ಕೋಟೇಶ್ವರ ಟ್ರೋಫಿ–2026: ಫ್ರೆಂಡ್ಸ್ ಬೆಂಗಳೂರು ಚಾಂಪಿಯನ್, ಶೆಟ್ಟಿ ಎಂಪಾಯರ್ ಕುಂದಾಪುರ ರನ್ನರ್ಸ್

ಕೋಟೇಶ್ವರ ಟ್ರೋಫಿ–2026: ಫ್ರೆಂಡ್ಸ್ ಬೆಂಗಳೂರು ಚಾಂಪಿಯನ್, ಶೆಟ್ಟಿ ಎಂಪಾಯರ್ ಕುಂದಾಪುರ ರನ್ನರ್ಸ್

ಕೋಟೇಶ್ವರ: ರಾಜೇಶ್ ಪ್ರಭು ಹಾಗೂ ಸಚಿನ್ ಕೋಟೇಶ್ವರ ಅವರ ನೇತೃತ್ವದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಹೊನಲುಬೆಳಕಿನ ಕ್ರಿಕೆಟ್ ಪಂದ್ಯಾವಳಿ ಕೋಟೇಶ್ವರ ಟ್ರೋಫಿ–2026 ಯಶಸ್ವಿಯಾಗಿ ಮುಕ್ತಾಯಗೊಂಡಿತು. ಕೋಟೇಶ್ವರದ ಶ್ರೀ ಕಾಳಾವರ ವರದರಾಜ್ ಶೆಟ್ಟಿ ಪ್ರಥಮ ದರ್ಜೆ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಫ್ರೆಂಡ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಶೆಟ್ಟಿ ಎಂಪಾಯರ್, ಕುಂದಾಪುರ ತಂಡ ರನ್ನರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ರೇಣು ಗೌಡ ಸಾರಥ್ಯದ ಫ್ರೆಂಡ್ಸ್ ಬೆಂಗಳೂರು ಚಾಂಪಿಯನ್

ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಫ್ರೆಂಡ್ಸ್ ಬೆಂಗಳೂರು ತಂಡ ಪ್ರಶಸ್ತಿಯನ್ನು ಗೆದ್ದು ₹3,00,033 ನಗದು ಬಹುಮಾನ ಪಡೆದುಕೊಂಡಿತು. ರನ್ನರ್ಸ್ ಪ್ರಶಸ್ತಿ ಪಡೆದ ಶೆಟ್ಟಿ ಎಂಪಾಯರ್, ಕುಂದಾಪುರ ತಂಡ ₹1,50,003 ನಗದು ಬಹುಮಾನಕ್ಕೆ ಭಾಜನವಾಯಿತು.

ವೈಯಕ್ತಿಕ ಪ್ರಶಸ್ತಿ ವಿಜೇತರು

ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವಿವಿಧ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

  • ಮ್ಯಾನ್ ಆಫ್ ದಿ ಸೀರೀಸ್: ಸಾಗರ್ ಭಂಡಾರಿ
  • ಫೈನಲ್ ಪಂದ್ಯ – ಮ್ಯಾನ್ ಆಫ್ ದಿ ಮ್ಯಾಚ್: ಸಾಗರ್ ಭಂಡಾರಿ
  • ಸೆಮಿಫೈನಲ್–1 – ಮ್ಯಾನ್ ಆಫ್ ದಿ ಮ್ಯಾಚ್: ಚವನ್ ಭಂಡಾರಿ (ಗಿಫ್ಟ್ ಹ್ಯಾಂಪರ್)
  • ಸೆಮಿಫೈನಲ್–2 – ಮ್ಯಾನ್ ಆಫ್ ದಿ ಮ್ಯಾಚ್: ಸಾಗರ್ ಭಂಡಾರಿ
  • ಬೆಸ್ಟ್ ಬ್ಯಾಟ್ಸ್‌ಮನ್: ಸ್ವಸ್ತಿಕ್ ನಾಗರಾಜ್ (ರಾಧ್ಯ ಪಾಂಚಜನ್ಯ, ಕೋಟ)
  • ಬೆಸ್ಟ್ ಫೀಲ್ಡರ್: ನಿರಂಜನ್ (ಫ್ರೆಂಡ್ಸ್ ಬೆಂಗಳೂರು)
  • ಬೆಸ್ಟ್ ವಿಕೆಟ್ ಕೀಪರ್: ಪ್ರಸಿದ್ದ ಆಚಾರ್ಯ (ಶೆಟ್ಟಿ ಎಂಪಾಯರ್)
  • ಬೆಸ್ಟ್ ಬೌಲರ್: ಚ್ಯವಾನ್ ಭಂಡಾರಿ (ಶೆಟ್ಟಿ ಎಂಪಾಯರ್)

ಸಾಗರ್ ಭಂಡಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ

ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಸಾಗರ್ ಭಂಡಾರಿ, ಸೆಮಿಫೈನಲ್ ಪಂದ್ಯದಲ್ಲಿಯೂ ತಮ್ಮ ಸಾಮರ್ಥ್ಯವನ್ನು ಮೆರೆದರು. ಟೂರ್ನಿಯುದ್ದಕ್ಕೂ ಗಮನಾರ್ಹ ಪ್ರದರ್ಶನ ನೀಡಿದ ಅವರು ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ರಾಷ್ಟ್ರೀಯ ಮಟ್ಟದ ಈ ಹೊನಲುಬೆಳಕಿನ ಕ್ರಿಕೆಟ್ ಪಂದ್ಯಾವಳಿ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಪಂದ್ಯಗಳ ರಸದೌತಣ ನೀಡಿತು. ವಿಜೇತ ತಂಡಗಳು ಹಾಗೂ ವೈಯಕ್ತಿಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು.

Leave a Reply

Your email address will not be published. Required fields are marked *