ಹೆಚ್.ಜೆ.ಸಿ ಕ್ರಿಕೆಟ್ ಅಕಾಡೆಮಿ ಶಿರ್ವ ಪ್ರಾಯೋಜಕತ್ವದಲ್ಲಿ ವಿದ್ಯಾವರ್ಧಕ ಸಂಘ(ರಿ)ಶಿರ್ವ ಮತ್ತು ಹೆಚ್.ಜೆ.ಸಿ ಹಳೆ ವಿದ್ಯಾರ್ಥಿಗಳ ಅಸೊಶಿಯೇಶನ್ ಶಿರ್ವ/ಮುಂಬಯಿ ಇವರ ಸಹಕಾರದೊಂದಿಗೆ ಶಿರ್ವದ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ಫೆಬ್ರವರಿ 6 ಬೆಳಿಗ್ಗೆ 8.30 ಗಂಟೆಗೆ ಸರಿಯಾಗಿ ಆಸ್ಟ್ರೋ ಟರ್ಫ್ ಪಿಚ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಕೆ.ಎಸ್.ಸಿ.ಎ ಮಂಗಳೂರು ಕಾರ್ಯದರ್ಶಿ ಮನೋಹರ್ ಅಮೀನ್,ವಿದ್ಯಾವರ್ಧಕ ಸಂಘ(ರಿ)ದ ಆಡಳಿತಾಧಿಕಾರಿ ಭಾಸ್ಕರ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಸುಧೀರ್ ಶೆಟ್ಟಿ ಸಹೋದರರು (ಶ್ಯಾಮ್ಸ್ ಸ್ಕ್ವೇರ್ ಶಿರ್ವ),ಕುತ್ಯಾರು ಕಿಶೋರ್ ಕುಮಾರ್ ಶೆಟ್ಟಿ ಮತ್ತು ಕಂದೇಶ್ ಭಾಸ್ಕರ್ ಶೆಟ್ಟಿ ಮುಂಬಯಿ , ನಿತ್ಯಾನಂದ ಹೆಗ್ಡೆ,ಗುರ್ಮೆ ಸುರೇಶ್ ಶೆಟ್ಟಿ,ರಾಜಗೋಪಾಲ ಸರ್ ,ಕುತ್ಯಾರು ಪ್ರಸಾದ್ ಶೆಟ್ಟಿ,ಸಚ್ಚಿದಾನಂದ ಹೆಗ್ಡೆ, ಮುಂತಾದ ಗಣ್ಯರು..ಭಾಗವಹಿಸಲಿದ್ದಾರೆಂದು ಹೆಚ್.ಜೆ.ಸಿ ಕೋಚಿಂಗ್ ಅಕಾಡೆಮಿಯ ಮುಖ್ಯಸ್ಥರು,ಪ್ರಮುಖ ಕೋಚ್ ಶ್ರೀಯುತ ಸದಾನಂದ ಶಿರ್ವ ತಿಳಿಸಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಮೂಲ್ಕಿ ಸುಂದರಾಮ್ ಶೆಟ್ಟಿ ಕಾಲೇಜು(ಹಿಂದೂ ಜೂನಿಯರ್ ಕಾಲೇಜು ಮೈದಾನ)ದಲ್ಲಿ ಉಡುಪಿ ಮತ್ತು ದ.ಕ ಜಿಲ್ಲೆಯ 50+ ಹಿರಿಯ ಕ್ರಿಕೆಟಿಗರ 35 ಓವರ್ ಗಳ ಏಕದಿನ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.