ಸತತ ಎರಡನೇ ಬಾರಿಗೆ ಶಾಮನೂರು ಡೈಮಂಡ್ ಮತ್ತು ಶಿವಗಂಗಾ ಕಪ್ ಗೆದ್ದ ಫ್ರೆಂಡ್ಸ್ ಬೆಂಗಳೂರು.
ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜನಪ್ರಿಯ ಕ್ರಿಕೆಟರ್ಸ್ ದಾವಣಗೆರೆ ಇವರ ಆಶ್ರಯ ದಲ್ಲಿ 16ನೇ ಬಾರಿಗೆ ಶಾಮನೂರು ಡೈಮಂಡ್ ಮತ್ತು ಶಿವಗಂಗಾ ಕಪ್ 2023 ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಟೂರ್ನಿಯು ದಿನಾಂಕ 2೦23ರ ನವೆಂಬರ್ 30 ರಿಂದ ಡಿಸೆಂಬರ್ 3 ರ ತನಕ ಅದ್ದೂರಿಯಾಗಿ ನಡೆಯಿತು ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಯಶಸ್ವಿ ಸಂಘಟಕ,ಕ್ರೀಡಾ ಪ್ರೋತ್ಸಾಹಕರಾದ
ಜಯಪ್ರಕಾಶ್ ಗೌಡ(ಜೆ.ಪಿ)ಇವರ ಸಾರಥ್ಯದಲ್ಲಿ ನಡೆದ ಈ ಪಂದ್ಯಾಕೂಟದಲ್ಲಿ ರೇಣು ಗೌಡ ಸಾರಥ್ಯದ ಬೆಂಗಳೂರಿನ ಫ್ರೆಂಡ್ಸ್ ತಂಡ ಗೆದ್ದು ಪ್ರಥಮ ಬಹುಮಾನ INR 5,00,555 ಮತ್ತು ಶಾಮನೂರು ಡೈಮಂಡ್ ಮತ್ತು ಶಿವಗಂಗಾ ಕಪ್ ತನ್ನದಾಗಿಸಿತು. ದ್ವಿತೀಯ ಸ್ಥಾನ INR 3.00.555 ಇಝಾನ್ ಸ್ಪೋರ್ಟ್ ಉಡುಪಿ ಪಾಲಾಯಿತು.
8 ಓವರ್ ಗಳ ಪಂದ್ಯ ಗಳ ಈ ಪಂದ್ಯಾಕೂಟದಲ್ಲಿ 32 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದ ಮ್ಯಾನ್ ಅಫ್ ದ ಮ್ಯಾಚ್ ಫ್ರೆಂಡ್ಸ್ ಬೆಂಗಳೂರು ತಂಡದ ನವೀನ್ ಪಡೆದರು ಮತ್ತು ಅದೇ ತಂಡದ ಅಭಿಜಿತ್ ಟೂರ್ನಿಯ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಪಡೆದರು. ಡೇರಿನ್ ಪಿತ್ರೋಡಿ ಬೆಸ್ಟ್ ಬ್ಯಾಟ್ಸಮನ್ ಆಗಿ ಆಯ್ಕೆಯಾದರು ಹಾಗೂ ಇರ್ಫಾನ್ ಮ್ಯಾನ್ ಓಫ್ ದ ಸೀರೀಸ್ ಪ್ರಶಸ್ತಿ ಗೆದ್ದರು.
*2023-24 ರ ಋತುವಿನ ಮೂರನೇ ಪ್ರಶಸ್ತಿ ಗೆದ್ದ ಫ್ರೆಂಡ್ಸ್ ಬೆಂಗಳೂರು*
ರಾಜ್ಯದ ಬಲಿಷ್ಠ ತಂಡ ಎಂದು ಗುರುತಿಸಿಕೊಂಡ ಫ್ರೆಂಡ್ಸ್ ಬೆಂಗಳೂರಿಗೆ ಈ ಪ್ರತಿಷ್ಠಿತ ಪಂದ್ಯಾವಳಿಯನ್ನು ಗೆದ್ದ ಖ್ಯಾತಿ ಮರುಕಳಿಸಿದೆ. ಈ ಋತುವಿನಲ್ಲಿ ಹಿರಿಯೂರು ಟೂರ್ನಿ ಗೆದ್ದ ಫ್ರೆಂಡ್ಸ್ ಬೆಂಗಳೂರು ಅದಾದ ಬಳಿಕ,ಸ್ಯಾಪ್ ಕಪ್ ದಾವಣಗೆರೆ ಪಂದ್ಯಾವಳಿಯನ್ನು ಕೂಡ ಗೆದ್ದುಕೊಂಡಿತ್ತು. ಇದೀಗ ಈ ಋತುವಿನ ಮೂರನೇ ಪ್ರಶಸ್ತಿಯನ್ನು ಫ್ರೆಂಡ್ಸ್ ಬೆಂಗಳೂರು ತನ್ನ ಮಡಿಲಿಗೆ ದಕ್ಕಿಸಿಕೊಂಡಿದೆ.
ಚಾಂಪಿಯನ್ ತಂಡ ಫ್ರೆಂಡ್ಸ್ ಬೆಂಗಳೂರಿಗೆ ಇದೀಗ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಅಭಿಮಾನಿಗಳ ಪ್ರೀತಿಯ ಶುಭಾಶಯಗಳಿಗಾಗಿ ಫ್ರೆಂಡ್ಸ್ ಬೆಂಗಳೂರು ತಂಡದ ಸಾರಥಿ ರೇಣು ಗೌಡ ಇವರು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ”ತಂಡದೆಡೆಗಿನ ಪ್ರೀತಿ, ಪರಸ್ಪರ ಗೌರವ, ಸಹ ಆಟಗಾರರ ಬಗ್ಗೆ ಸಂತೋಷದ ಭಾವನೆ ತಂಡದಲ್ಲಿ ಯಶಸ್ಸು ಸಾಧಿಸುವುದು ಇವೆಲ್ಲಾ ಗುಣಗಳು ಯಾವುದೇ ತಂಡವನ್ನು ಯಶಸ್ವಿಯಾಗಿಸುತ್ತದೆ. ಅಂತಹ ಅದ್ಭುತ ತಂಡ “ಫ್ರೆಂಡ್ಸ್” ಮತ್ತು ಇಂತಹ ಸ್ನೇಹಿತರ ಗುಂಪನ್ನು ಹೊಂದಲು ತಾನು ಅದೃಷ್ಟಶಾಲಿಯಾಗಿದ್ದೇನೆ. ನಾವು ಗೆದ್ದಾಗ ಅಥವಾ ಸೋತಾಗ ನಾವು ಯಾವಾಗಲೂ ಒಟ್ಟಿಗೆ ಇರುತ್ತೇವೆ. ಏಕೆಂದರೆ ಕ್ರಿಕೆಟ್ ಎಂಬುದು ಅನಿಶ್ಚಿತತೆ. ಆದರೆ ಸ್ನೇಹಿತರು ಬಹಳ ಕಾಲ ನೆನಪಿಸಿಕೊಳ್ಳುತ್ತಾರೆ ” ಎಂದು ಸ್ಪೋರ್ಟ್ಸ್ ಕನ್ನಡದೊಂದಿಗೆ ಸಂತಸ ವ್ಯಕ್ತಪಡಿಸಿದರು.