ಕ್ರಿಕೆಟ್ಪಂದ್ಯದ ಫಲಿತಾಂಶವನ್ನೇ ಬುಡಮೇಲು ಮಾಡುವ ಓವರ್ ಥ್ರೋ ಗಳು

ಪಂದ್ಯದ ಫಲಿತಾಂಶವನ್ನೇ ಬುಡಮೇಲು ಮಾಡುವ ಓವರ್ ಥ್ರೋ ಗಳು

-

- Advertisment -spot_img
ಒಂದೇ ಒಂದು ಓವರ್ ಥ್ರೋ ವರ್ಲ್ಡ್ ಚಾಂಪಿಯನ್ ಅನ್ನು ಬದಲಿಸಿತ್ತು.
ಹೌದು 2019 ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಮಾರ್ಟಿನ್ ಗುಪ್ಟಿಲ್ ಎಸೆದ ಒಂದು ಬೆನ್ ಸ್ಟಾಕ್ ಬ್ಯಾಟಿಗೆ ತಾಗಿ ಓವರ್ ಥ್ರೋವಾಗಿ ಮಾರ್ಪಾಡಾಗಿ ಬೌಂಡರಿ ಗೆರೆಯನ್ನು ಕಂಡು ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಚಾಂಪಿಯನ್  ಆಗಿ ಮೂಡಿ ಬರುತ್ತದೆ.
ನಾವು ಅಷ್ಟೊಂದು  ಈ ಥ್ರೋಗಳ ವಿಷಯದಲ್ಲಿ ಗಮನ ಕೊಡದಿದ್ದರೂ ಬೌಂಡರಿ ಗೆರೆಯಿಂದ ಎಸೆಯುವ ಕೆಲವು ಥ್ರೋಗಳು ಫಲಿತಾಂಶವನ್ನು ಬದಲಿಸುವುದು ಎನ್ನುವುದು ಸತ್ಯ.
 ಹೌದು ಈ ಬೌಂಡರಿ ಲೈನ್ ನಿಂದ ಎಸೆಯುವ ಥ್ರೋ ಗಳಿಗೆ  ಅಷ್ಟೊಂದು ಮಹತ್ವ ಇರುತ್ತದೆ ಕ್ರಿಕೆಟ್ ನಲ್ಲಿ. ಸ್ಟಂಪ್ ಮೂರನೇ ಎರಡರ ಎತ್ತರ ಭಾಗ ಮತ್ತು  ವಿಕೆಟ್ ಕೀಪರ್ ನ ಎದೆ ಲೆವೆಲ್ ಇವೆರಡರ ನಡುವಿನ ಎತ್ತರದಲ್ಲಿ ಫುಲ್ಲಾಗಿ ಬರುವ ಥ್ರೋ ಗಳು ವಿಕೆಟ್ ಕೀಪರ್ ಎನಿಸಿಕೊಂಡತಾನಿಗೆ ಕಲೆಕ್ಟ್ ಮಾಡಲು ಸುಲಭ ಎನಿಸುತ್ತದೆ ಮತ್ತು ಈ ಥ್ರೋಗಳಲ್ಲಿ ರನ್ನೌಟ್ ಅವಕಾಶ ಜಾಸ್ತಿ ಇರುತ್ತದೆ. ಆದರೆ ಎಪ್ಪತ್ತು-ಎಂಬತ್ತು ಯಾರ್ಡ್ ನಿಂದ  ಫುಲ್ಲಾಗಿ  ಕಷ್ಟಸಾಧ್ಯ.
 ಸಚಿನ್ ತೆಂಡೂಲ್ಕರ್ ಈ ವಿಷಯದಲ್ಲಿ ತುಂಬಾ ಪಕ್ಕಾ ಥ್ರೋಗಳನ್ನು ಎಸೆಯುತ್ತಿದ್ದರು. ಇಂಜಮಾಮ್-ಉಲ್-ಹಕ್ ಕೂಡ ರನ್ನಿಂಗ್ ನಲ್ಲಿ ತುಂಬಾ ಲೇಜಿ ಆಗಿದ್ದರೂ ಥ್ರೋ ವಿಷಯದಲ್ಲಿ ಮಾತ್ರ ಪಕ್ಕಾ ಆಗಿದ್ದ. ಪಾಕಿಸ್ತಾನದ ಇಜಾಸ್ ಅಹ್ಮದ್, ವಕಾರ್ ಯೂನಿಸ್, ಶ್ರೀಲಂಕದ ಚಾಮಿಂಡ ವಾಸ್,ಸನತ್ ಜಯಸೂರ್ಯ, ಸೌತ್ ಆಫ್ರಿಕಾದ ಡೇಲ್ ಸ್ಟೈನ್, ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ , ಮೈಕಲ್ ಕ್ಲಾರ್ಕ್, ವೆಸ್ಟ್ ಇಂಡೀಸಿನ ಕಾರ್ಲ್ ಹೂಪರ್, ಇಂಗ್ಲೆಂಡಿನ ಅಲನ್ ಮುಲಾಲಿ, ಜಿಂಬಾಬ್ವೆ ಹೀತ್ ಸ್ಟ್ರೀಕ್, ನ್ಯೂಜಿಲೆಂಡ್ ನ ಕ್ರಿಸ್ ಕೇರ್ನ್ಸ್…….  ಇವರುಗಳ ಥ್ರೋಗಳು ಫಲಿತಾಂಶದ ದಿಕ್ಕನ್ನೇ ಬದಲಾಯಿಸಬಲ್ಲದ್ದು.
 ಈ ಥ್ರೋಗಳಿಗೆ ಬ್ಯಾಟ್ಸ್ ಮನ್ ಗಳು ಎರಡನೇ ರನ್ ಓಡಲು ಹಿಂದೇಟು ಹಾಕುತ್ತಿದ್ದರು. ಬೌಂಡರಿ ಗೆರೆಯಿಂದ ಫುಲ್ ಲೆಂತ್ ಆಗಿ ಬರುವ ಥ್ರೋ ಗಳನ್ನು ವೀಕ್ಷಿಸಲು ಏನೋ ಒಂತರ ಖುಷಿ ಇರುತ್ತದೆ ಪ್ರೇಕ್ಷಕರಲ್ಲಿ. ಇಲ್ಲಿ ಶಕ್ತಿ ಸಾಮರ್ಥ್ಯ ಬಲದ ವಿಷಯವಲ್ಲ  ಅಡಗಿರುವುದು ಕೇವಲ ಸ್ಕಿಲ್ ಅಷ್ಟೇ. ಮೊಹಮದ್ ಕೈಫ್,ಕ್ಯಾಲಿಸ್ ಗಿಂತ ಬಲವಾಗಿ ಥ್ರೋ ಮಾಡಬಲ್ಲ.
 ಒಟ್ಟಿನಲ್ಲಿ ಕ್ರಿಕೆಟ್ ಮೂರನೆಯ ಅಂಗವಾದ ಫೀಲ್ಡಿಂಗ್ ನಲ್ಲಿ ಬೌಂಡರಿಯಿಂದ ಬರುವ ಥ್ರೋಗಳು ಪಂದ್ಯದ ಫಲಿತಾಂಶವನ್ನು ಅದಲು-ಬದಲು ಮಾಡಿದ ಅದೆಷ್ಟೋ ದೃಷ್ಟಾಂತಗಳು ನಮ್ಮ ಸ್ಮೃತಿಪಟಲದಲ್ಲಿ ಅಚ್ಚೊತ್ತಿವೆ.
🖋️ ಅಶೋಕ್ ಹೆಗ್ಡೆ ಹೆಬ್ರಿ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

one × four =

Latest news

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026 ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮ...

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS ಕಪ್ 2026

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS CUP 2026 CHIVAS ಎಫ್‌ಸಿ ವತಿಯಿಂದ ಅಂಡರ್-21 ಫ್ಲಡ್‌ಲೈಟ್ ಟರ್ಫ್ ಲೀಗ್ ಟೂರ್ನಮೆಂಟ್ “CHIVAS ಕಪ್ 2026”...

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...
- Advertisement -spot_imgspot_img

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ ಮಂಗಳೂರು: ಎಂಜಾಯ್ ಟೈಟನ್ಸ್ ಯುನೈಟೆಡ್ ಆಯೋಜಿಸಿದ್ದ ಜಿಎಸ್‌ಬಿ ಸಮುದಾಯದ ಪ್ರತಿಷ್ಠಿತ “ಎಂಜಾಯ್...

Must read

- Advertisement -spot_imgspot_img

You might also likeRELATED
Recommended to you