“ಇದು ಮಾನವೀಯತೆಯ ಪಂದ್ಯಾಟ,ಅಗಲಿದ ಕುಂದಕನ್ನಡದ ಸಿನಿ ಕವಿ ದಿ.ಅಶೋಕ್ ನೀಲಾವರ ಮಗಳ ವೈದ್ಯಕೀಯ ವೆಚ್ಚಕ್ಕಾಗಿ ಬೇಕಾಗಿದೆ ದಾನಿಗಳು ಹಾಗೂ ಸಹೃದಯಿ ಕ್ರೀಡಾಪ್ರೇಮಿಗಳ ನೆರವಿನ ಹಸ್ತ”
ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ಕುಂದಾಪುರ ಕನ್ನಡದ ಸಿನಿ ಕವಿತೆಗಳ ಸಾಹಿತಿ ದಿ.ಅಶೋಕ್ ನೀಲಾವರ ಇವರ ಸ್ಮರಣಾರ್ಥ ಅವರ ಮಗಳ ವೈದ್ಯಕೀಯ ವೆಚ್ಚದ ಸಹಾಯಾರ್ಥವಾಗಿ,ಮಾಣಿಕ್ಯ ಕ್ರಿಕೆಟರ್ಸ್ ನೀಲಾವರ ಇವರ ಆಶ್ರಯದಲ್ಲಿ ವಿಶ್ವಕರ್ಮ ಸಮಾಜ ಬಾಂಧವರಿಗಾಗಿ “ಅನೀ ಟ್ರೋಫಿ-2021” ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲಾಗಿದೆ.
ನವೆಂಬರ್ 6 ಮತ್ತು 7 ರಂದು ಆರೂರು ಶಾಲಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 34,567 ರೂ,ದ್ವಿತೀಯ ಸ್ಥಾನಿ 23,456 ರೂ ನಗದು ಸಹಿತ ಶಾಶ್ವತ ಫಲಕಗಳನ್ನು ಪಡೆಯಲಿದ್ದಾರೆ. ಅತ್ಯುತ್ತಮ ನಿರ್ವಹಣೆ ನೀಡುವ ಆಟಗಾರರಿಗೆ ವೈಯಕ್ತಿಕ ಆಕರ್ಷಕ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾವಳಿಯ ನೇರ ಪ್ರಸಾರ ಬಿತ್ತರಗೊಳ್ಳಲಿದೆ, ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಸಹಾಯ ಮಾಡಲಿಚ್ಚಿಸುವವರು ಗೂಗಲ್ ಪೇ,ಫೋನ್ ಪೇ ನಂಬರ್ 9945056065 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು….