ಉಡುಪಿ-ಯಶಸ್ವಿ ಸ್ಪೋರ್ಟ್ಸ್ ಕ್ಲಬ್ ಮೂಡುಬೆಳ್ಳೆ ಇವರ ಆಶ್ರಯದಲ್ಲಿ ಏಪ್ರಿಲ್ 2 ರವಿವಾರದಂದು ಮೂಡುಬೆಳ್ಳೆ ಕಾಲೇಜು ಮೈದಾನದಲ್ಲಿ ನಡೆದ ಮೂಡುಬೆಳ್ಳೆ ಪ್ರೀಮಿಯರ್ ಲೀಗ್ 2023-ಸೀಸನ್ 4 ರ ಪ್ರಶಸ್ತಿಯನ್ನು ಎಮ್.ಜೆ.ಸಿ ಮೂಡುಬೆಳ್ಳೆ ತಂಡ ಜಯಿಸಿದೆ.
ಮೂಡುಬೆಳ್ಳೆ ಪರಿಸರದ ಪ್ರತಿಭಾನ್ವಿತ ಆಟಗಾರರ ಅನ್ವೇಷಣೆಯ ಸದುದ್ದೇಶದಿಂದ ಹಮ್ಮಿಕೊಂಡ ಈ ಪಂದ್ಯಾಟದಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು.
ಅಂತಿಮವಾಗಿ ಫೈನಲ್ ನಲ್ಲಿ ಎಮ್.ಜೆ.ಸಿ ಮೂಡುಬೆಳ್ಳೆ ತಂಡ ಭಜರಂಗಿ ಕ್ರಿಕೆಟರ್ಸ್ ಮೂಡುಬೆಳ್ಳೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಹಾಗೂ
ಬ್ರೂಟಲ್ ವಾರಿಯರ್ಸ್ ತೃತೀಯ ಸ್ಥಾನ ತನ್ನದಾಗಿಸಿಕೊಂಡಿತು.
ಫೈನಲ್ ನ ಪಂದ್ಯಶ್ರೇಷ್ಟ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಸುದೇಶ್ ಆಚಾರ್ಯ ಎಮ್.ಜೆ.ಸಿ ಮೂಡುಬೆಳ್ಳೆ ಪಡೆದುಕೊಂಡರೆ,ಅನಿಕೇತ್ ಎಂಟರ್ಪ್ರೈಸಸ್ ಎಡ್ಮೇರ್ ನ ಚಂದ್ರಕಾಂತ್ ಬೆಸ್ಟ್ ಫೀಲ್ಡರ್,ಭಜರಂಗಿ ಮೂಡುಬೆಳ್ಳೆಯ ಪುರುಷೋತ್ತಮ್ ಬೆಸ್ಟ್ ಬ್ಯಾಟರ್ ಹಾಗೂ ಪಂದ್ಯಾಟದುದ್ದಕ್ಕೂ ಶ್ರೇಷ್ಠ ಆಲ್ರೌಂಡರ್ ಪ್ರದರ್ಶನ ನೀಡಿದ ಅನಿತ್ ಮೂಡುಬೆಳ್ಳೆ ಸರಣಿಶ್ರೇಷ್ಟ ಗೌರವಕ್ಕೆ ಭಾಜನರಾದರು…