ಹಿರಿಯೂರು-ಕರ್ನಾಟಕ ರಾಜ್ಯ ಸರಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ. ಸುಧಾಕರ್ ಇವರ ಮುತುವರ್ಜಿಯಲ್ಲಿ,ಹಿರಿಯೂರಿನಲ್ಲಿ ಸತತ ಯಶಸ್ವಿ ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸಿದ ಕ್ರೀಡಾ ಸಂಘಟಕರಾದ ಮಹಂತೇಶ್ ಹಿರಿಯೂರು ಇವರ ಸಾರಥ್ಯದಲ್ಲಿ”ಡಿ.ಎಸ್ ಕಪ್-2023″ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿ ಆಗಸ್ಟ್ 25 ರಿಂದ ಮೂರು ದಿನಗಳ ಕಾಲ ಹಗಲಿನಲ್ಲಿ ನಡೆಯಲಿದೆ.
ಹಿರಿಯೂರು ಇತಿಹಾಸದಲ್ಲೇ ದಾಖಲೆ ಸೃಷ್ಟಿಸಲಿರುವ,ಈ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ,ಆಗಸ್ಟ್ 25, 26 ಮತ್ತು 27 ರಂದು ಆಯೋಜನೆಗೊಂಡಿದ್ದು ಕ್ರೀಡಾ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಲಿದೆ.
ರಾಜ್ಯದ ವಿವಿಧ ತಂಡಗಳು ಪಂದ್ಯಾವಳಿಯಲ್ಲಿ ಸೆಣಸಾಟ ನಡೆಸಿ, ಚಾಂಪಿಯನ್ ಪಟ್ಟ ಪಡೆಯಲು ಉತ್ತಮ ಅವಕಾಶವಿದೆ. ಪ್ರಸ್ತುತ ಹಿರಿಯೂರು ಜಿಲ್ಲೆಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ದುಬಾರಿ ಬಹುಮಾನವೇ ಗೆದ್ದವರಿಗೆ ಸಿಗಲಿದೆ. ಕ್ರಿಕೆಟ್ ಪಂದ್ಯಾವಳಿ ಗೆದ್ದರೆ ಪ್ರಥಮ ಬಹುಮಾನವಾಗಿ 4 ಲಕ್ಷ ನಗದು ಬಹುಮಾನ ದೊರೆಯಲಿದೆ. ದ್ವಿತೀಯ ಬಹುಮಾನವಾಗಿ 2 ಲಕ್ಷ, ತೃತೀಯ ಬಹುಮಾನವಾಗಿ 1 ಲಕ್ಷ ನೀಡಲಾಗುತ್ತದೆ.
ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕ ರೂ. 30,000 ಆಗಿದೆ. ಎಲ್ಲಾ ತಂಡಗಳಿಗೆ ಸಂಘಟಕರ ಪರವಾಗಿ ಜರ್ಸಿ ನೀಡಲಾಗುವುದು.ಡಿಎಸ್ ಕಪ್ ಹೆಸರಿನಲ್ಲಿ ಆಯೋಜನೆಗೊಂಡಿರುವ ಕ್ರಿಕೆಟ್ ಪಂದ್ಯಾವಳಿಗೆ ತಂಡವನ್ನು ನೋಂದಾಯಿಸಲು ಕೊನೆಯ ದಿನಾಂಕ ಆಗಸ್ಟ್ 6 2023.
ಈ ಈವೆಂಟ್ Y ಸ್ಪೋರ್ಟ್ಸ್ ಮುಖಾಂತರ ಯೂಟ್ಯೂಬ್ ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ @ 7204080138.