ಜಗದೀಶ್ ಗಂಗೊಳ್ಳಿ ಸಾರಥ್ಯದಲ್ಲಿ, ಶ್ರೀ ಬಬ್ಬುಸ್ವಾಮಿ ಸ್ವಯಂ ಸೇವಾ ಸಂಘ(ರಿ) ಮೇಲ್ ಗಂಗೊಳ್ಳಿ,ಸಾಧನ ನಾಯಕವಾಡಿ ಹಾಗೂ ಡಾಲ್ಫಿನ್ ಬಾವಿಕಟ್ಟೆ ತಂಡ ಕಳೆದ ಹತ್ತು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಗಳ ಜೊತೆಗೆ ಸಾಂಸ್ಕೃತಿಕ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಈ ಬಾರಿ ಫೆಬ್ರವರಿ 28 ರಿಂದ ಮಾರ್ಚ್ 1 ರ ತನಕ ಸ.ವಿ.ಪದವಿಪೂರ್ವ ಕಾಲೇಜು ಗಂಗೊಳ್ಳಿಯ ಮೈದಾನದಲ್ಲಿ ಮೂರು ದಿನಗಳ ಕಾಲ,ಪರಿಶಿಷ್ಟ ಜಾತಿ (ಎಸ್.ಸಿ) ಸಮಾಜ ಬಾಂಧವರಿಗಾಗಿ 2ನೇ ಬಾರಿಗೆ ಅಂತರ್ ರಾಜ್ಯ ಮಟ್ಟದ 90 ಗಜಗಳ ಹಗಲಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಸಿಂಚನ ಸೀಸನ್ 8 “ಶ್ರೀ ಬಬ್ಬು ಸ್ವಾಮಿ ಟ್ರೋಫಿ-2020” ಆಯೋಜಿಸಲಾಗಿದೆ.
ಪ್ರಥಮ ಪ್ರಶಸ್ತಿ ವಿಜೇತ ತಂಡ 60,060 ನಗದು ಹಾಗೂ ದ್ವಿತೀಯ ಸ್ಥಾನಿ 30,030 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರಿದ ಆಟಗಾರರಿಗೆ ನಗದು ಬಹುಮಾನ ಸಹಿತ ಬ್ಯಾಟ್ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದೆ.
ಪಂದ್ಯಾವಳಿಯ ನೇರ ಪ್ರಸಾರ “ಕ್ರಿಕ್ ಸೇ” ಬಿತ್ತರಿಸಲಿದ್ದು, “ಸ್ಪೋರ್ಟ್ಸ್ ಕನ್ನಡ” ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.
ವಿ.ಸೂ : ಆಸಕ್ತ ಪರಿಶಿಷ್ಟ ಜಾತಿ(ಎಸ್.ಸಿ) ಸಮಾಜ ಬಾಂಧವರ ತಂಡಗಳು, ಜಗದೀಶ್ ಗಂಗೊಳ್ಳಿ-9964812070 ಮೊಬೈಲ್ ನಂಬರನ್ನು ಸಂಪರ್ಕಿಸಬಹುದಾಗಿದೆ.
ಆರ್.ಕೆ.ಆಚಾರ್ಯ ಕೋಟ