ಕ್ರಿಕೆಟ್ಮಗಳು ತಂದ ಅದೃಷ್ಟ, ಪುತ್ರಿ ಜನನದ ನಂತರ ಮೊದಲ ಶತಕ ಬಾರಿಸಿದ...

ಮಗಳು ತಂದ ಅದೃಷ್ಟ, ಪುತ್ರಿ ಜನನದ ನಂತರ ಮೊದಲ ಶತಕ ಬಾರಿಸಿದ ಕನ್ನಡಿಗ

-

- Advertisment -spot_img

ಮಗಳು ತಂದ ಅದೃಷ್ಟ, ಪುತ್ರಿ ಜನನದ ನಂತರ ಮೊದಲ ಶತಕ ಬಾರಿಸಿದ ಕನ್ನಡಿಗ

     

ಕೆ.ಎಲ್ ರಾಹುಲ್ ಅವರಿಗೆ ಪುತ್ರಿ ಅದೃಷ್ಟ ತಂದಿದ್ದಾಳೆ. ಮಗಳ ಜನನದ ನಂತರ ರಾಹುಲ್ ಮೊದಲ ಶತಕ ಸಿಡಿಸಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಹುಲ್ ಅಮೋಘ ಶತಕ ಬಾರಿಸಿದ್ದರು.
ಗುಜರಾತ್ ಟೈಟನ್ಸ್ ವಿರುದ್ಧ ಭಾನುವಾರ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಅಬ್ಬರಿಸಿದ್ದ ಕೆ.ಎಲ್ ರಾಹುಲ್ 65 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್’ಗಳ ನೆರವಿನಿಂದ ಅಜೇಯ 112 ರನ್ ಸಿಡಿಸಿದ್ದರು. ಐದು ಐಪಿಎಲ್ ವೃತ್ತಿಜೀವನದಲ್ಲಿ ರಾಹುಲ್ ಗಳಿಸಿದ ಐದನೇ ಶತಕ.

2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಶತಕ ಬಾರಿಸಿದ ನಂತರ ಐಪಿಎಲ್’ನಲ್ಲಿ ಶತಕ ಬಾರಿಸಲು ರಾಹುಲ್ ಅವರಿಗೆ ಸಾಧ್ಯವಾಗಿರಲಿಲ್ಲ. 2023 ಮತ್ತು 2024ರಲ್ಲಿ ಶತಕವಿಲ್ಲದೆ ಐಪಿಎಲ್ ಟೂರ್ನಿ ಮುಗಿಸಿದ್ದ ರಾಹುಲ್ ಈ ಬಾರಿ ಮಗಳು ಹುಟ್ಟಿದ ನಂತರ ಐಪಿಎಲ್ ಶತಕ ಸಿಡಿಸಿದ್ದಾರೆ.

ರಾಹುಲ್ ಅವರ ಪತ್ನಿ ಆತಿಯಾ ಶೆಟ್ಟಿ ಮಾರ್ಚ್ 24ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ರಾಹುಲ್ ಮತ್ತು ಆತಿಯಾ ದಂಪತಿ ತಮ್ಮ ಪುತ್ರಿಗೆ ಇವರಾ ವಿಪುಲಾ ರಾಹುಲ್ (Evaarah Vipula Rahul) ಎಂದು ನಾಮಕರಣ ಮಾಡಿದ್ದಾರೆ.

ಕೆ.ಎಲ್ ರಾಹುಲ್ ಬಾರಿಸಿರುವ ಐಪಿಎಲ್ ಶತಕಗಳು
100* (64 ಎಸೆತ), ಮುಂಬೈ ಇಂಡಿಯನ್ಸ್ ವಿರುದ್ಧ: ವಾಂಖೆಡೆ ಕ್ರೀಡಾಂಗಣ (ಮುಂಬೈ), 2019
132* (69 ಎಸೆತ), ರಾಹುಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ: ದುಬೈ, 2020
103* (60 ಎಸೆತ), ಮುಂಬೈ ಇಂಡಿಯನ್ಸ್ ವಿರುದ್ಧ: ಬ್ರೆಬೋರ್ನ್ ಕ್ರೀಡಾಂಗಣ (ಮುಂಬೈ), 2022
103* (62 ಎಸೆತ), ಮುಂಬೈ ಇಂಡಿಯನ್ಸ್ ವಿರುದ್ಧ: ವಾಂಖೆಡೆ ಕ್ರೀಡಾಂಗಣ (ಮುಂಬೈ), 2022
112* (65 ಎಸೆತ), ಗುಜರಾತ್ ಟೈಟನ್ಸ್ ವಿರುದ್ಧ: ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣ (ದೆಹಲಿ), 2019

ಗುಜರಾತ್ ಟೈಟನ್ಸ್ ವಿರುದ್ಧ ಶತಕ ಬಾರಿಸಿದ ರಾಹುಲ್, ಟಿ20 ಕ್ರಿಕೆಟ್’ನಲ್ಲಿ ಅತೀ ವೇಗವಾಗಿ 8 ಸಾವಿರ ರನ್ ಪೂರ್ತಿಗೊಳಿಸಿದ ಭಾರತದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ರಾಹುಲ್ 224ನೇ ಟಿ20 ಇನ್ನಿಂಗ್ಸ್’ನಲ್ಲಿ 8 ಸಾವಿರ ರನ್’ಗಳ ಮೈಲುಗಲ್ಲು ಸ್ಥಾಪಿಸುವ ಮೂಲಕ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಅವರ ಹೆಸರಲ್ಲಿದ್ದ ಭಾರತೀಯ ದಾಖಲೆಯನ್ನು ಪುಡಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ 243 ಟಿ20 ಇನ್ನಿಂಗ್ಸ್’ಗಳಲ್ಲಿ 8 ಸಾವಿರ ರನ್’ಗಳ ದಾಖಲೆ ಬರೆದಿದ್ದರು.

ಟಿ20 ಕ್ರಿಕೆಟ್’ಲ್ಲಿ ಅತೀ ವೇಗವಾಗಿ 8 ಸಾವಿರ ರನ್ ಕಲೆ ಹಾಕಿರುವ ವಿಶ್ವದಾಖಲೆ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಅವರ ಹೆಸರಲ್ಲಿದೆ. ಕ್ರಿಸ್ ಗೇಲ್ 213 ಇನ್ನಿಂಗ್ಸ್’ಗಳಲ್ಲಿ ಈ ಸಾಧನೆ ಮಾಡಿದ್ದರೆ, 2ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್ ಅಜಂ 218 ಇನ್ನಿಂಗ್ಸ್’ಗಳಲ್ಲಿ 8 ಸಾವಿರ ಟಿ20 ರನ್ ಪೂರ್ತಿಗೊಳಿಸಿದ್ದಾರೆ.

ಟಿ20 ಕ್ರಿಕೆಟ್’ಲ್ಲಿ ಅತೀ ವೇಗವಾಗಿ 8000 ರನ್
1. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 213 ಇನ್ನಿಂಗ್ಸ್
2. ಬಾಬರ್ ಅಜಮ್ (ಪಾಕಿಸ್ತಾನ): 218 ಇನ್ನಿಂಗ್ಸ್
3. ಕೆ.ಎಲ್ ರಾಹುಲ್ (ಭಾರತ): 224 ಇನ್ನಿಂಗ್ಸ್
4. ವಿರಾಟ್ ಕೊಹ್ಲಿ (ಭಾರತ): 243 ಇನ್ನಿಂಗ್ಸ್
5. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ): 244 ಇನ್ನಿಂಗ್ಸ್

LEAVE A REPLY

Please enter your comment!
Please enter your name here

3 × four =

Latest news

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ

  ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ Maharaja Trophy: ಜೂನ್‌ 20 ರಿಂದ ಟೂರ್ನಿ ಆರಂಭ, ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಪಂದ್ಯ ಆಯೋಜನೆ ಐದನೇ ಆವೃತ್ತಿಯ...
- Advertisement -spot_imgspot_img

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಉಡುಪಿ ಜಿಲ್ಲೆಯ ಮಲ್ಪೆಯ...

ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ

ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ ಕಾಮಧೇನು‌ ಗೋಶಾಲೆ ಮಹಾಸಂಘ ಟ್ರಸ್ಟ್(ರಿ)ನಂಚಾರು ಇಲ್ಲಿರುವ ಗೋವುಗಳಿಗಾಗಿ 12 ನೇ...

Must read

- Advertisement -spot_imgspot_img

You might also likeRELATED
Recommended to you