ಕಾರ್ಕಳ ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಷನ್ ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ ಆಯ್ಕೆ

ಕಾರ್ಕಳ ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಷನ್ ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ ಆಯ್ಕೆ

ಕಾರ್ಕಳ ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಷನ್ ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ಯ ಆಯ್ಕೆ

ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್(ರಿ) ಕಾರ್ಕಳ ಇದರ ನೂತನ‌ ಅಧ್ಯಕ್ಷರಾಗಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್,ಕಂಟ್ರಾಕ್ಟರ್,ಕ್ರೀಡಾಪಟು ಹಾಗೂ ಸಂಘಟಕರಾದ ಪ್ರಕಾಶ್ ಆಚಾರ್ಯ ಆಯ್ಕೆಯಾಗಿದ್ದಾರೆ.

ಮೂಲತಃ ಕೋಟ ಮಣೂರು ಮೂಲದವರಾದ ಪ್ರಕಾಶ್ ಆಚಾರ್ಯ ಮಣೂರು ಫ್ರೆಂಡ್ಸ್ ತಂಡದ ಆಟಗಾರರಾಗಿ,ಹಲವಾರು ಪಂದ್ಯಗಳನ್ನಾಡಿದ್ದರು ಹಾಗೂ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ.

ಪ್ರಸ್ತುತ NFH ನವೋದಯ ಫ್ರೆಂಡ್ಸ್ ಹರ್ತಟ್ಟು ಸಂಸ್ಥೆಯ ಅಧ್ಯಕ್ಷರಾಗಿ ಹಲವಾರು ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿ ಅತ್ಯುತ್ತಮ ಕ್ರೀಡಾ ಸಂಘಟಕರೆನಿಸಿಕೊಂಡಿದ್ದಾರೆ.

ಇದಲ್ಲದೇ ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಕಟ್ಟಡಾಭಿವೃದ್ಧಿ ಸಮಿತಿಯ ಟ್ರಸ್ಟಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

*ಪದಾಧಿಕಾರಿಗಳ ವಿವರ*

ಕಾರ್ಯದರ್ಶಿಯಾಗಿ ಅನೀಷ್ ತೆಂಡೂಲ್ಕರ್,

ಉಪಾಧ್ಯಕ್ಷರಾಗಿ ರಾಕೇಶ್ ಅಮೀನ್ ಮತ್ತು ಜೋಯಲ್ ಮಥಾಯಸ್,ಕೋಶಾಧಿಕಾರಿಯಾಗಿ ಸುಕೇಶ್.ಎ,ಜೊತೆ ಕಾರ್ಯದರ್ಶಿಯಾಗಿ ರೋಹನ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಹೇಶ್ ಕುಲಾಲ್,ಕ್ರೀಡಾಕಾರ್ಯದರ್ಶಿಯಾಗಿ ಸುಶಾಂತ್ ಶೆಟ್ಟಿ, ತಾಂತ್ರಿಕ ಕಾರ್ಯದರ್ಶಿಯಾಗಿ ಸುಜಿತ್ ಶೆಟ್ಟಿ, ಗೌರವ ಸಲಹೆಗಾರರಾಗಿ ಶ್ರೀನಿವಾಸ್ ಜಿ‌.ಕೆ ಪೈ,ಶಶಿಕಾಂತ್ ರೈ,ಅರುಣ್ ಕುಮಾರ್ ಶೆಟ್ಟಿ, ಎಚ್.ರಾಜಣ್ಣ,ಎನ್‌.ಎಂ ಹೆಗ್ಡೆ ಆಯ್ಕೆಯಾಗಿದ್ದಾರೆ. ಕಾನೂನು ಸಲಹೆಗಾರರಾಗಿ ಐ.ಆರ್.ಬಲ್ಲಾಳ್,ಲೆಕ್ಕ ಪರಿಶೋಧಕರಾಗಿ ಪ್ರಭಾತ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *