ವಿಶ್ವಕರ್ಮ ಟ್ರೋಫಿ–2026: ನೀಲಾವರದಲ್ಲಿ ಮಾಣಿಕ್ಯ ಪ್ರೀಮಿಯರ್ ಲೀಗ್‌ಗೆ ಭರ್ಜರಿ ಸಿದ್ಧತೆ!

ವಿಶ್ವಕರ್ಮ ಟ್ರೋಫಿ–2026: ನೀಲಾವರದಲ್ಲಿ ಮಾಣಿಕ್ಯ ಪ್ರೀಮಿಯರ್ ಲೀಗ್‌ಗೆ ಭರ್ಜರಿ ಸಿದ್ಧತೆ!

ಬ್ರಹ್ಮಾವರ: ಮಾಣಿಕ್ಯ ಕ್ರಿಕೆಟರ್ಸ್ ನೀಲಾವಾರ ವತಿಯಿಂದ ಆಯೋಜಿಸಲಾಗುತ್ತಿರುವ “ಮಾಣಿಕ್ಯ ಪ್ರೀಮಿಯರ್ ಲೀಗ್ – ವಿಶ್ವಕರ್ಮ ಟ್ರೋಫಿ–2026” ಕ್ರಿಕೆಟ್ ಪಂದ್ಯಾಟಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಮಾಣಿಕ್ಯ ಕ್ರಿಕೆಟರ್ಸ್‌ನ 20 ವರ್ಷಗಳ ಕ್ರೀಡಾ ಪಯಣದ ಸಂಭ್ರಮದ ಅಂಗವಾಗಿ ನಡೆಯಲಿರುವ ಈ ಪಂದ್ಯಾಟವು ವಿಶ್ವಕರ್ಮ ಸಮಾಜದ ಪ್ರತಿಭಾವಂತ ಕ್ರಿಕೆಟಿಗರಿಗೆ ಉತ್ತಮ ವೇದಿಕೆಯಾಗಲಿದೆ.

ಅಕ್ಟೋಬರ್ 30, 31 ಹಾಗೂ ನವೆಂಬರ್ 1ರಂದು ನೀಲಾವರ ಕ್ರಾಸ್‌ನಲ್ಲಿ ಈ ಅದ್ಧೂರಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.

ಮೂರು ವಿಭಾಗಗಳಲ್ಲಿ ಪಂದ್ಯಾಟ: “ವಿಶ್ವಕರ್ಮ ಟ್ರೋಫಿ–2026” ಪಂದ್ಯಾಟವನ್ನು ಮೂರು ಪ್ರಮುಖ ವಿಭಾಗಗಳಲ್ಲಿ ಆಯೋಜಿಸಲಾಗುತ್ತಿದ್ದು, ಪ್ರತಿ ವಿಭಾಗದಲ್ಲೂ 8 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ:

  1. ಮಾಣಿಕ್ಯ ಪ್ರೀಮಿಯರ್ ಲೀಗ್ – 8 ತಂಡಗಳು
  2. ವಿಶ್ವಕರ್ಮ ಲೋಕಲ್ ಪೂಲ್ ನಲ್ಲಿ ಆಡುವ ತಂಡಗಳು – 8
  3. 3 ರಾಜ್ಯಮಟ್ಟದ ವಿಶ್ವಕರ್ಮ ಆಟಗಾರರನ್ನು ಹೊಂದಿರುವ ತಂಡಗಳು – 8 ತಂಡಗಳು

ಮೊದಲು ನೋಂದಣಿ ಮಾಡಿಕೊಳ್ಳುವ ತಂಡಗಳಿಗೆ ಆದ್ಯತೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಪಂದ್ಯಾಟದಲ್ಲಿ ಭಾಗವಹಿಸಲು ₹20,000 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.

ಆಕರ್ಷಕ ಬಹುಮಾನಗಳ ಘೋಷಣೆ:

  • ಪ್ರಥಮ ಬಹುಮಾನ: ₹2,22,222 ನಗದು ಹಾಗೂ ವಿಜೇತರ ಟ್ರೋಫಿ
  • ದ್ವಿತೀಯ ಬಹುಮಾನ: ₹1,11,111 ನಗದು ಹಾಗೂ ರನ್ನರ್-ಅಪ್ ಟ್ರೋಫಿ
  • ತೃತೀಯ ಬಹುಮಾನ: ₹55,555 ನಗದು ಹಾಗೂ ಟ್ರೋಫಿ

ವೈಯಕ್ತಿಕ ಪ್ರಶಸ್ತಿಗಳು:

  • ಸರಣಿ ಶ್ರೇಷ್ಠ ಆಟಗಾರ: 42 ಇಂಚಿನ LED TV
  • ಅತ್ಯುತ್ತಮ ದಾಂಡಿಗ: 32 ಇಂಚಿನ LED TV
  • ಅತ್ಯುತ್ತಮ ಬೌಲರ್: 32 ಇಂಚಿನ LED TV

ಸಾಮಾಜಿಕ ಕಳಕಳಿ: ಈ ವಿಶೇಷ ಪಂದ್ಯಾಟವನ್ನು ದಿವಂಗತ ಪ್ರದೀಪ್ ಆಚಾರ್ಯ ಅಡ್ಜಿಲು ಅವರ ಸ್ಮರಣಾರ್ಥ ಆಯೋಜಿಸಲಾಗುತ್ತಿದೆ. ಪಂದ್ಯಾಟದಿಂದ ಉಳಿಯುವ ಹೆಚ್ಚುವರಿ ಮೊತ್ತವನ್ನು ಮಕ್ಕಳ ಶೈಕ್ಷಣಿಕ ವೆಚ್ಚಗಳಿಗೆ ನೆರವಾಗಲು ಬಳಸಲಾಗುವುದು ಎಂಬುದು ಈ ಟೂರ್ನಿಯ ಮತ್ತೊಂದು ವಿಶೇಷತೆಯಾಗಿದೆ.

ನೇರ ಪ್ರಸಾರ: ಕರ್ನಾಟಕದ ಜನಪ್ರಿಯ ಕ್ರೀಡಾ ವಾಹಿನಿ ‘ಸ್ಪೋರ್ಟ್ಸ್ ಕನ್ನಡ’ದ ಯೂಟ್ಯೂಬ್ ಚಾನೆಲ್ (SPORTSKANNADA YouTube Channel) ಮೂಲಕ ಪಂದ್ಯಾಟದ ನೇರ ಪ್ರಸಾರ ನಡೆಯಲಿದೆ.

ನೋಂದಣಿ ಹಾಗೂ ಸಂಪರ್ಕಕ್ಕಾಗಿ:

  • ರಾಜೇಶ್ ಎನ್. ಆಚಾರ್ಯ: +91 99450 56065
  • ರಾಘವೇಂದ್ರ ಆಚಾರ್ಯ: +91 95916 06543

Leave a Reply

Your email address will not be published. Required fields are marked *