ಕುಂದಾಪುರದಲ್ಲಿ ಇಂಡಿಪೆಂಡೆನ್ಸ್ ಡೇ ಟ್ರೋಫಿ ಸೀಸನ್ 4 ಕ್ರಿಕೆಟ್ ಪಂದ್ಯಾಟ

ಕುಂದಾಪುರದಲ್ಲಿ ಇಂಡಿಪೆಂಡೆನ್ಸ್ ಡೇ ಟ್ರೋಫಿ ಸೀಸನ್ 4 ಕ್ರಿಕೆಟ್ ಪಂದ್ಯಾಟ
ಕುಂದಾಪುರದ ಗಾಂಧಿ ಮೈದಾನದ ಕ್ರಿಕೆಟ್ ಆಟಗಾರರ ಸಮುದಾಯದೊಂದಿಗೆ ಗಾಂಧಿ ಮೈದಾನದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯ ಕ್ರಿಕೆಟ್ ಟ್ರೋಫಿ-2023  ”ಇಂಡಿಪೆಂಡೆನ್ಸ್ ಡೇ ಟ್ರೋಫಿ ಸೀಸನ್ 4” ಅನ್ನು ಆಯೋಜಿಸಿದೆ, ಇದು  ಭಾರತದ ಸ್ವಾತಂತ್ರ್ಯದ 77 ನೇ ವಾರ್ಷಿಕೋತ್ಸವವನ್ನು  ಆಚರಿಸುವ ವರ್ಷದ ವಿಶೇಷ ಸ್ಮರಣಾರ್ಥ ಕಾರ್ಯಕ್ರಮಗಳ ಭಾಗವಾಗಿ 20 ಆಗಸ್ಟ್ 2023 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಈ ಕ್ರಿಕೆಟ್ ಟೂರ್ನಮೆಂಟ್ ಸಾಗಿ ಬರಲಿದೆ.
ಲೀಗ್ ಕಮ್ ನಾಕೌಟ್ ಮಾದರಿಯ 6 ಓವರುಗಳ ಈ ಪಂದ್ಯಾಕೂಟದಲ್ಲಿ ಭಗತ್ ಸಿಂಗ್ ವಾರಿಯರ್ಸ್ , ನೇತಾಜಿ ವಾರಿಯರ್ಸ್, ರಾಯಣ್ಣ ವಾರಿಯರ್ಸ್ ಬೋಸ್ ಆರ್ಮಿ ಮತ್ತು ಸುಖದೇವ್ ವಾರಿಯರ್ ಎನ್ನುವ ಐದು ತಂಡಗಳು ಪರಸ್ಪರ ಆಡಲಿವೆ. ಯಾವ ತಂಡವು ಇಂಡಿಪೆಂಡೆನ್ಸ್ ಡೇ ಟ್ರೋಫಿ ಸೀಸನ್ 4 ಕ್ರಿಕೆಟ್ ಟ್ರೋಫಿ-2023 ಅನ್ನು ಗೆಲ್ಲುತ್ತೆ ಎನ್ನುವುದನ್ನು ನೋಡಲು ಕುಂದಾಪುರದಲ್ಲಿ ನೆಲೆಸಿರುವ ಸಹಸ್ರಾರು ಮಂದಿ ಕ್ರಿಕೆಟ್ ಅಭಿಮಾನಿಗಳು ಕುಂದಾಪುರದ ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಗಾಂಧಿ ಮೈದಾನದ ಕ್ರಿಕೆಟ್ ಸ್ಟೇಡಿಯಂನಲ್ಲಿ ಜಮಾಯಿಸಲಿದ್ದಾರೆ.
ಆಗಸ್ಟ್ 2023, 20ರ ಭಾನುವಾರ  ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭದೊಂದಿಗೆ 77 ನೇ  ಸ್ವಾತಂತ್ರ್ಯ ದಿನಾಚರಣೆಯ ಸ್ಮರಣಾರ್ಥ ಅಧಿಕೃತವಾಗಿ ಪಂದ್ಯಗಳು ಪ್ರಾರಂಭವಾವಾಗಲಿವೆ. ಗಾಂಧಿ ಮೈದಾನದಲ್ಲಿ ಕ್ರಿಕೆಟ್ ಆಟವನ್ನು ಆಡುತ್ತಿರುವ ಎಲ್ಲಾ ಆಟಗಾರರ ಭವ್ಯವಾದ ನೆನಪುಗಳನ್ನು  ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.  ಕುಂದಾಪುರದ ಕ್ರಿಕೆಟ್ ಅಭಿಮಾನಿಗಳ ಸಾವಿರಾರು ವೀಕ್ಷಣೆಗಳೊಂದಿಗೆ ಈವೆಂಟ್ ಅನ್ನು YouTube ನಲ್ಲಿ ನೇರ ಪ್ರಸಾರ  ಮಾಡಲಾಗುವುದು. ಇದನ್ನು ಸ್ಟಾರ್ ವರ್ಟೆಕ್ಸ್ – ಸ್ಪೋರ್ಟ್ಸ್ ಕನ್ನಡ  ಚಾನೆಲ್ ನಲ್ಲಿ ಲೈವ್ ಸ್ಟ್ರೀಮ್ ಆಗಿ ವೀಕ್ಷಿಸಬಹುದು.

Leave a Reply

Your email address will not be published. Required fields are marked *