Categories
ಕ್ರಿಕೆಟ್

ತುಂಗಾ ಕಪ್-2022-ಅಂಡರ್ 14 ಟಿ 20-ಮಂಗಳೂರು ಕರಾವಳಿ ಕ್ರಿಕೆಟ್ ಅಕಾಡೆಮಿಗೆ ಪ್ರಶಸ್ತಿ

ಶಿರ್ವ-ಹಿಂದೂ ಜೂನಿಯರ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಶಿರ್ವ, ವಿದ್ಯಾವರ್ಧಕ ಸಂಘ ( ರಿ ) ಶಿರ್ವ ಇವರ ಸಹಭಾಗಿತ್ವದಲ್ಲಿ,ಹೆಚ್. ಜೆ.ಸಿ ಕ್ರಿಕೆಟ್ ಅಕಾಡೆಮಿ-ಸದಾನಂದ ಶಿರ್ವ ಇವರ ಸಾರಥ್ಯದಲ್ಲಿ ರಾಜ್ಯಮಟ್ಟದ 14 ರ ವಯೋಮಿತಿಯ ಬಾಲಕರ ಟಿ20 ಪಂದ್ಯಾಕೂಟ, “ಶಿರ್ವ ಅಂಡರ್ 14 ತುಂಗಾ ಕಪ್-2022” ,
ತುಂಗಾ ಹಾಸ್ಪಿಟಲ್ಸ್ ಮುಂಬೈ ಇದರ ಸಹಯೋಗದೊಂದಿಗೆ,
ಇತ್ತೀಚೆಗೆ ಹಿಂದೂ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು. ಪಂದ್ಯಾಕೂಟವನ್ನು , ಹಳೆ ವಿದ್ಯಾರ್ಥಿ ಸಂಘದ ಮುಂಬೈ ಘಟಕದ ಅಧ್ಯಕ್ಷರಾದ ಸೊರ್ಕಳ ಉದಯ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
ಅವಿಭಜಿತ ದ.ಕ ಜಿಲ್ಲೆಯ 5 ತಂಡಗಳು,ಬೆಂಗಳೂರಿನ 3 ತಂಡಗಳು ಸೇರಿದಂತೆ, ಒಟ್ಟು ಎಂಟು ಪ್ರತಿಷ್ಠಿತ ತಂಡಗಳು ಭಾಗವಹಿಸಿದ್ದವು.ಅತ್ಯಂತ ಜಿದ್ದಾಜಿದ್ದಿನ ಅಂತಿಮ ಪಂದ್ಯದಲ್ಲಿ ಮಂಗಳೂರಿನ ಕರಾವಳಿ ಕ್ರಿಕೆಟ್ ಅಕಾಡೆಮಿ, ಮಂಗಳೂರಿನ ಮತ್ತೊಂದು ಪ್ರಬಲ ತಂಡ ಜ್ಯೂಯಿಸ್ ಕ್ರಿಕೆಟ್ ಅಕಾಡೆಮಿಯನ್ನು ಕೇವಲ ಮೂರು ರನ್ನುಗಳಿಂದ ಪರಾಭವಗೊಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಉದ್ಘಾಟನಾ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ದಲ್ಲಿ, ಹಿಂದೂ ಜೂನಿಯರ್ ಕಾಲೇಜು ಇದರ ನಿವೃತ್ತ ಪ್ರಾಂಶುಪಾಲರಾದ ಕೆ.ರಾಜಗೋಪಾಲ್, ಎಂ.ಎಸ್.
ಆರ್.ಎಸ್ ಕಾಲೇಜಿನ ಉಪ ಪ್ರಾಂಶುಪಾಲರಾದ ಕೆ.ಜಿ.ಮಂಜುನಾಥ್ ,ಹಳೆ ವಿದ್ಯಾರ್ಥಿ ಸಂಘದ ಶಿರ್ವ ಇದರ ಅಧ್ಯಕ್ಷರಾದ ರಮಾನಂದ ಶೆಟ್ಟಿಗಾರ್, ಗೌರವಾಧ್ಯಕ್ಷ ರಾದ ಸಚ್ಚಿದಾನಂದ ಹೆಗ್ಡೆ, ಮುಂಬೈ ಘಟಕದ ಪದಾಧಿಕಾರಿಗಳಾದ ಕಾಂದೇಶ್ ಭಾಸ್ಕರ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ, ಪದಾಧಿಕಾರಿಗಳಾದ ಉಮೇಶ್ ಆಚಾರ್ಯ, ಪವನ್ ಶೆಟ್ಟಿ, ಶಬರಿ ರಾಜೇಶ್ ಶೆಟ್ಟಿ, ಅರುಣಾಕರ್ ಶೆಟ್ಟಿ ಇನ್ನೂ ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪಂದ್ಯಾಕೂಟದ ವೀಕ್ಷಕ ವಿವರಣೆಯನ್ನು ಅರವಿಂದ್ ಮಣಿಪಾಲ, ಶಿವರಾಜ್ ದೇವಾಡಿಗ ಹಾಗೂ ಪ್ರಕಾಶ್ ಪಡುಬಿದ್ರಿ ನಿರ್ವಹಿಸಿದರು.
ಹೆಚ್.ಜೆ.ಸಿ ಕ್ರಿಕೆಟ್ ಅಕಾಡೆಮಿಯ ಪ್ರದಾನ ತರಬೇತುದಾರ ಸದಾನಂದ ಶಿರ್ವ ಸ್ವಾಗತಿಸಿ ವಂದಿಸಿದರು. ಸಹಾಯಕ ತರಬೇತುದಾರ ಶೇಖರ್ ಸಹಕರಿಸಿದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

12 + six =