
ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ (ರಿ) ವತಿಯಿಂದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 4 ಆಯೋಜನೆ
2022ರಲ್ಲಿ ಆರಂಭವಾಗಿ ಯಶಸ್ವಿಯಾಗಿ 3 ಸೀಸನ್ಗಳನ್ನು ಪೂರೈಸಿರುವ ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ (ರಿ) ಲೆಜೆಂಡ್ಸ್ ಕ್ರಿಕೆಟ್ ಲೀಗ್ ನ 4 ನೇ ಆವೃತ್ತಿ (ಸೀಸನ್ 4) ಸದ್ಯದಲ್ಲೇ ಆರಂಭವಾಗಲಿದೆ. ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ (ರಿ) (SSCC) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 2025ರ ಹಿರಿಯರ ಕ್ರಿಕೆಟ್ ಹಬ್ಬ ಆಯೋಜನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಸುರತ್ಕಲ್ ನಲ್ಲಿ ಕಳೆದ ವಾರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಏಪ್ರಿಲ್ ನಲ್ಲಿ ಟೂರ್ನಿ ಆಯೋಜನೆಗೊಳ್ಳಲಿದೆ.

ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ (ರಿ) ಇದರ ಆಶ್ರಯದಲ್ಲಿ ಏಪ್ರಿಲ್ 5 ಮತ್ತು 6 ರಂದು ಸುರತ್ಕಲ್ಲಿನ ಗೋವಿಂದ ದಾಸ್ ಕಾಲೇಜು ಮೈದಾನದಲ್ಲಿ 45 ವರ್ಷ ಮೇಲ್ಪಟ್ಟ ಹಿರಿಯರಿಗಾಗಿ ಕ್ರಿಕೆಟ್ ಟೂರ್ನಮೆಂಟ್ ‘ಲೆಜೆಂಡ್ಸ್ ಕ್ರಿಕೆಟ್ ಲೀಗ್ -2025’ ಆಯೋಜಿಸಲಾಗಿದೆ. ಈ ಟೂರ್ನಮೆಂಟ್‌ನಲ್ಲಿ ರಾಜ್ಯದ ವಿವಿಧ ಕಡೆಗಳಿಂದ ತಂಡಗಳು ಭಾಗವಹಿಸಲಿವೆ.

ಟೂರ್ನಮೆಂಟ್ ಗೆಲ್ಲುವ ತಂಡಕ್ಕೆ ವಿಜೇತರ ಟ್ರೋಫಿ ಹಾಗೂ 1.00,004 ರೂ. ನಗದು ನೀಡಲಾಗುತ್ತದೆ. ರನ್ನರ್ ಅಪ್ ತಂಡಕ್ಕೆ 50,004 ರೂ ಹಾಗೂ ರನ್ನರ್ ಅಪ್ ಟ್ರೋಫಿ ಲಭಿಸುತ್ತದೆ. ಈ ಬಾರಿ ಕೂಡಾ ಮ್ಯಾಚ್ ಅಫ್ ದಿ ಮ್ಯಾಚ್, ಶ್ರೇಷ್ಠ ಫೀಲ್ಡರ್, ಶ್ರೇಷ್ಠ ಬೌಲರ್, ಶ್ರೇಷ್ಠ ಬ್ಯಾಟ್ಸ್ ಮನ್ ಪ್ರಶಸ್ತಿ ನೀಡಲಾಗುತ್ತದೆ.
ಎರಡು ದಿನಗಳ ಕಾಲ ಹಿರಿಯರ ಕ್ರಿಕೆಟ್ ಹಬ್ಬ- ಲೆಜೆಂಡ್ಸ್ ಕ್ರಿಕೆಟ್ ಲೀಗ್ -2025 ಸೀಸನ್ 4ರ ಪಂದ್ಯಗಳು ನಡೆಯಲಿವೆ. ಆಯೋಜಕರು ಈಗಾಗಲೇ ಈ ಮಹತ್ವದ ಟೂರ್ನಿ ಆಯೋಜನೆಗೆ ಸಿದ್ದತೆ ಶುರು ಮಾಡಿದ್ದು ಪಂದ್ಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.




