ಫ್ರೆಂಡ್ಸ್ ಗ್ರೂಪ್ ಇವರ ಆಶ್ರಯದಲ್ಲಿ ಫೆಬ್ರವರಿ 6 ಮತ್ತು 7 ರಂದು ಮೂಡುಗಿಳಿಯಾರು ಶಾಲಾ ಮೈದಾನದಲ್ಲಿ 60 ಗಜಗಳ ಕ್ರಿಕೆಟ್ ಪಂದ್ಯಾಟ “ಫ್ರೆಂಡ್ಸ್ ಟ್ರೋಫಿ-2021” ಆಯೋಜಿಸಲಾಗಿದೆ.
ಫೆಬ್ರವರಿ 6 ಶನಿವಾರದಂದು 24 ವಯೋಮಾನದ ಒಳಗಿನ ಆಟಗಾರರನ್ನೊಳಗೊಂಡ ತಂಡ ಹಾಗೂ ಫೆಬ್ರವರಿ 7 ರವಿವಾರದಂದು ಆಯಾ ಏರಿಯಾದ ಆಟಗಾರರ ತಂಡ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಪಂದ್ಯಾಕೂಟದ ವಿಜೇತ ತಂಡ 22 ಸಹಸ್ರ ನಗದು,ದ್ವಿತೀಯ ಸ್ಥಾನಿ 11ಸಹಸ್ರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಮತ್ತು ಎಲ್ಲಾ ವೈಯಕ್ತಿಕ ಬಹುಮಾನಗಳ ರೂಪದಲ್ಲಿ S.R.B Sports Jersey ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ಪಡೆದ ಆಟಗಾರನಿಗೆ ಬೈಸಿಕಲ್ ನೀಡಲಾಗುತ್ತಿದೆ.
ಪಂದ್ಯಾವಳಿಯ ಸಭಾಕಾರ್ಯಕ್ರಮದಲ್ಲಿ ವಿಶೇಷ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ.