
ಟೆನಿಸ್ಬಾಲ್ ಕ್ರಿಕೆಟ್ ನ ಶ್ರೇಷ್ಠ ಆಟಗಾರ ಅಟ್ಯಾಕರ್ಸ್ ರಮೇಶ್ ನಿಧನ
ಬೆಂಗಳೂರು-90 ರ ದಶಕದ ಟೆನಿಸ್ಬಾಲ್ ಕ್ರಿಕೆಟ್ ನ ಪ್ರಸಿದ್ಧ ಆಲ್ರೌಂಡರ್ ಆಟಗಾರ ಬೆಂಗಳೂರಿನ ಅಟ್ಯಾಕರ್ಸ್ ರಮೇಶ್ (ಸುಮಾರು 50 ವರ್ಷ ಪ್ರಾಯ) ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಉದ್ಯಾನ ನಗರಿಯ ಪ್ರಸಿದ್ಧ ತಂಡಗಳಾದ ಗುರುಬ್ರಹ್ಮ ಬೆಂಗಳೂರು,ಅಟ್ಯಾಕರ್ಸ್ ಬೆಂಗಳೂರು ಮತ್ತು ಜೈ ಕರ್ನಾಟಕ ಬೆಂಗಳೂರು, ಅತಿಥಿ ಆಟಗಾರರಾಗಿ ಜನಪ್ರಿಯ-ಜೈ ಕರ್ನಾಟಕ, ಪಡುಬಿದ್ರಿ ಫ್ರೆಂಡ್ಸ್ ತಂಡದ ಪರವಾಗಿ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನ ನೀಡಿದ ಅಟ್ಯಾಕರ್ಸ್ ರಮೇಶ್ ರಾಜ್ಯದ ಜನಪ್ರಿಯ ಟೆನಿಸ್ಬಾಲ್ ಕ್ರಿಕೆಟ್ ಆಟಗಾರರಾಗಿ ಗುರುತಿಸಿಕೊಂಡಿದ್ದರು.


1998-99 ರಲ್ಲಿ ನಡೆದಿದ್ದ ಮೊದಲ ರಂಗ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಅಟ್ಯಾಕರ್ಸ್ ತಂಡದ ಪರವಾಗಿ ಸರ್ವಾಂಗೀಣ ಆಟ ಪ್ರದರ್ಶಿಸಿದ್ದ ರಮೇಶ್ ಸರಣಿಶ್ರೇಷ್ಟ ಬಹುಮಾನ ರೂಪದಲ್ಲಿ ಏರ್ ಕೂಲರ್ ತಮ್ಮದಾಗಿಸಿಕೊಂಡಿದ್ದರು.
ಆ ಪಂದ್ಯಾಟದ ಫೈನಲ್ ನಲ್ಲಿ ಜನಪ್ರಿಯ ಬೆಂಗಳೂರು- ಅಟ್ಯಾಕರ್ಸ್ ಬೆಂಗಳೂರು ತಂಡವನ್ನು ಸೋಲಿಸಿತ್ತು.ಅಟ್ಯಾಕರ್ಸ್ ದ್ವಿತೀಯ ಸ್ಥಾನಿಯಾಗಿ ಹೊರ ಹೊಮ್ಮಿತ್ತು.



ಅಗಲಿದ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಸ್ಪೋರ್ಟ್ಸ್ ಕನ್ನಡ-ರಾಜ್ಯ ಟೆನಿಸ್ ಕ್ರಿಕೆಟ್,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮತ್ತು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನ ಪರವಾಗಿ ಪ್ರಾರ್ಥಿಸುತ್ತೇವೆ..





