರ್ತಿ ಸಾಗರದಾಚೆಯೂ ಪಸರಿಸಿರುವುದು ರಾಜ್ಯ ಟೆನ್ನಿಸ್ ಕ್ರಿಕೆಟ್‌ ಗೆ ಹೆಮ್ಮೆಯ ವಿಷಯ.
“ಕುವೈಟ್ ರೈಡರ್ಸ್” ತಂಡದ ಪರವಾಗಿ ಆಡುವ ಇವರು
ಹಲವಾರು ದುಬಾರಿ ಮೊತ್ತದ ಪಂದ್ಯಾಕೂಟಗಳಲ್ಲಿ,
ಅತ್ಯುತ್ತಮ ದಾಂಡಿಗ ಪ್ರಶಸ್ತಿಯನ್ನು ಪಡೆದು
ಗಲ್ಫ್ ರಾಷ್ಟ್ರದ ಪ್ರೇಕ್ಷಕರನ್ನು ಗಮನ ಸೆಳೆದವರು.
 ಸಾಗರ್ ರ ಸಹೋದರ ಸಂದೀಪ್ ಭಂಡಾರಿ ಮುಂಬಯಿ ಅಂಡರ್ 22 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿ,ನಂತರದ ದಿನಗಳಲ್ಲಿ
ಮುಂಬಯಿಯ ಪ್ರತಿಷ್ಠಿತ ಪಯ್ಯಡೆ ಸ್ಪೋರ್ಟ್ಸ್ ಕ್ಲಬ್,
ರಣಜಿ ಟ್ರೋಫಿ ತಂಡ, ಕರ್ನಾಟಕ  ಪ್ರೀಮಿಯರ್ ಲೀಗ್, ಬರೋಡಾ ಪ್ರೀಮಿಯರ್ ಲೀಗ್, ಮುಂಬಯಿ ಪ್ರೀಮಿಯರ್ ಲೀಗ್, ಮಂಗಳೂರು ಪ್ರೀಮಿಯರ್ ಲೀಗ್, ಗೋವಾ ಪ್ರೀಮಿಯರ್ ಲೀಗ್, ರಾಜಸ್ಥಾನ ಪ್ರೀಮಿಯರ್ ಲೀಗ್, ಗುಜರಾತ್ ಪ್ರೀಮಿಯರ್ ಲೀಗ್, ಮಲೇಷಿಯಾ ಪ್ರೀಮಿಯರ್ ಲೀಗ್, ಮುಂಬಯಿ ತಂಡದ ಪರವಾಗಿ ದುಬೈನಲ್ಲಿ ಆಡಿ,M.R.F. ಫೌಂಡೇಶನ್ ಚೆನ್ನೈ ಹಾಗೂ
ಅಕ್ಬರ್ ಟ್ರಾವೆಲ್ಸ್ ತಂಡದ ಪರವಾಗಿ D.Y ಪಾಟೀಲ್  ಟಿ.20 ಪಂದ್ಯವನ್ನಾಡಿದ ಹಿರಿಮೆ ಇವರದು.ತನ್ನ ವೇಗದ ಪಡೆ ಮೂಲಕ ಸ್ಕಾರ್ಪಿಯನ್ ವೇಗದ ಎಸೆತಗಾರ ಹಾಗೂ ಆಲ್ ಇಂಡಿಯಾ ಎರಡನೇ ವೇಗದ ಎಸೆತಗಾರ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಣ್ಣನ ಹಾದಿ ಹಿಡಿದ “ಸಾಗರ್ ಭಂಡಾರಿ” ಯವರನ್ನು
ಅವರ ಬಲಶಾಲಿ ಹೊಡೆತಗಳಿಗಾಗಿ
ಟೆನ್ನಿಸ್ ಬಾಲ್ ನ “ಕ್ರಿಸ್ ಗೇಯ್ಲ್” ಬಿರುದನ್ನು ನೀಡಿರುತ್ತಾರೆ.
2018 ರ ಆಗಸ್ಟ್ ನಲ್ಲಿ S.R.B ಸ್ಪೋರ್ಟ್ಸ್ ಪ್ರಾರಂಭಿಸಿ ಕ್ರೀಡಾಪಟುಗಳಿಗೆ
ರಿಯಾಯಿತಿ ದರದಲ್ಲಿ S.R.B ಅತ್ಯುತ್ತಮ ಬ್ರಾಂಡ್ ನ ಕ್ರೀಡಾಪರಿಕರಗಳನ್ನು ಒದಗಿಸಿ,ಕ್ರೀಡೆಗೆ ಸಂಪೂರ್ಣ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಉಡುಪಿಯ ಕೀರ್ತಿಯನ್ನು ಸಾಗರದಾಚೆಯೂ ಕೊಂಡೊಯ್ದ “ಸಾಗರ್ ಭಂಡಾರಿ” ಯವರಿಗೆ
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.ರಾಜ್ಯ,ರಾಷ್ಟ್ರ ಮಟ್ಟದಲ್ಲಿ ನಿಮ್ಮ ಕೀರ್ತಿ ಪಸರಿಸಲಿ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

twenty − 16 =