
ಮಲ್ಪೆಯಲ್ಲಿ ಆದರ್ಶ ಟ್ರೋಫಿ – 2026
ನಾನ್ ಸ್ಟೇಟ್ ಮತ್ತು ಪಿನ್ ಕೋಡ್ ಮಟ್ಟದ ನಾಕೌಟ್ ಕ್ರಿಕೆಟ್ ಟೂರ್ನಿ
ಬೀಚ್ ಫ್ರೆಂಡ್ಸ್ ಮಲ್ಪೆ ಆಶ್ರಯದಲ್ಲಿ ನಡೆಯಲಿರುವ ಆದರ್ಶ ಟ್ರೋಫಿ – 2026 ನಾನ್ ಸ್ಟೇಟ್ ಹಾಗೂ ಪಿನ್ ಕೋಡ್ ಮಟ್ಟದ ನಾಕೌಟ್ ಕ್ರಿಕೆಟ್ ಟೂರ್ನಿಯು ಜನವರಿ 17 ಮತ್ತು 18, 2026ರಂದು ಮಲ್ಪೆಯ ಗಾಂಧಿ ಶತಾಬ್ದಿ ಮೈದಾನದಲ್ಲಿ ನಡೆಯಲಿದೆ.
ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದ್ದು, ಅದರಲ್ಲಿ 8 ನಾನ್-ಸ್ಟೇಟ್ ತಂಡಗಳು ಹಾಗೂ 8 ಪಿನ್ ಕೋಡ್ ತಂಡಗಳು ಸ್ಪರ್ಧಿಸಲಿವೆ. ಪಂದ್ಯಾವಳಿ ಸಂಪೂರ್ಣವಾಗಿ ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು, ಪ್ರತಿಯೊಂದು ಪಂದ್ಯವೂ 6 ಓವರ್‌ಗಳ (2+2+1+1) ಮಾದರಿಯಲ್ಲಿ ಆಯೋಜಿಸಲಾಗುತ್ತದೆ.


ಟೂರ್ನಿಯ ವಿಜೇತ ತಂಡಕ್ಕೆ ₹1,00,000 ನಗದು ಬಹುಮಾನ ಹಾಗೂ ಟ್ರೋಫಿ, ರನ್ನರ್-ಅಪ್ ತಂಡಕ್ಕೆ ₹50,000 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತದೆ. ತಂಡಗಳ ಪ್ರವೇಶ ಶುಲ್ಕವನ್ನು ₹10,000 ಎಂದು ನಿಗದಿಪಡಿಸಲಾಗಿದೆ.
ಆಯೋಜಕರ ನಿಯಮಾವಳಿಯ ಪ್ರಕಾರ, ರಾಜ್ಯ ಪಟ್ಟಿಯಲ್ಲಿ ಇರುವ ಆಟಗಾರರಿಗೆ ಅವಕಾಶ ಇರುವುದಿಲ್ಲ. ಅಂಪೈರ್ ಹಾಗೂ ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ವಿಶೇಷವೆಂದರೆ, ಈ ಪ್ರತಿಷ್ಠಿತ ಟೂರ್ನಿಯ ಪ್ರತಿ ಪಂದ್ಯವೂ ಲೈವ್ ಸ್ಟ್ರೀಮಿಂಗ್ ಮೂಲಕ ಪ್ರಸಾರವಾಗಲಿದೆ. ಪಂದ್ಯಗಳ ನೇರ ಪ್ರಸಾರವನ್ನು Sports Kannada Live Media ಮುಖಾಂತರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಟೂರ್ನಿಯು, ಮಲ್ಪೆಯ ಕ್ರೀಡಾ ವಲಯದಲ್ಲಿ ವಿಶೇಷ ಕುತೂಹಲವನ್ನು ಹುಟ್ಟುಹಾಕಿದೆ. ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತ್ತು ವೀಕ್ಷಿಸಿ ಈ ಕ್ರೀಡಾ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು:
9844020918, 9964896496, 8197449422




