ಗಂಗೊಳ್ಳಿಯಲ್ಲಿ ಅದ್ದೂರಿ ಕ್ರಿಕೆಟ್ ಕೂಟ — “NNO CUP – 2025” ಡಿಸೆಂಬರ್ 27 ಹಾಗೂ 28 ರಂದು
ಕಲಾಯ್ಸ್ ಅಲ್ಪೈನ್, ಗಂಗೊಳ್ಳಿ ಹಾಗೂ ನಮ್ಮ ನಾಡ ಒಕ್ಕೂಟ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ “NNO CUP – 2025” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28 ರಂದು ಗಂಗೊಳ್ಳಿ ಮೈದಾನದಲ್ಲಿ ನಡೆಯಲಿದೆ.
40 ಗಜಗಳ ಹೊನಲು ಬೆಳಕಿನ ಈ ಪ್ರತಿಷ್ಠಿತ ನಾಕೌಟ್ ಕ್ರಿಕೆಟ್ ಟೂರ್ನಿಯಲ್ಲಿ ಬಹುಮಾನ ಮೊತ್ತದ ನಿಟ್ಟಿನಲ್ಲಿ ವಿಶೇಷ ಗಮನ ಸೆಳೆದಿದ್ದು—
ಪ್ರಥಮ ಬಹುಮಾನ: ₹1,01,111 ಜೊತೆಗೆ ಟ್ರೋಫಿ
ದ್ವಿತೀಯ ಬಹುಮಾನ: ₹50,555 ಜೊತೆಗೆ ಟ್ರೋಫಿ
ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿ ವಿಜೇತರಿಗೆ ಬೈಕ್ ನೀಡಲಾಗುವುದು.
ಅದೇ ರೀತಿ ಟೂರ್ನಿಯ ಅತ್ಯುತ್ತಮ ಬ್ಯಾಟ್ಸ್ಮನ್ ಮತ್ತು ಅತ್ಯುತ್ತಮ ಬೌಲರ್ ಪ್ರಶಸ್ತಿ ಪುರಸ್ಕೃತರಿಗೆ ಸೈಕಲ್ ಬಹುಮಾನವಾಗಿ ನೀಡಲಾಗುತ್ತದೆ.
ನಿಯಮ ಹಾಗೂ ವಿವರಗಳು:
• ಡಿಸೆಂಬರ್ 27 – 12-2025 ರಂದು ಆರಂಭ ಸಮಾರಂಭದ ನಂತರ ಲೀಗ್ ಪಂದ್ಯಗಳು ನಡೆಯಲಿವೆ.
• ಡಿಸೆಂಬರ್ 28 – 12-2025ರಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಮೂಲಕ ಕೂಟ ಮನೆಮಾತಾಗಲಿದೆ.
• ಎಂಟ್ರಿ ಫೀಸ್ ₹12,000.
ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಯಸುವ ತಂಡಗಳು ತಮ್ಮ ನೋಂದಣಿಗಳನ್ನು ಡಿಸೆಂಬರ್ 10, 2025ರೊಳಗೆ ಪೂರ್ಣಗೊಳಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ: 9886245672 / 7892669956
ಟೂರ್ನಿಯ ನೇರ ಪ್ರಸಾರವನ್ನು ಸ್ಪೋರ್ಟ್ಸ್ ಕನ್ನಡ ಮೀಡಿಯಾ ವಾಹಿನಿಯ ಮೂಲಕ ಬಿತ್ತರಿಸಲಾಗುವುದು.
