ಅಭಿಷೇಕ್ ಶರ್ಮಾ “L” ಸೆಲೆಬ್ರೇಷನ್ ಹಿಂದಿನ ಕಥೆ

ಅಭಿಷೇಕ್ ಶರ್ಮಾ “L” ಸೆಲೆಬ್ರೇಷನ್ ಹಿಂದಿನ ಕಥೆ

ಅಭಿಷೇಕ್ ಶರ್ಮಾ “L” ಸೆಲೆಬ್ರೇಷನ್ ಹಿಂದಿನ ಕಥೆ 

ಭಾರತ ತಂಡದ ಸ್ಫೋಟಕ ಓಪನರ್ ಅಭಿಷೇಕ್ ಶರ್ಮಾ ಪ್ರಸಕ್ತ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಅವರು ಮಿಂಚಿನ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಮನಗೆದ್ದರು. 39 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 74 ರನ್ ಗಳಿಸಿದ ಅಭಿಷೇಕ್, ಅರ್ಧಶತಕ ಪೂರೈಸಿದ ಕ್ಷಣದಲ್ಲೇ ವಿಶೇಷ “L” ಟೈಪ್ ಸೆಲೆಬ್ರೇಷನ್‌ ಮಾಡಿ ಗಮನ ಸೆಳೆದರು.

ಪಂದ್ಯದ ನಂತರ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಮಾತನಾಡಿದ ಅಭಿಷೇಕ್, ಈ ಸೆಲೆಬ್ರೇಷನ್‌ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದರು. “L ಎಂದರೆ ಲವ್ (ಪ್ರೀತಿ). ಈ ಆಚರಣೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರೀತಿಸುವ ಅಭಿಮಾನಿಗಳಿಗೆ ನನ್ನ ಗೌರವ,” ಎಂದು ಅಭಿಷೇಕ್ ಹೇಳಿದ್ದಾರೆ.

ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ನೀಡಿದ ಸ್ಫೋಟಕ ಆರಂಭವು ಭಾರತಕ್ಕೆ ಸುಲಭ ಗೆಲುವಿನ ದಾರಿಯನ್ನು ಕಲ್ಪಿಸಿತು. ಅಭಿಷೇಕ್ ಅವರ ಈ ವಿಶಿಷ್ಟ ಆಚರಣೆ ಪ್ರೀತಿಗೆ ಸಲ್ಲಿಸಿದ ಗೌರವ!

Leave a Reply

Your email address will not be published. Required fields are marked *