Categories
ಕ್ರಿಕೆಟ್

ಗಾವಸ್ಕರ್ ಬಾರ್ಡರ್ ಟೆಸ್ಟ್ ಸರಣಿ ಭಾರತದ ಕೈವಶ-ಆಸೀಸ್ ಮುಖ ಭಂಗ

ಆಸ್ಟ್ರೇಲಿಯಾದಲ್ಲಿ ಸರಣಿ ಆಡುವುದೆಂದರೆ ಕೇವಲ ಮೈದಾನದಲ್ಲಿ ತಂಡದೊಡನೆ ಮಾತ್ರ ಆಡುವುದಲ್ಲ. ಅಲ್ಲಿನ ಮಾಜಿ ಆಟಗಾರರು, ಮಾಧ್ಯಮಗಳು ಮುಂತಾದವರ ಮೈಂಡ್ಗೇಮ್‌ಗಳಿಗೂ ಉತ್ತರ ನೀಡಬೇಕು. ಜೊತೆಗೆ ಪಂದ್ಯದ ಸಮಯದಲ್ಲಿ ಆಸ್ಟ್ರೇಲಿಯನ್ ಆಟಗಾರರು ಹಾಗೂ ಪ್ರೇಕ್ಷಕರ ಹರಿತವಾದ ಮಾತುಗಳಿಗೂ ಕಿವಿ ಕೊಡಬೇಕು.
ಈ ಬಾರಿಯ ಟಿ20 ಹಾಗೂ ಓಡಿಐ ಸರಣಿ ಏನೇ ಇರಲಿ, ಟೆಸ್ಟ್ ಸರಣಿಯಂತೂ ಭಾರತ ಕ್ರಿಕೆಟ್ ತಂಡಕ್ಕೆ ಸ್ಮರಣೀಯ ಅನ್ನಿಸದೇ ಇರದು. ಆಡಿದ ಪ್ರಥಮ ಇನ್ನಿಂಗ್ಸ್‌ನಲ್ಲಿ ಕೇವಲ ಮೂವತ್ತಾರು ರನ್‌ಗಳಿಗೆ ಆಲೌಟ್ ಆಗಿ ಮುಜುಗರ ಅನುಭವಿಸಬೇಕಾಯಿತು. ಅದೇ ಕಾರಣದಿಂದ ಸೋಲುಂಟಾಯಿತು. ಆದರೆ ಎರಡನೇ ಟೆಸ್ಟ್ ಪಂದ್ಯದಿಂದ ಒಬ್ಬರಲ್ಲ ಒಬ್ಬರ ದಿಟ್ಟ ಹೋರಾಟದಿಂದ ಭಾರತ ಜಯಗಳಿಸುವಂತಾಯಿತು. ಒಟ್ಟಾರೆಯಾಗಿ ಸರಣಿಯನ್ನು 2-1 ರಿಂದ ಭಾರತ ಗೆದ್ದಿತು.
ಇದು ಸಾಮಾನ್ಯ ಸಂಗತಿ, ಆದರೆ ಆಸ್ಟ್ರೇಲಿಯಾಕ್ಕೆ ಹೊರಡುವ ಮೊದಲು ಸಾಕಷ್ಟು ಆಟಗಾರರು ಗಾಯಾಳಾದ್ದರಿಂದ ಇದ್ದುದರಲ್ಲೇ ಉತ್ತಮ ತಂಡವನ್ನು ಕಳುಹಿಸಿಕೊಡಲಾಗಿತ್ತು. ಆದರೆ ಆಲ್ಲಿ ಆಗಿದ್ದೇ ಬೇರೆ, ಸರಣಿಯ ನಾಲ್ಕೂ ಪಂದ್ಯವನ್ನು ಇಬ್ಬರು ಆಡಿದ್ದು ಬಿಟ್ಟರೆ, ಮತ್ತೆಲ್ಲರೂ ಪಂದ್ಯದಿಂದ ಪಂದ್ಯಕ್ಕೆ ಬದಲಾಯಿಸಲ್ಪಟ್ಟವರೇ. ಕೆಲವರು ಕಳಪೆ ಪ್ರದರ್ಶನದಿಂದ ಹಾಗೂ ಹಲವರು ಗಾಯಾಳುವಾದ್ದರಿಂದ. ತಂಡದ ಖಾಯಂ ನಾಯಕ ಕೊಹ್ಲಿ ವೈಯಕ್ತಿಕ ಕಾರಣದಿಂದ ಭಾರತಕ್ಕೆ ವಾಪಾಸ್ ಬಂದ ನಂತರ ರಹಾನೆ ನಾಯಕನಾದರು.
ಆದರೆ ತಂಡದ ಪ್ರಮುಖ ಆಟಗಾರರು ಗಾಯಾಳಾದ್ದರಿಂದ ಕೊನೆಯ ಟೆಸ್ಟ್ ಪಂದ್ಯದ ಹೊತ್ತಿಗೆ ಭಾರತ ತನ್ನ ತಂಡದಲ್ಲಿ ಒಟ್ಟಾರೆಯಾಗಿ ಕೇವಲ 11 ವಿಕೆಟ್ ಪಡೆದಿರುವ ಬೌಲಿಂಗ್ ಪಡೆಯನ್ನು ಹೊಂದುವಂತಾಯಿತು. ಆದರೂ ಆಸ್ಟ್ರೇಲಿಯಾ ತಂಡವನ್ನು ಅದರ ಕೋಟೆಯಾದ ಬ್ರಿಸ್ಬೇನ್‌ನಲ್ಲಿ ಎರಡು ಬಾರಿ ಆಲೌಟ್ ಮಾಡಲು ಈ ಪಡೆ ಯಶಸ್ವಿಯಾಯಿತು. ಇಡೀ ಸರಣಿಯಲ್ಲಿ ಐವರು ಭಾರತೀಯರು ಟೆಸ್ಟ್ ಗೆ ಪಾದಾರ್ಪಣೆ ಮಾಡಿದರು.
ಕ್ರಿಕೆಟ್ ಅಂದರೆ ಐಪಿಎಲ್ ಮಾತ್ರ ಎಂಬ ಭಾವನೆ ಮೂಡಿರುವ ಈ ಸಮಯದಲ್ಲಿ ಈ ಸರಣಿಯ ಕೊನೆಯ ಮೂರು ಪಂದ್ಯಗಳು ಕ್ರಿಕೆಟ್ ಅಂದರೆ ಏನು ಎಂದು ತಿಳಿಸಿದವು.
                     ವಿಘ್ನೇಶ್ವರ ಮಂಜ ಮಾರಣಕಟ್ಟೆ…

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

3 × four =