Home ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿ.. ಐಪಿಎಲ್.. ಟೆಸ್ಟ್ ಕ್ರಿಕೆಟ್.. 4 ತಿಂಗಳು, 3 ಫಾರ್ಮ್ಯಾಟ್.. ಒಬ್ಬ ರಾಹುಲ್..!

ಚಾಂಪಿಯನ್ಸ್ ಟ್ರೋಫಿ.. ಐಪಿಎಲ್.. ಟೆಸ್ಟ್ ಕ್ರಿಕೆಟ್.. 4 ತಿಂಗಳು, 3 ಫಾರ್ಮ್ಯಾಟ್.. ಒಬ್ಬ ರಾಹುಲ್..!

ಚಾಂಪಿಯನ್ಸ್ ಟ್ರೋಫಿ.. ಐಪಿಎಲ್.. ಟೆಸ್ಟ್ ಕ್ರಿಕೆಟ್.. 4 ತಿಂಗಳು, 3 ಫಾರ್ಮ್ಯಾಟ್.. ಒಬ್ಬ ರಾಹುಲ್..!

ಚಾಂಪಿಯನ್ಸ್ ಟ್ರೋಫಿ.. ಐಪಿಎಲ್.. ಟೆಸ್ಟ್ ಕ್ರಿಕೆಟ್.. 4 ತಿಂಗಳು, 3 ಫಾರ್ಮ್ಯಾಟ್.. ಒಬ್ಬ ರಾಹುಲ್..!

ಮಂಗಳೂರಲ್ಲಿ ರಾತ್ರಿ ಬಸ್ ಹತ್ತಿದವನು ಬೆಳಗ್ಗೆ ಬೆಂಗಳೂರಲ್ಲಿ ಇಳಿದು ಬಿಡುತ್ತಿದ್ದ..

ರಾಜಧಾನಿಯಲ್ಲಿ ದಿನಪೂರ್ತಿ ಕ್ರಿಕೆಟ್ ಆಡಿ ಮತ್ತೆ ಬಸ್ ಹತ್ತಿ ಮಂಗಳೂರಿಗೆ ಮರಳಿದವನ ಮುಂದೆ ಮತ್ತದೇ ಸವಾಲು..

ಚಿಕ್ಕ ವಯಸ್ಸಲ್ಲಿ ದೊಡ್ಡ ಸವಾಲುಗಳಿಗೆ ಸಡ್ಡು ಹೊಡೆದು ನಿಲ್ಲುವುದನ್ನು ಅವನು ಕಲಿತಿದ್ದ.. ಸಣ್ಣ ವಯಸ್ಸಲ್ಲೇ ಅವನನ್ನು ಮಾನಸಿಕವಾಗಿ ಗಟ್ಟಿಗೊಳಿಸಿದ್ದರು ಅವನ ಕ್ರಿಕೆಟ್ ಗುರು ಸ್ಯಾಮುಯೆಲ್ ಜಯರಾಜ್..

ಅಡಿಪಾಯ ಗಟ್ಟಿಮುಟ್ಟಾಗಿರುವ ಕಾರಣಕ್ಕೆ
ಈಗ ಅದೆಂಥಾ ಸವಾಲೇ ಇರಲಿ.. ಲೀಲಾಜಾಲವಾಗಿ ಎದುರಿಸುತ್ತಾನೆ.. ಎದೆಯೊಡ್ಡಿ ನಿಲ್ಲುತ್ತಾನೆ.

ಅದು ದಕ್ಷಿಣ ಆಫ್ರಿಕಾವಿರಲಿ, ಆಸ್ಟ್ರೇಲಿಯಾವಿರಲಿ.. ಇಂಗ್ಲೆಂಡ್ ಇರಲಿ.. ಬ್ಯಾಟಿಂಗ್ ಸುಲಭವಲ್ಲದ ನೆಲಗಳಲ್ಲಿ ರಾಹುಲ್ ನೆಲ ಕಚ್ಚಿ ಆಡುತ್ತಾನೆ. ಅದು ತುಂಬಾ ವರ್ಷಗಳ ಹಿಂದೆ ಕಲಿತ ಪಾಠ.

ಗುಣಮಟ್ಟದ ಆಟಗಾರನಿಗೆ ತಾನು ಯಾವ ನೆಲದಲ್ಲಿ, ಯಾವ ಸನ್ನಿವೇಶದಲ್ಲಿ ಆಡುತ್ತಿದ್ದೇನೆ ಎಂಬುದೆಲ್ಲಾ ಮುಖ್ಯವಾಗುವುದಿಲ್ಲ. ಆಟವಷ್ಟೇ ಮುಖ್ಯವಾಗುತ್ತದೆ.
ಲೀಡ್ಸ್’ನಲ್ಲಿ ಇಂಗ್ಲೆಂಡ್ ವಿರುದ್ಧ ಕೆ.ಎಲ್ ರಾಹುಲ್ ಆಡಿದ ಶತಕದ ಇನ್ನಿಂಗ್ಸ್ ಅವನ ಅಗಾಧ ಪ್ರತಿಭೆಗೆ ಮತ್ತೊಂದು ಸಾಕ್ಷಿಯಷ್ಟೇ.
ಬಾರಿಸಿದ 9 ಟೆಸ್ಟ್ ಶತಕಗಳಲ್ಲಿ ಎಂಟು ಭಾರತದಿಂದ ಹೊರಗೆ.. ಅದರಲ್ಲಿ 6 ಶತಕಗಳು ಬಂದಿರುವುದು SENA (S.A, Eng, Aus, NZ) ದೇಶಗಳಲ್ಲಿ. ರಾಹುಲ್’ನ ಶ್ರೇಷ್ಠತೆಗೆ ಹಿಡಿದ ಕನ್ನಡಿಯಿದು.

ಕ್ರಿಕೆಟ್ ಹುಟ್ಟಿದ ನೆಲದಲ್ಲಿ ಕ್ರಿಕೆಟ್’ನ ಮೂರೂ ಪ್ರಕಾರಗಳಲ್ಲಿ ಶತಕ ಗಳಿಸುವುದೆಂದರೆ ಅದು ಎಲ್ಲರಿಗೂ ಸಾಧ್ಯವಾಗದು.

-ಲಾರ್ಡ್ಸ್’ನಲ್ಲಿ ಟೆಸ್ಟ್ ಶತಕ
-ಲೀಡ್ಸ್’ನಲ್ಲಿ ಟೆಸ್ಟ್ ಶತಕ
-ಓವಲ್’ನಲ್ಲಿ ಟೆಸ್ಟ್ ಶತಕ
-ಲೀಡ್ಸ್’ನಲ್ಲಿ ಏಕದಿನ ಶತಕ
-ಓಲ್ಡ್ ಟ್ರಾಫರ್ಡ್’ನಲ್ಲಿ ಟಿ20 ಶತಕ
ಕೆ.ಎಲಾ ರಾಹುಲ್ ಏಕೆ special ಕ್ರಿಕೆಟರ್ ಎಂಬುದಕ್ಕೆ ಸಾಕ್ಷಿ ಇದು.

ಚಾಂಪಿಯನ್ಸ್ ಟ್ರೋಫಿಯಲ್ಲಿ 6ನೇ ಕ್ರಮಾಂಕದಲ್ಲಿ ತೋರಿಸಿದ ತಾಕತ್ತು.. ಐಪಿಎಲ್’ನಲ್ಲಿ ಬೇರೆ ಬೇರೆ ಕ್ರಮಾಂಕಗಳಲ್ಲಿ ಆಡಿ ಗಳಿಸಿದ 500+ ರನ್’ಗಳು.. ಈಗ ಇಂಗ್ಲೆಂಡ್’ನಲ್ಲಿ ಆರಂಭಿಕನಾಗಿ ಬಾರಿಸಿದ ಟೆಸ್ಟ್ ಶತಕ..
Be it any condition, any position or any situation KL Rahul always stood tall✨
-ಸುದರ್ಶನ್

LEAVE A REPLY

Please enter your comment!
Please enter your name here

twenty − 15 =

ಚಾಂಪಿಯನ್ಸ್ ಟ್ರೋಫಿ.. ಐಪಿಎಲ್.. ಟೆಸ್ಟ್ ಕ್ರಿಕೆಟ್.. 4 ತಿಂಗಳು, 3 ಫಾರ್ಮ್ಯಾಟ್.. ಒಬ್ಬ ರಾಹುಲ್..!

ಚಾಂಪಿಯನ್ಸ್ ಟ್ರೋಫಿ.. ಐಪಿಎಲ್.. ಟೆಸ್ಟ್ ಕ್ರಿಕೆಟ್.. 4 ತಿಂಗಳು, 3 ಫಾರ್ಮ್ಯಾಟ್.. ಒಬ್ಬ ರಾಹುಲ್..! ಮಂಗಳೂರಲ್ಲಿ ರಾತ್ರಿ ಬಸ್ ಹತ್ತಿದವನು ಬೆಳಗ್ಗೆ ಬೆಂಗಳೂರಲ್ಲಿ ಇಳಿದು ಬಿಡುತ್ತಿದ್ದ.. ರಾಜಧಾನಿಯಲ್ಲಿ ದಿನಪೂರ್ತಿ ಕ್ರಿಕೆಟ್ ಆಡಿ ಮತ್ತೆ ಬಸ್ ಹತ್ತಿ ಮಂಗಳೂರಿಗೆ ಮರಳಿದವನ ಮುಂದೆ ಮತ್ತದೇ ಸವಾಲು.. ಚಿಕ್ಕ ವಯಸ್ಸಲ್ಲಿ ದೊಡ್ಡ ಸವಾಲುಗಳಿಗೆ ಸಡ್ಡು ಹೊಡೆದು ನಿಲ್ಲುವುದನ್ನು ಅವನು ಕಲಿತಿದ್ದ.. ಸಣ್ಣ ವಯಸ್ಸಲ್ಲೇ ಅವನನ್ನು ಮಾನಸಿಕವಾಗಿ ಗಟ್ಟಿಗೊಳಿಸಿದ್ದರು ಅವನ ಕ್ರಿಕೆಟ್ ಗುರು ಸ್ಯಾಮುಯೆಲ್ ಜಯರಾಜ್.. ಅಡಿಪಾಯ ಗಟ್ಟಿಮುಟ್ಟಾಗಿರುವ ಕಾರಣಕ್ಕೆ ಈಗ ಅದೆಂಥಾ ಸವಾಲೇ ಇರಲಿ.. ಲೀಲಾಜಾಲವಾಗಿ ಎದುರಿಸುತ್ತಾನೆ.. ಎದೆಯೊಡ್ಡಿ ನಿಲ್ಲುತ್ತಾನೆ. ಅದು ದಕ್ಷಿಣ ಆಫ್ರಿಕಾವಿರಲಿ, ಆಸ್ಟ್ರೇಲಿಯಾವಿರಲಿ.. ಇಂಗ್ಲೆಂಡ್ ಇರಲಿ.. ಬ್ಯಾಟಿಂಗ್ ಸುಲಭವಲ್ಲದ ನೆಲಗಳಲ್ಲಿ ರಾಹುಲ್ ನೆಲ ಕಚ್ಚಿ ಆಡುತ್ತಾನೆ. ಅದು ತುಂಬಾ ವರ್ಷಗಳ ಹಿಂದೆ ಕಲಿತ ಪಾಠ. ಗುಣಮಟ್ಟದ ಆಟಗಾರನಿಗೆ ತಾನು ಯಾವ ನೆಲದಲ್ಲಿ, ಯಾವ ಸನ್ನಿವೇಶದಲ್ಲಿ ಆಡುತ್ತಿದ್ದೇನೆ ಎಂಬುದೆಲ್ಲಾ ಮುಖ್ಯವಾಗುವುದಿಲ್ಲ. ಆಟವಷ್ಟೇ ಮುಖ್ಯವಾಗುತ್ತದೆ. ಲೀಡ್ಸ್’ನಲ್ಲಿ ಇಂಗ್ಲೆಂಡ್ ವಿರುದ್ಧ ಕೆ.ಎಲ್ ರಾಹುಲ್ ಆಡಿದ ಶತಕದ ಇನ್ನಿಂಗ್ಸ್

Send this to a friend