ಡಿಸೆಂಬರ್ 7, 8 ರಂದು ಯಲಹಂಕ ರಾಕರ್ಸ್ ಟ್ರೋಫಿ-2019‌

ಡಿಸೆಂಬರ್ 7, 8 ರಂದು ಯಲಹಂಕ ರಾಕರ್ಸ್ ಟ್ರೋಫಿ-2019‌

ಡಿಸೆಂಬರ್ 7 ಮತ್ತು 8 ರಂದು ಬೆಂಗಳೂರಿನ ಬಲಿಷ್ಠ ತಂಡ ರಾಕರ್ಸ್ ಯಲಹಂಕ 2 ನೇ ಬಾರಿಗೆ ರಾಜ್ಯ ಮಟ್ಟದ ಪಂದ್ಯಾವಳಿ ಯಲಹಂಕ‌ ರಾಕರ್ಸ್ ಟ್ರೋಫಿ 2 ದಿನಗಳ ಕಾಲ ಹಗಲಿನಲ್ಲಿ ಯಲಹಂಕದ ಹೊಯ್ಸಳ ಹಾಗೂ ರಾಮಗೊಂಡನಹಳ್ಳಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಾರೆ.

ರಾಜ್ಯದ ಪ್ರತಿಷ್ಟಿತ 16 ತಂಡಗಳು ಸೆಣಸಾಡಲಿದ್ದು, ಪಂದ್ಯಾಕೂಟದ ವಿಜೇತ ತಂಡ 1 ಲಕ್ಷ ನಗದು,ರನ್ನರ್ಸ್ ತಂಡ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ. ಇನ್ನಿತರ ವೈಯಕ್ತಿಕ ಆಕರ್ಷಕ ಪ್ರಶಸ್ತಿಗಳು ಆಟಗಾರರನ್ನು ಹುರಿದುಂಬಿಸಲಿದೆ.

ನೇರ ಪ್ರಸಾರವನ್ನು M.Sports ಬಿತ್ತರಿಸಿದರೆ, ವೀಕ್ಷಕ ವಿವರಣೆ ವಿಭಾಗದ ನೇತೃತ್ವವನ್ನು ರಾಜ್ಯದ ಪ್ರಸಿದ್ಧ ಕಾಮೆಂಟೇಟರ್ ಪ್ರಶಾಂತ್ ಅಂಬಲಪಾಡಿ ವಹಿಸಲಿದ್ದಾರೆಂದು ಸ್ಪೋರ್ಟ್ಸ್ ಕನ್ನಡಕ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್.ಕೆ.ಆಚಾರ್ಯ ಕೋಟ

Leave a Reply

Your email address will not be published. Required fields are marked *