ಮಂಗಳೂರಿನ ನೋವಿಗೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕಳೆದ ಬಾರಿ ನಡೆಸಿದ ಡೇ ಅಂಡ್ ನೈಟ್ ಕ್ರಿಕೆಟ್ ಟೂರ್ನಮೆಂಟ್ ದೊಡ್ಡ ಯಶಸ್ಸನ್ನು ಕಂಡಿತ್ತು.
ಇದೀಗ ಈ ಸಂಸ್ಥೆಯು ಮತ್ತೆ ಮೂರನೆಯ ಬಾರಿಗೆ ಐಟಿ ಕಂಪನಿಯ ತಂಡಗಳಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಿದೆ. ಮಂಗಳೂರು ಮತ್ತು ಸುತ್ತಮುತ್ತಲಿನ IT ಕಂಪನಿಯ ಉದ್ಯೋಗಿಗಳಿಗೆ ಇದು ರೋಚಕ ಸುದ್ದಿಯಾಗಿದ್ದು ಹದಿನೈದು IT ಕಂಪನಿಯ ತಂಡಗಳು ಈ ಕಾರ್ಪೊರೇಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಪೈಪೋಟಿ ಜೋರಾಗಿರಲಿದೆ.



ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಈ ಟೂರ್ನಿಯ ಪ್ರಾಯೋಜಕರಾಗಿದ್ದು , V4 ನ್ಯೂಸ್ 24X7 ಮಾಧ್ಯಮ ಪಾಲುದಾರರಾಗಿದ್ದಾರೆ ಹಾಗೂ ರೇಡಿಯೋ ಮಿರ್ಚಿ ರೇಡಿಯೋ ಪಾರ್ಟ್ನರ್ ಆಗಿ ಸಹಕರಿಸಲಿದ್ದಾರೆ.
“ಐಟಿ ಉದ್ಯಮವು ಬಹಳಷ್ಟು ಎಂಜಿನಿಯರ್ ಗಳನ್ನು ಹೊಂದಿದೆ. ಹಲವರು ಶಾಲೆ ಅಥವಾ ಕಾಲೇಜಿನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಕೆಲಸ ಸಿಕ್ಕಿದ ನಂತರ ಆಟ ಆಡುವುದನ್ನು ನಿಲ್ಲಿಸುತ್ತಿದ್ದರು. ಕಾರ್ಪೊರೇಟ್ ತಂಡಗಳೊಂದಿಗೆ ಕ್ರಿಕೆಟ್ ಆಡುವುದರಿಂದ ಆಟದೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಅವಕಾಶ ಸಿಗುತ್ತದೆ. ಕ್ರಿಕೆಟ್ ಕೌಶಲ್ಯವನ್ನು ಪ್ರದರ್ಶಿಸಲು ಮತ್ತು ಇತರ ಪ್ರತಿಭಾವಂತ ತಂಡಗಳೊಂದಿಗೆ ಸ್ಪರ್ಧಿಸಲು ಇದು ಒಂದು ಉತ್ತಮ ಅವಕಾಶ ” ಎಂದು ಈ ಟೂರ್ನಮೆಂಟ್ ನಲ್ಲಿ ಕಾಮೆಂಟೇಟರ್ ಆಗಿ ಭಾಗವಹಿಸಲಿರುವ ಸುರೇಶ್ ಭಟ್ ಮೂಲ್ಕಿ ಹೇಳಿದ್ದಾರೆ.
ಸಹೋದ್ಯೋಗಿಗಳೊಂದಿಗೆ ಬಾಂಧವ್ಯ ಹೊಂದಲು, ಆಟವನ್ನು ಆನಂದಿಸಲು ಮತ್ತು ಕೆಲವು ಬಹುಮಾನಗಳನ್ನು ಗೆಲ್ಲಲು ಇದು ಉತ್ತಮ ಅವಕಾಶವಾಗಿದೆ.