ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಕಂಗಾಲಾದ ಜನ ಸಮುದಾಯಕ್ಕೆ ಪರಿಹಾರ ನೀಡಲು ಸಹಾಯ ಆಗಬೇಕು ಅನ್ನುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಮಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್(ಎಂ.ಆರ್.ಪಿ.ಎಲ್) ನ ಶಿಕ್ಷಕರು ಮತ್ತು ನಿರ್ವಹಣಾ ಅಧಿಕಾರಿಗಳು ಸೇರಿ ಸಂಗ್ರಹಿಸಿದ ಸುಮಾರು ಒಂದು ಲಕ್ಷದ ತೊಂಬತ್ತನಾಲ್ಕು ಸಾವಿರದ ಐನೂರು ರೂಪಾಯಿ (1,94,500) ಯನ್ನು ಶಾಲೆಯ ನೂತನ ಪ್ರಿನ್ಸಿಪಾಲ್ ಶ್ರೀ ಗೌತಮ್ ಶೆಟ್ಟಿ ಇವರು ಮಂಗಳೂರು ಜಿಲ್ಲಾ ಆಯುಕ್ತರಾದ ಜಿ. ಸಿಂಧು ರೂಪೇಶ್ ಇವರಿಗೆ ಹಸ್ತಾಂತರ ಮಾಡಿದರು.