ತುಮಕೂರು ” ಚಕ್ರವರ್ತಿ ಟ್ರೋಫಿ-2020

ತುಮಕೂರು ” ಚಕ್ರವರ್ತಿ ಟ್ರೋಫಿ-2020

ತುಮಕೂರು ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ,ಚಕ್ರವರ್ತಿ ಗೆಳೆಯರ ಬಳಗದ ನಾಯಕ ಪ್ರಕಾಶ್.ಟಿ.ಸಿ ಸಾರಥ್ಯದಲ್ಲಿ,ಕೆ.ಪಿ.ಸಿ.ಸಿ ಸದಸ್ಯರು ಕೃಷ್ಣಮೂರ್ತಿ ಪಿ.ಎನ್, ಕೆ. ಶ್ರೀಧರ್,ದನಿಯ ಕುಮಾರ್,ಚೇತನ್,ಪ್ರಸನ್ನ ಕುಮಾರ್,ಸೋಮಶೇಖರ್ ರವರ ಮಾರ್ಗದರ್ಶನದಲ್ಲಿ ಇದೇ ಬರುವ ಫೆಬ್ರವರಿ 28 ರಿಂದ ಮಾರ್ಚ್ 1 ರ ತನಕ ಮೂರು ದಿನಗಳ ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ “ಚಕ್ರವರ್ತಿ ಟ್ರೋಫಿ-2020” ಬಿ.ಹೆಚ್.ರಸ್ತೆ ತುಮಕೂರಿನ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ರಾಜ್ಯದ 20 ತಂಡಗಳು ಭಾಗವಹಿಸುವ ಪ್ರತಿಷ್ಟಿತ ಪಂದ್ಯಾವಳಿಯ ವಿಜೇತ ತಂಡ 2.5 ಲಕ್ಷ ಹಾಗೂ ರನ್ನರ್ಸ್ ತಂಡ 1.5 ಲಕ್ಷ ನಗದು ಸಹಿತ ಮಿರುಗುವ ಟ್ರೋಫಿಗಳನ್ನು ಪಡೆಯಲಿದ್ದು ಇನ್ನಿತರ ವೈಯಕ್ತಿಕ ಆಕರ್ಷಕ ಬಹುಮಾನಗಳು ಆಟಗಾರರಿಗೆ ನೀಡಲಾಗುತ್ತಿದೆ.

ಪಂದ್ಯಾವಳಿಯ ನೇರ ಪ್ರಸಾರ M.Sports ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ, ಪ್ರಸಿದ್ಧ ವೀಕ್ಷಕ ವಿವರಣೆಕಾರರಾದ ಕೋಟ ಶಿವನಾರಾಯಣ ಐತಾಳ್ ಹಾಗೂ ಪ್ರಶಾಂತ್ ಅಂಬಲಪಾಡಿ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *