ಸಮುದಾಯ ಯುವಕ ಮಂಡಲ ತಲ್ಲೂರು ಮತ್ತು ತಲ್ಲೂರು ಫ್ರೆಂಡ್ಸ್ ತಲ್ಲೂರು ಪ್ರಾಯೋಜಕತ್ವದಲ್ಲಿ ತಲ್ಲೂರು ಪರಿಸರದ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನ್ವೇಷಣೆಯ ಸದುದ್ದೇಶದಿಂದ 4 ನೇ ಬಾರಿಗೆ ತಲ್ಲೂರು ಪ್ರೀಮಿಯರ್ ಲೀಗ್
(T.P.L-4) 60 ಗಜಗಳ ಕ್ರಿಕೆಟ್ ಪಂದ್ಯಾವಳಿ ಅಕ್ಟೋಬರ್ 3 ಹಾಗೂ 4 ರಂದು ತಲ್ಲೂರು ಶಾಲಾ ಮೈದಾನದಲ್ಲಿ ನಡೆಯಲಿದೆ.
13 ತಂಡಗಳು ಸ್ಪರ್ಧಾಕಣದಲ್ಲಿದ್ದು,
ಲೀಗ್ ಮಾದರಿಯಲ್ಲಿ ಪಂದ್ಯಾವಳಿ ಸಾಗಲಿದೆ. ವಿಜೇತ ತಂಡ ಆಕರ್ಷಕ ನಗದು ಹಾಗೂ
ಪಾರಿತೋಷಕಗಳನ್ನು ಪಡೆಯಲಿದ್ದಾರೆ.