
ಆಸೀಸ್ ವಿರುದ್ಧ ಭಾರತ ಹಿಡಿತ; ಪರ್ತ್‌ನಲ್ಲಿ ಡ್ರೈವಿಂಗ್ ಸೀಟಿನಲ್ಲಿ ಬುಮ್ರಾಪಾದ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ಡ್ರೈವಿಂಗ್ ಸೀಟ್ ನಲ್ಲಿದೆ. ಭಾರತ ನೀಡಿದ 534 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಆಸೀಸ್ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 12 ರನ್ ಗಳಿಸಿದೆ. ಇನ್ನು ಏಳು ವಿಕೆಟ್‌ಗಳು ಬಾಕಿ ಇರುವಂತೆಯೇ ಆಸೀಸ್ ಗೆಲುವಿಗೆ 522 ರನ್‌ಗಳ ಅಗತ್ಯವಿದೆ. ಭಾರತ ಎರಡನೇ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 487 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.


ಯಸ್ವಾಸಿ ಜೈಸ್ವಾಲ್ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವನ್ನು ಮುನ್ನಡೆಸಿದರು. ಜೈಸ್ವಾಲ್ 297 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 161 ರನ್ ಗಳಿಸಿದರು. ಕೆಎಲ್ ರಾಹುಲ್ ಕೂಡ 77 ರನ್ ಗಳಿಸಿದರು. ಭಾರತದ ಆರಂಭಿಕರು ಮೊದಲ ವಿಕೆಟ್‌ಗೆ 201 ರನ್‌ಗಳ ದಾಖಲೆಯ ಜೊತೆಯಾಟವನ್ನು ರಚಿಸಿದರು.

ವಿರಾಟ್ ಕೊಹ್ಲಿ ಭಾರತಕ್ಕೆ ಬಲಿಷ್ಠ ಪುನರಾಗಮನ ಮಾಡಿದರು. ಕೊಹ್ಲಿ 143 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 100 ರನ್ ಗಳಿಸಿದರು. ಇದರೊಂದಿಗೆ ಭಾರತ 6 ವಿಕೆಟ್ ನಷ್ಟಕ್ಕೆ 487 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು

ಆಸ್ಟ್ರೇಲಿಯಾ 534 ರನ್‌ಗಳ ಬೃಹತ್ ಗುರಿ ಬೆನ್ನತ್ತಿತ್ತು. , ಬುಮ್ರಾ ಅವರ ನಿಖರವಾದ ಲೈನ್ ಮತ್ತು ಲೆಂಗ್ತ್ ಬೌಲಿಂಗ್‌ನಲ್ಲಿ 12 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಇನ್ನು 2 ದಿನಗಳು ಬಾಕಿ ಉಳಿದಿದ್ದು, ಆಸ್ಟ್ರೇಲಿಯಾ ಗೆಲ್ಲುವುದೋ ಅಥವಾ ಡ್ರಾ ಮಾಡಿಕೊಳ್ಳುವುದೋ ಅಥವಾ ಸೋಲುವುದೋ ನಿರೀಕ್ಷಿಸೋಣ.




