Home ಕ್ರಿಕೆಟ್ ಕನಕಪುರದ ಹೂಕಂದ ಗ್ರಾಮದಲ್ಲಿ ‘ಕನಕೋತ್ಸವ – 2025’ ಕ್ರಿಕೆಟ್ ಮಹೋತ್ಸವಕ್ಕೆ ಭವ್ಯ ಸಿದ್ಧತೆ

ಕನಕಪುರದ ಹೂಕಂದ ಗ್ರಾಮದಲ್ಲಿ ‘ಕನಕೋತ್ಸವ – 2025’ ಕ್ರಿಕೆಟ್ ಮಹೋತ್ಸವಕ್ಕೆ ಭವ್ಯ ಸಿದ್ಧತೆ

ಕನಕಪುರದ ಹೂಕಂದ ಗ್ರಾಮದಲ್ಲಿ ‘ಕನಕೋತ್ಸವ – 2025’ ಕ್ರಿಕೆಟ್ ಮಹೋತ್ಸವಕ್ಕೆ ಭವ್ಯ ಸಿದ್ಧತೆ

ಕನಕಪುರದ ಹೂಕಂದ ಗ್ರಾಮದಲ್ಲಿ ‘ಕನಕೋತ್ಸವ – 2025’ ಕ್ರಿಕೆಟ್ ಮಹೋತ್ಸವಕ್ಕೆ ಭವ್ಯ ಸಿದ್ಧತೆ

ನವೆಂಬರ್ 29 ರಿಂದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್‌ಷಿಪ್

 ಕನಕಪುರದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಕನಕೋತ್ಸವ– 2025 ಚಾಂಪಿಯನ್‌ಷಿಪ್ ಸ್ಪರ್ಧೆಗೆ ನಲ್ಲಹಳ್ಳಿ ಜಿಲ್ಲಾ ಪಂಚಾಯತಿ ಹೂಕಂದ ಗ್ರಾಮದಲ್ಲಿ ವೇದಿಕೆ ಸಜ್ಜಾಗಿದೆ. ನವೆಂಬರ್ 29, 2025ರಿಂದ ಆರಂಭಗೊಳ್ಳಲಿರುವ ಈ ಕ್ರೀಡಾ ಸಮರಕ್ಕೆ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದ ಅನೇಕ ಪ್ರತಿಭಾವಂತರ ತಂಡಗಳ ಭಾಗವಹಿಸುವಿಕೆ ನಿರೀಕ್ಷಿಸಲಾಗಿದೆ.

ಯುವ ಕ್ರೀಡಾಪಟುಗಳಿಗೆ ವೇದಿಕೆ ಒದಗಿಸಿ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ತಾಲೂಕಿನ ಕ್ರೀಡಾಭಿಮಾನಿಗಳು ಈಗಾಗಲೇ ಉತ್ಸಾಹದಿಂದ ಕಾದಿದ್ದಾರೆ.

ಸ್ಪರ್ಧೆಯ ಪ್ರಮುಖ ಆಕರ್ಷಣೆಗಳಾಗಿ:

ಜಿಲ್ಲಾ ಪಂಜಾಯಿತಿ ಕಪ್

ತಾಲೂಕು ಪಂಜಾಯಿತಿ ಕಪ್

ಜಿಲ್ಲಾ ಕಪ್

ವಿಜೇತ, ರನ್ನರ್‌ಅಪ್ ಹಾಗೂ ಉತ್ತಮ ಬ್ಯಾಟ್ಸ್‌ಮನ್, ಬೌಲರ್, ಮ್ಯಾನ್ ಆಫ್ ದಿ ಸಿರೀಸ್‌ ಸೇರಿದಂತೆ ಹಲವು ವೈಯಕ್ತಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಮೂಲಕ ಕ್ರೀಡಾಪಟುಗಳ ಶ್ರೇಷ್ಠತೆಯನ್ನು ಗುರುತಿಸಿ ಗೌರವಿಸುವ ಸೂಕ್ಷ್ಮತೆಯನ್ನು ಆಯೋಜಕರಿಂದ ಕಾಣಬಹುದು.

16 ವರ್ಷಕ್ಕಿಂತ ಮೇಲ್ಪಟ್ಟ ಆಟಗಾರರನ್ನೊಳಗೊಂಡ ತಂಡಗಳು ಕಡ್ಡಾಯವಾಗಿ 12 ಆಟಗಾರರೊಂದಿಗೆ ಮೈದಾನಕ್ಕಿಳಿಯಬೇಕು. ಜನಪ್ರಿಯ Umpire ನಿಯಮಗಳ ಪ್ರಕಾರ ಪಂದ್ಯ ನಡೆಯಲಿದ್ದು, ಯಾವುದೇ ರೀತಿಯ ತಕರಾರು ಅಥವಾ ವಿವಾದಗಳಿಗೆ ಅವಕಾಶವಿರದಂತೆ ಸಂಘಟಕರು ಕ್ರಮ ಕೈಗೊಂಡಿದ್ದಾರೆ. ಎಲ್ಲಾ ತಂಡಗಳಿಗೂ ವಸತಿ ವ್ಯವಸ್ಥೆ, ಕುಡಿಯುವ ನೀರು ಮತ್ತು ಅಗತ್ಯ ಕ್ರೀಡಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಸ್ಥಳ: ಹೂಕಂದ ಗ್ರಾಮ, ದರ್ಗ ರಸ್ತೆ

ತಂಡ ನೋಂದಣಿ ಪ್ರಾರಂಭ: ನವೆಂಬರ್ 20, 2025

ನೋಂದಣಿ ಕೊನೆಯ ದಿನಾಂಕ: ನವೆಂಬರ್ 27, 2025

ಪ್ರವೇಶ ಶುಲ್ಕದೊಂದಿಗೆ ನೋಂದಣಿ ಮಾಡಿದ ತಂಡಗಳಿಗೆ ಮಾತ್ರ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ.

ಸ್ಪರ್ಧೆಯ ಯಶಸ್ವಿ ನಿರ್ವಹಣೆಗೆ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದ ಕ್ರೀಡಾಭಿಮಾನಿಗಳ ಸಹಕಾರದೊಂದಿಗೆ ಯುವ ಬಲಿಷ್ಠ ತಂಡವೊಂದು ಶ್ರಮಿಸುತ್ತಿದೆ. ಆಯೋಜನಾ ಸಮಿತಿಯ ಪ್ರತಿನಿಧಿಗಳು, “ಗ್ರಾಮೀಣ ಮಟ್ಟದಲ್ಲಿ ಕ್ರೀಡಾ ಪ್ರತಿಭೆಗಳನ್ನು ಹೊರತೆಗೆದು ರಾಜ್ಯ ಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಈ ಮಹತ್ತರ ಹೆಜ್ಜೆ. ಜನಸಾಮಾನ್ಯರ ಸಹಕಾರ ಮತ್ತು ಪ್ರೋತ್ಸಾಹವೇ ನಮ್ಮ ಶಕ್ತಿ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ರೀಡಾಪ್ರಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಯುವಕರನ್ನು ಪ್ರೋತ್ಸಾಹಿಸಲು ಸಂಘಟಕರು ವಿನಂತಿಸಿದ್ದಾರೆ.

ಎಲ್ಲಾ ಪಂದ್ಯಗಳನ್ನು ಸ್ಪೋರ್ಟ್ಸ್ ಕನ್ನಡ ಚಾನೆಲ್ ಮೂಲಕ ಲೈವ್ ಟೆಲಿಕಾಸ್ಟ್ ಮಾಡಲಾಗಿದ್ದು, ಮೈದಾನಕ್ಕಾಗಮಿಸಲು ಸಾಧ್ಯವಾಗದ ಕ್ರೀಡಾಭಿಮಾನಿಗಳಿಗೂ ಮನೆಯಿಂದಲೇ ಪಂದ್ಯ ವೀಕ್ಷಣೆಯ ಸೌಲಭ್ಯ ಕಲ್ಪಿಸಲಾಗಿದೆ.

 

LEAVE A REPLY

Please enter your comment!
Please enter your name here

2 × two =

ಕನಕಪುರದ ಹೂಕಂದ ಗ್ರಾಮದಲ್ಲಿ ‘ಕನಕೋತ್ಸವ – 2025’ ಕ್ರಿಕೆಟ್ ಮಹೋತ್ಸವಕ್ಕೆ ಭವ್ಯ ಸಿದ್ಧತೆ

ಕನಕಪುರದ ಹೂಕಂದ ಗ್ರಾಮದಲ್ಲಿ ‘ಕನಕೋತ್ಸವ – 2025’ ಕ್ರಿಕೆಟ್ ಮಹೋತ್ಸವಕ್ಕೆ ಭವ್ಯ ಸಿದ್ಧತೆ ನವೆಂಬರ್ 29 ರಿಂದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್‌ಷಿಪ್  ಕನಕಪುರದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಕನಕೋತ್ಸವ– 2025 ಚಾಂಪಿಯನ್‌ಷಿಪ್ ಸ್ಪರ್ಧೆಗೆ ನಲ್ಲಹಳ್ಳಿ ಜಿಲ್ಲಾ ಪಂಚಾಯತಿ ಹೂಕಂದ ಗ್ರಾಮದಲ್ಲಿ ವೇದಿಕೆ ಸಜ್ಜಾಗಿದೆ. ನವೆಂಬರ್ 29, 2025ರಿಂದ ಆರಂಭಗೊಳ್ಳಲಿರುವ ಈ ಕ್ರೀಡಾ ಸಮರಕ್ಕೆ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದ ಅನೇಕ ಪ್ರತಿಭಾವಂತರ ತಂಡಗಳ ಭಾಗವಹಿಸುವಿಕೆ ನಿರೀಕ್ಷಿಸಲಾಗಿದೆ. ಯುವ ಕ್ರೀಡಾಪಟುಗಳಿಗೆ ವೇದಿಕೆ ಒದಗಿಸಿ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ತಾಲೂಕಿನ ಕ್ರೀಡಾಭಿಮಾನಿಗಳು ಈಗಾಗಲೇ ಉತ್ಸಾಹದಿಂದ ಕಾದಿದ್ದಾರೆ. ಸ್ಪರ್ಧೆಯ ಪ್ರಮುಖ ಆಕರ್ಷಣೆಗಳಾಗಿ: ಜಿಲ್ಲಾ ಪಂಜಾಯಿತಿ ಕಪ್ ತಾಲೂಕು ಪಂಜಾಯಿತಿ ಕಪ್ ಜಿಲ್ಲಾ ಕಪ್ ವಿಜೇತ, ರನ್ನರ್‌ಅಪ್ ಹಾಗೂ ಉತ್ತಮ ಬ್ಯಾಟ್ಸ್‌ಮನ್, ಬೌಲರ್, ಮ್ಯಾನ್ ಆಫ್ ದಿ ಸಿರೀಸ್‌ ಸೇರಿದಂತೆ ಹಲವು ವೈಯಕ್ತಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಮೂಲಕ ಕ್ರೀಡಾಪಟುಗಳ ಶ್ರೇಷ್ಠತೆಯನ್ನು ಗುರುತಿಸಿ ಗೌರವಿಸುವ ಸೂಕ್ಷ್ಮತೆಯನ್ನು

Send this to a friend