ದುಬೈ ಅ 18 : ಕ್ರಿಸ್ಸ್ ಗ್ರೇವೆಸ್ ಅವರ ಆಲ್ರೌಂಡ್ ಆಟದಿಂದ ಮಿಂಚಿದ ಸ್ಕಾಟ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ದ 6 ರನ್ಗಳ ರೋಚಕ ಜಯ ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡ, ಸ್ಪಿನ್ನರ್ಗಳಾದ ಶಕಿಬ್ ಅಲ್ ಹಸನ್ (17ಕ್ಕೆ 2) ಮತ್ತು ಮೆಹ್ದಿ ಹಸನ್ (19ಕ್ಕೆ 3) ಅವರ ಶಿಸ್ತಿನ ದಾಳೆ ಎದುರು 140/9 ರನ್ಗಳ ಸವಾಲಿನ ಮೊತ್ತ ಮಾತ್ರ ದಾಖಲಿಸಲು ಶಕ್ತವಾಯಿತು
ಒಂದು ಹಂತದಲ್ಲಿ 52 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಒತ್ತಡದಲ್ಲಿದ್ದ ಸ್ಕಾಟ್ಲೆಂಡ್ ತಂಡಕ್ಕೆ ಆಸರೆಯಾಗಿ ನಿಂತ ಕ್ರಿಸ್ ಗ್ರೇವೆಸ್, ಕೇವಲ 28 ಎಸೆತಗಳಲ್ಲಿ 4 ಫೋರ್ ಮತ್ತು 2 ಸಿಕ್ಸರ್ ನೆರವಿನಿಂದ ಬಿರುಸಿನ 45 ರನ್ಗಳಿಸಿದರು ಇವರಿಗೆ ಜೆತೆಯಾಗಿ ನಿಂತಮಾರ್ಕ್ ವ್ಯಾಟ್ 22 ರನ್ಗಳಿಸಿ ತಂಡವನ್ನು 120ರ ಗಡಿ ದಾಟಿಸುವಲ್ಲಿ ಸಫಲರಾದರು.
140 ರನ್ಗಳ ಸಾಧರಣ ಮೊತ್ತದ ಗುರಿ ಬೆನ್ನತ್ತದ ಬಾಂಗ್ಲಾ ಸೌಮ್ಯ ಸರ್ಕಾರ್ ಮತ್ತು ಲಿಟನ್ ದಾಸ್ (5) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಒಳಗಾಯಿತು. ನಂತರ ಬಂದ ಶಕಿಬ್ ಅಲ್ ಹಸನ್ (28 ಎಸೆತಗಳಲ್ಲಿ 20 ರನ್) ಮತ್ತು ಮುಷ್ಫಿಕರ್ ರಹೀಮ್ (36 ಎಸೆತಗಳಲ್ಲಿ 38 ರನ್) ಗಳಿಸಿ ಫೆವಿಲಿಯನ್ ಹಾದಿ ಹಿಡಿದರು. ಅಂತಿಮವಾಗಿ ನಾಯಕ ಮಹ್ಮೂದುಲ್ಲ (23), ಆಫಿಫ್ ಹುಸೇನ್ (18) ಮತ್ತು ಮೆಹ್ದಿ ಹಸನ್ (15*) ಹೋರಾಟ ನಡೆಸಿದರೂ ಕೂಡ ನಿಗದಿತ 20 ಓವರ್ಗಳಲ್ಲಿ 7 ವಿಕಟ್ ಕಳೆದುಕೊಂಡು 134 ರನ್ ಮಾತ್ರ ಕಲೆಹಾಕಿ 6 ರನ್ಗಳಿಂದ ಸೋಲನುಭವಿಸಿತು.
ಈ ಪಂದ್ಯದಲ್ಲಿ ಆಕರ್ಷಕವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶಿಸಿದ ಕ್ರಿಸ್ ಗ್ರೇವೆಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.