ಒಂದೇ ಒಂದು ಓವರ್ ಥ್ರೋ ವರ್ಲ್ಡ್ ಚಾಂಪಿಯನ್ ಅನ್ನು ಬದಲಿಸಿತ್ತು.ಹೌದು 2019 ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಮಾರ್ಟಿನ್ ಗುಪ್ಟಿಲ್ ಎಸೆದ ಒಂದು ಬೆನ್ ಸ್ಟಾಕ್ ಬ್ಯಾಟಿಗೆ ತಾಗಿ ಓವರ್ ಥ್ರೋವಾಗಿ ಮಾರ್ಪಾಡಾಗಿ ಬೌಂಡರಿ ಗೆರೆಯನ್ನು ಕಂಡು ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಚಾಂಪಿಯನ್ ಆಗಿ ಮೂಡಿ ಬರುತ್ತದೆ.
ನಾವು ಅಷ್ಟೊಂದು ಈ ಥ್ರೋಗಳ ವಿಷಯದಲ್ಲಿ ಗಮನ ಕೊಡದಿದ್ದರೂ ಬೌಂಡರಿ ಗೆರೆಯಿಂದ ಎಸೆಯುವ ಕೆಲವು ಥ್ರೋಗಳು ಫಲಿತಾಂಶವನ್ನು ಬದಲಿಸುವುದು ಎನ್ನುವುದು ಸತ್ಯ.
ಹೌದು ಈ ಬೌಂಡರಿ ಲೈನ್ ನಿಂದ ಎಸೆಯುವ ಥ್ರೋ ಗಳಿಗೆ ಅಷ್ಟೊಂದು ಮಹತ್ವ ಇರುತ್ತದೆ ಕ್ರಿಕೆಟ್ ನಲ್ಲಿ. ಸ್ಟಂಪ್ ಮೂರನೇ ಎರಡರ ಎತ್ತರ ಭಾಗ ಮತ್ತು ವಿಕೆಟ್ ಕೀಪರ್ ನ ಎದೆ ಲೆವೆಲ್ ಇವೆರಡರ ನಡುವಿನ ಎತ್ತರದಲ್ಲಿ ಫುಲ್ಲಾಗಿ ಬರುವ ಥ್ರೋ ಗಳು ವಿಕೆಟ್ ಕೀಪರ್ ಎನಿಸಿಕೊಂಡತಾನಿಗೆ ಕಲೆಕ್ಟ್ ಮಾಡಲು ಸುಲಭ ಎನಿಸುತ್ತದೆ ಮತ್ತು ಈ ಥ್ರೋಗಳಲ್ಲಿ ರನ್ನೌಟ್ ಅವಕಾಶ ಜಾಸ್ತಿ ಇರುತ್ತದೆ. ಆದರೆ ಎಪ್ಪತ್ತು-ಎಂಬತ್ತು ಯಾರ್ಡ್ ನಿಂದ ಫುಲ್ಲಾಗಿ ಕಷ್ಟಸಾಧ್ಯ.
ಸಚಿನ್ ತೆಂಡೂಲ್ಕರ್ ಈ ವಿಷಯದಲ್ಲಿ ತುಂಬಾ ಪಕ್ಕಾ ಥ್ರೋಗಳನ್ನು ಎಸೆಯುತ್ತಿದ್ದರು. ಇಂಜಮಾಮ್-ಉಲ್-ಹಕ್ ಕೂಡ ರನ್ನಿಂಗ್ ನಲ್ಲಿ ತುಂಬಾ ಲೇಜಿ ಆಗಿದ್ದರೂ ಥ್ರೋ ವಿಷಯದಲ್ಲಿ ಮಾತ್ರ ಪಕ್ಕಾ ಆಗಿದ್ದ. ಪಾಕಿಸ್ತಾನದ ಇಜಾಸ್ ಅಹ್ಮದ್, ವಕಾರ್ ಯೂನಿಸ್, ಶ್ರೀಲಂಕದ ಚಾಮಿಂಡ ವಾಸ್,ಸನತ್ ಜಯಸೂರ್ಯ, ಸೌತ್ ಆಫ್ರಿಕಾದ ಡೇಲ್ ಸ್ಟೈನ್, ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ , ಮೈಕಲ್ ಕ್ಲಾರ್ಕ್, ವೆಸ್ಟ್ ಇಂಡೀಸಿನ ಕಾರ್ಲ್ ಹೂಪರ್, ಇಂಗ್ಲೆಂಡಿನ ಅಲನ್ ಮುಲಾಲಿ, ಜಿಂಬಾಬ್ವೆ ಹೀತ್ ಸ್ಟ್ರೀಕ್, ನ್ಯೂಜಿಲೆಂಡ್ ನ ಕ್ರಿಸ್ ಕೇರ್ನ್ಸ್……. ಇವರುಗಳ ಥ್ರೋಗಳು ಫಲಿತಾಂಶದ ದಿಕ್ಕನ್ನೇ ಬದಲಾಯಿಸಬಲ್ಲದ್ದು.
ಈ ಥ್ರೋಗಳಿಗೆ ಬ್ಯಾಟ್ಸ್ ಮನ್ ಗಳು ಎರಡನೇ ರನ್ ಓಡಲು ಹಿಂದೇಟು ಹಾಕುತ್ತಿದ್ದರು. ಬೌಂಡರಿ ಗೆರೆಯಿಂದ ಫುಲ್ ಲೆಂತ್ ಆಗಿ ಬರುವ ಥ್ರೋ ಗಳನ್ನು ವೀಕ್ಷಿಸಲು ಏನೋ ಒಂತರ ಖುಷಿ ಇರುತ್ತದೆ ಪ್ರೇಕ್ಷಕರಲ್ಲಿ. ಇಲ್ಲಿ ಶಕ್ತಿ ಸಾಮರ್ಥ್ಯ ಬಲದ ವಿಷಯವಲ್ಲ ಅಡಗಿರುವುದು ಕೇವಲ ಸ್ಕಿಲ್ ಅಷ್ಟೇ. ಮೊಹಮದ್ ಕೈಫ್,ಕ್ಯಾಲಿಸ್ ಗಿಂತ ಬಲವಾಗಿ ಥ್ರೋ ಮಾಡಬಲ್ಲ.
ಒಟ್ಟಿನಲ್ಲಿ ಕ್ರಿಕೆಟ್ ಮೂರನೆಯ ಅಂಗವಾದ ಫೀಲ್ಡಿಂಗ್ ನಲ್ಲಿ ಬೌಂಡರಿಯಿಂದ ಬರುವ ಥ್ರೋಗಳು ಪಂದ್ಯದ ಫಲಿತಾಂಶವನ್ನು ಅದಲು-ಬದಲು ಮಾಡಿದ ಅದೆಷ್ಟೋ ದೃಷ್ಟಾಂತಗಳು ನಮ್ಮ ಸ್ಮೃತಿಪಟಲದಲ್ಲಿ ಅಚ್ಚೊತ್ತಿವೆ.
️ ಅಶೋಕ್ ಹೆಗ್ಡೆ ಹೆಬ್ರಿ