ಉದ್ಯಮಿ ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಮಿ.ಸಲೀಂ ಅಬ್ದುಲ್ ಘನಿ ಇವರ ಸಾರಥ್ಯದಲ್ಲಿ,ಟಾರ್ಗೆಟ್ ಗಯ್ಸ್ ತಂಡದ ಪ್ರೋತ್ಸಾಹದೊಂದಿಗೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಪ್ರತಿಷ್ಠಿತ M.P.L-2021 ಪ್ರಶಸ್ತಿ ನಮ್ಮ ಕುಡ್ಲ ವಾರಿಯರ್ಸ್ ಜಯಿಸಿದೆ.
ಹಗಲು ರಾತ್ರಿ ನಡೆದ ಈ ಪಂದ್ಯಾಟದಲ್ಲಿ ಸೌದಿಯ ಬಲಿಷ್ಠ ತಂಡಗಳಾದ ಎ.ಟಿ.ಎಸ್ ವಾರಿಯರ್ಸ್,ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು,ಶಾಕ್ಸ್ ಇಲೆವೆನ್,ನಮ್ಮ ಕುಡ್ಲ ವಾರಿಯರ್ಸ್,ಫೈವ್ ಸ್ಟಾರ್ ಅಡೂರು ಭಾಗವಹಿಸಿತ್ತು.
ಕ್ವಾಲಿಫೈಯರ್ ಹಂತದಲ್ಲಿ ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು,ನಮ್ಮ ಕುಡ್ಲ ವಾರಿಯರ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಪಡೆದರೆ,ಎಲಿಮಿನೇಟರ್ ಸುತ್ತಿನಲ್ಲಿ ನಮ್ಮ ಕುಡ್ಲ ವಾರಿಯರ್ಸ್ ಎ.ಟಿ.ಎಸ್ ವಾರಿಯರ್ಸ್ ತಂಡವನ್ನು ಸೋಲಿಸಿ ಫೈನಲ್ ಟಿಕೆಟ್ ಪಡೆದಿತ್ತು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕ್ಲಾಸಿಕ್ ಪುತ್ತೂರು 7 ಓವರ್ ಗಳಲ್ಲಿ 53 ರನ್ ಗಳಿಸಿತ್ತು.ಇದಕ್ಕುತ್ತರವಾಗಿ ನಮ್ಮಕುಡ್ಲ ವಾರಿಯರ್ಸ್ ನ ದಾಂಡಿಗರ ಸಾಹಸದಿಂದ 6.3 ಓವರ್ ಗಳಲ್ಲೇ ಗುರಿಯನ್ನು ಸಾಧಿಸಿ ಪ್ರಶಸ್ತಿಗೆ ಮುತ್ತಿಕ್ಕಿತು.
ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ನಮ್ಮ ಕುಡ್ಲದ ಹೈದರ್ ಆಲಿ ಉಚ್ಚಿಲ ಪರ್ಪಲ್ ಕ್ಯಾಪ್ ಹಾಗೂ ಎ.ಟಿ.ಎಸ್ ವಾರಿಯರ್ಸ್ ನ ಶಮ್ಶುದ್ದೀನ್ ಬಂಟ್ವಾಳ ಆರೆಂಜ್ ಕ್ಯಾಪ್ ಪಡೆದರು.ಸರಣಿಯುದ್ದಕ್ಕೂ ಸರ್ವಾಂಗೀಣ ಶ್ರೇಷ್ಠ ನಿರ್ವಹಣೆ ನೀಡಿದ ಹೈದರ್ ಆಲಿ ಉಚ್ಚಿಲ ಸರಣಿಶ್ರೇಷ್ಟ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು…