11 C
London
Sunday, December 1, 2024
Homeಕ್ರಿಕೆಟ್ದೇಶಿ ಕ್ರಿಕೆಟ್ ನಲ್ಲಿ ಸೆಕ್ಸಸ್ ಕಂಡ ಸಕ್ಸೇನಾಗೆ ಅದೃಷ್ಟ ಇಲ್ಲಾ!!?

ದೇಶಿ ಕ್ರಿಕೆಟ್ ನಲ್ಲಿ ಸೆಕ್ಸಸ್ ಕಂಡ ಸಕ್ಸೇನಾಗೆ ಅದೃಷ್ಟ ಇಲ್ಲಾ!!?

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಭಾರತದಲ್ಲಿ ಕ್ರಿಕೆಟ್​ನ ಜನನ ಆಗದಿದ್ದರೂ, ಭಾರತದಲ್ಲಿರುವ ಕ್ರಿಕೆಟ್ ನ ಜನಪ್ರಿಯತೆ ಬೇರೆ ಯಾವ ದೇಶದಲ್ಲು ಇಲ್ಲ ಆ ಮಟ್ಟಕ್ಕೆ ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆ ಗೊಂಡಿದೆ. ಹೀಗಾಗಿಯೇ ಬಹುತೇಕ ಯುವಕರು ಕ್ರಿಕೆಟನ್ನ ತಮ್ಮ ಬದುಕಿನ ಸರ್ವಸ್ವ ಅಂತಾ ಆರಾಧಿಸುವ ಜೊತೆ ಜೋತೆಗೆ ಕ್ರಿಕೆಟ್ ಕಲಿಕೆಯಲ್ಲು ಮುಂದಾಗಿದ್ದಾರೆ
 ದೇಶಿಯ ಟೂರ್ನಿಗಳಲ್ಲಿ ಅಬ್ಬರಿಸಿ ದೇಶ ಪ್ರತಿನಿಧಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಆದರೆ ಕೆಲವರಿಗೆ ಪ್ರತಿಭೆ ಇದ್ದರೂ, ದೇಶವನ್ನು ಪ್ರತಿನಿಧಿಸುವ ಅದೃಷ್ಟ ಒಲಿಯುವುದೆ ಇಲ್ಲ.
ಗೆಲ್ಲೋ ಪಂದ್ಯ ಕ್ಷಣಾರ್ಧದಲ್ಲಿ ಸೋಲಬಹುದು, ಸೋತೇ ಬಿಟ್ಟಿತು ಅನ್ನೋ ಪಂದ್ಯಗಳು ಕ್ಷಣಾರ್ಧದಲ್ಲಿ ತಿರುವನ್ನು ಪಡೆದು ಗೆಲುವಿನ ನಗೆ ಬಿರಬಹುದು, ಹೀಗಾಗಿಯೇ ಕ್ರಿಕೆಟನ್ನ​​ ಊಹೆಗೂ ಮೀರಿದ ಆಟ ಎನ್ನಬಹುದು. ಹಾಗೇಯೆ ಈತ ಟೀಮ್​ ಇಂಡಿಯಾಗೆ ಅಡೆ ಅಡುತ್ತಾನೆನ್ನುವ ಆಟಗಾರನಿಗೆ ಅದೃಷ್ಟ ಒಲಿಯದೆ ದೇಶಿ ಕ್ರಿಕೆಟ್​​ಗೆ ಸೀಮಿತವಾಗ​​​ಬಹುದು. ಹೀಗೆ ಟೀಮ್​ ಇಂಡಿಯಾ ಪರ ಆಡುವ ಎಲ್ಲಾ ಅರ್ಹತೆ ಹೊಂದಿದ್ದರು  ದೇಶಿ ಕ್ರಿಕೆಟ್​​​​​​​​​​​​ಗೆ ಸೀಮಿತವಾಗಿರುವ ಹಲವು ಆಟಗಾರರ ಉದಾಹರಣೆಗಳಿವೆ ನಮ್ಮಿ ಈ ನೆಲದಲ್ಲಿ ದೇಶಿ ಕ್ರಿಕೆಟ್​ನಲ್ಲಿ ಒಂದೂವರೆ ದಶಕದಿಂದ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಈ ಆಟಗಾರನಿಗೆ ಇನ್ನೂ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವ  ಅವಕಾಶ ಸಿಕ್ಕಿಲ್ಲ. ಹೀಗಾಗಿಯೇ ಇವರು ಭಾರತೀಯ ದೇಶಿ ಕ್ರಿಕೆಟ್​​​​​​​​​​​​​​​​​​​​​​​​​​​​​​​ನ ನತದೃಷ್ಟ ಆಟಗಾರನಾಗಿ ಉಳಿದುಬಿಟ್ಟಿದ್ದಾರೆ. ಅವರು ಬೇರೆಯಾರು ಅಲ್ಲ, ಕೇರಳದ ಆಲ್​ರೌಂಡರ್​​ *ಜಲಜ್​​ ಸಕ್ಸೇನಾ*.
ಹೌದು ಜಲಜ್​​ ಸಕ್ಸೇನಾ, ದೇಶಿ ಕ್ರಿಕೆಟ್​ನ ಅಪ್ರತಿಮ ಪ್ರತಿಭೆ, ಆದರೆ ಈತನ ಕ್ರಿಕೆಟ್ ಬದುಕಿನ ಹಾದಿಯನ್ನು ನೋಡಿದರೆ ಪ್ರತಿಯೊಬ್ಬರ ಸಕ್ಸಸ್​ಗೆ ಆಟವಷ್ಟೆ ಅಲ್ಲ , ಅದೃಷ್ಟ​​ ಕೂಡ ಜೊತೆಗಿರ ಬೇಕು ಎಂದು ನಿಮಗೂ ಅನ್ನಿಸುತ್ತದೆ. ದೇಶವನ್ನ ಪ್ರತಿನಿಧಿಸುವ ಎಲ್ಲಾ ಅರ್ಹತೆ ಹೊಂದಿದ್ದರು ಇವರು ದೇಶಿ ಕ್ರಿಕೆಟ್​​ಗೆ ಸೀಮಿತವಾಗಿದ್ದಾರೆ, ಇದೇ ಕಾರಣಕ್ಕಾಗಿ ಪ್ರತಿಭೆ ಜೊತೆ ಲಕ್​ಕೂಡಾ ಇರಬೇಕು ಅನ್ನೋದು.
ದೇಶಿ ಕ್ರಿಕೆಟ್​ನಲ್ಲಿ ಮಿಂಚಿದರು ಐಪಿಎಲ್​​ ಆಡಿಲ್ಲ
ಸದ್ಯ ದೇಶಿ ಕ್ರಿಕೆಟ್​ನಲ್ಲಿ ಆಡುತ್ತಿರುವ ಪ್ರತಿಯೊಬ್ಬ ಕ್ರಿಕೆಟರ್​, ಐಪಿಎಲ್​​​ನಲ್ಲಿ ಆಡಲು ಉತ್ಸುಕರಾಗಿ ಇರ್ತಾರೆ. ಐಪಿಎಲ್​ನ ಶಾರ್ಟ್​​ ಕಟ್​​​ ಹಾದಿಯಲ್ಲಿ ಟೀಮ್​ ಇಂಡಿಯಾಕ್ಕೆ ಹಾರಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ಈ ಕ್ರಿಕೆಟಿಗ ಮಾತ್ರ ವಿಭಿನ್ನ, ದೇಶಿ ಕ್ರಿಕೆಟ್​​ನ ಬೆಸ್ಟ್​ ಆಲ್​ರೌಂಡರ್​ಗೆ ನೀಡಲಾಗುವ ಲಾಲ ಅಮರ್​​ನಾಥ್​ ಪ್ರಶಸ್ತಿಯನ್ನ ಮೂರು ಬಾರಿ ಮುಡಿಗೇರಿಸಿಕೊಂಡಿದ್ದಾರೆ. ದೇಶಿ ಕ್ರಿಕೆಟ್​​ನಲ್ಲಿ ಬ್ಯಾಟಿಂಗ್​, ಬೌಲಿಂಗ್​​ನಲ್ಲಿ ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ, ಆದರೂ ಇವರೂ ಇದುವರೆಗೆ ಐಪಿಎಲ್​​ನಲ್ಲಿ ಆಡೆ ಇಲ್ಲ ಎಂದರೆ  ಅಚ್ಚರಿಯೆ ಹೌದು!!
ಬೆನ್​ಸ್ಟ್ರೋಕ್ಸ್​​, ಮೊಹಿನ್​ ಆಲಿಗಿಂತ ಇವರೇ ಬೆಸ್ಟ್​​..! ಎಂದರೆ ನೀವು ನಂಬಲೆ ಬೇಕು
ದೇಶಿ ಕ್ರಿಕೆಟ್​ನ ಅಂಕಿಅಂಶಗಳ ಪ್ರಕಾರ, ಟಾಪ್​​ ಫೈವ್​​​​ ವಿಶ್ವ ದೇಶಿ ಕ್ರಿಕೆಟರ್​ಗಳಲ್ಲಿ *ಜಲಜ್​ ಸಕ್ಸೇನಾ*  ಒಬ್ಬರಾಗಿದ್ದಾರೆ. ಇವರ ಅಂಕಿಅಂಶಗಳ ಮುಂದೆ ಇಂಗ್ಲೆಡ್​ನ ಸ್ಟಾರ್​​ ಆಲ್​​ರೌಂಡರ್​​ ಬೆನ್​ ಸ್ಟೋಕ್ಸ್​​, ಮೊಹಿನ್​ ಆಲಿಯನ್ನೂ ಮೀರಿಸಿದ್ದಾರೆ. ವಿಶ್ವದಲ್ಲಿ 300 ಪ್ಲಸ್​​ ರನ್​ ಹಾಗೂ 150 ಪ್ಲಸ್​ ವಿಕೆಟ್​​ ಪಡೆದ ಆಲ್​ರೌಂಡರ್​​ಗಳಲ್ಲಿ ಜಲಜ್​​ ಸಕ್ಸೇನಾ ಕೂಡ ಒಬ್ಬರಾಗಿದ್ದಾರೆ
*ವಿಶ್ವ ದೇಶಿ ಕ್ರಿಕೆಟ್​ ನಲ್ಲಿ ಕೆಲವರ ಸಾಧನೆ*
ವಿಶ್ವದೇಶಿ ಕ್ರಿಕೆಟ್​ನಲ್ಲಿ ಆಲ್​ರೌಂಡರ್​ಗಳ ಪ್ರದರ್ಶನ ನೋಡಿದರೆ, ಇಂಗ್ಲೆಂಡ್​ನ ಮೊಹಿನ್​ ಆಲಿ, 194 ಪಂದ್ಯಗಳಿಂದ 11,202 ರನ್​ ಗಳಿಸಿ 368 ವಿಕೆಟ್​​ ಕಬಳಿಸಿದ್ದಾರೆ. ಕೇವಲ 123 ಪಂದ್ಯಗಳನ್ನಾಡಿರುವ ಜಲಜ್​ ಸಕ್ಸೇನಾ, 6334 ರನ್​ ಕಲೆಹಾಕಿ 347 ವಿಕೆಟ್​ ಉರುಳಿಸಿದ್ದಾರೆ. ಇನ್ನು 143 ಪಂದ್ಯಗಳನ್ನಾಡಿರುವ ಬೆನ್​ ಸ್ಟೋಕ್ಸ್​​ 8221 ರನ್​​ ಗಳಿಸಿ 330 ವಿಕೆಟ್​​ ಉರುಳಿಸಿದ್ದಾರೆ.
6000+ ರನ್, 300+ ವಿಕೆಟ್​​, ಸಿಕ್ಕಿಲ್ಲ ಚಾನ್ಸ್​
ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ 6 ಸಾವಿರ ಪ್ಲಸ್​ ರನ್, ಮುನ್ನೂರಕ್ಕೂ ಹೆಚ್ಚು ವಿಕೆಟ್ ಪಡೆದಿದ್ರೂ, ಟೀಮ್ ಇಂಡಿಯಾ ಪ್ರತಿನಿಧಿಸದ ನತದೃಷ್ಟ ಜಲಜ್ ಸಕ್ಸೇನಾ, ಹೌದು ಜಲಜ್​ ಸಕ್ಸೇನಾ ಹೊರತುಪಡೆಸಿ 19 ಭಾರತೀಯ ಕ್ರಿಕೆಟಿಗರು 6 ಸಾವಿರಕ್ಕೂ ಹೆಚ್ಚು ರನ್, 300ಕ್ಕೂ ಹೆಚ್ಚು ವಿಕೆಟ್​ ಕಬಳಿಸಿದ್ದಾರೆ. ಈ ಎಲ್ಲಾ ಆಲ್​ರೌಂಡರ್​ಗಳು ಟೀಮ್ ಇಂಡಿಯಾ ಪ್ರತಿನಿಧಿಸಿದ್ದಾರೆ. ಆದರೆ ಇಷ್ಟು ಸಾಧನೆ ಮಾಡಿಯೂ ಟೀಮ್ ಇಂಡಿಯಾ ಪ್ರತಿನಿಧಿಸದ ನತದೃಷ್ಟ ಅಂದರೆ ಜಲಜ್ ಸಕ್ಸೇನಾ ಮಾತ್ರ..
ಮುಂದಿನ ಸರಣಿಯಲ್ಲಿ ಸಿಗುತ್ತಾ ಚಾನ್ಸ್..?
ಸದ್ಯ ಟೀಮ್ ಇಂಡಿಯಾದಲ್ಲಿ ಸೂಕ್ತ ಸ್ಪಿನ್​​ ಆಲ್​ರೌಂಡರ್​ನ ಕೊರತೆ ಕಾಣುತ್ತಿದೆ. ರವೀಂದ್ರ ಜಡೇಜಾ, ಆರ್​.ಅಶ್ವಿನ್ ಗಾಯದ ಸಮಸ್ಯೆಯಿಂದ ಇಂಗ್ಲೆಂಡ್​ನ ಸರಣಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಹಾಗಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಕಮಾಲ್ ಮಾಡಬಲ್ಲ ಕೇರಳದ ಈ ಆಲ್​ರೌಂಡರ್​ಗೆ ಚಾನ್ಸ್​ ನೀಡಿ ಬೇಕು ಅನ್ನೋ ಕೂಗು ಎದ್ದಿದೆ.
ಒಟ್ಟಿನಲ್ಲಿ ಜಲಜ್​ ಸಕ್ಸೇನಾ ದೇಶಿ ಕ್ರಿಕೆಟ್​ನಲ್ಲಿ ತಾನೇನು ಅಂತಾ ಸಾಬೀತು ಪಡೆಸಿದ್ರೂ, ಆತನಿಗೆ ಟೀಮ್​ ಇಂಡಿಯಾ ಕರೆ ಬಾರದಿರುವುದು ದುರದೃಷ್ಟವೇ ಸರಿ. ಅದೇನೇ ಆಗಲಿ ಮುಂದಿನ ದಿನಗಳಲ್ಲಿ ಆದರೂ ನತದೃಷ್ಟ ಸಕ್ಸೇನಾ ಲಕ್​ ​​​ಬದಲಾಗಲಿ ಅನ್ನೋದೆ ಅಭಿಮಾನಿಗಳ ಆಶಯ.
        *-ಸುಧೀರ್ ಕುಮಾರ್*
              *ಪತ್ರಕರ್ತರು*
                *ಶಿವಮೊಗ್ಗ*
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

five + eleven =