ದುಬೈ-ಉಡುಪಿ, ದಕ್ಷಿಣ ಕನ್ನಡ ಮೂಲದ ಕ್ರೀಡಾ ಪ್ರೋತ್ಸಾಹಕರಾದ ಫೈಜಲ್ ಕಾಪು, ಆದಿಲ್ ಮುಲ್ಲಾ, ಶಾಫಿ,ಆಶಿಕ್ ಬೆಳಪು, ಶಕೀರ್ ವಿಟ್ಲ ಇವರೆಲ್ಲರ ಸಂಯೋಜನೆಯಲ್ಲಿ ಸಮಾಜದಲ್ಲಿ “ಶಾಂತಿ-ಸೌಹಾರ್ದತೆಗಾಗಿ ಕ್ರಿಕೆಟ್”
ಅಭಿಯಾನದೊಂದಿಗೆ ಯಶಸ್ವಿ ಸತತ 4 ನೇ ಬಾರಿಗೆ ಅದ್ಧೂರಿಯ “ಯುನೈಟೆಡ್ ಕಾಪು ಟ್ರೋಫಿ ಸೀಸನ್ 4” ಕ್ರಿಕೆಟ್ ಟೂರ್ನಿ ಯನ್ನು ಕರ್ನಾಟಕ ಮೂಲದ ತಂಡಗಳಿಗೆ ನವೆಂಬರ್ 12,2023 ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಜ್ಮಾನ್ ಓವಲ್ ನ ಹುಲ್ಲು ಹಾಸಿನ ಮೈದಾನ ಮತ್ತು MCC2 ಕ್ರಿಕೆಟ್ ಮೈದಾನ ದಲ್ಲಿ ಆಯೋಜಿಸಲಿದೆ.
ದಿನದ ಪಂದ್ಯಾವಳಿಯು ಲೀಗ್ ಮತ್ತು ನಾಕೌಟ್ ಪಂದ್ಯಗಳನ್ನು ಒಳಗೊಂಡಿರುತ್ತದೆ. ಪ್ರತಿಷ್ಠಿತ
ಟ್ರೋಫಿಗಾಗಿ ಉಡುಪಿ ಫ್ರೆಂಡ್ಸ್, ಬ್ಲೂ ಫೋರ್ಸ್,ಕರಾವಳಿ ಆಟೋ ವರ್ಕ್ ಶಾಪ್,ಕಟೀಲ್ ಫ್ರೆಂಡ್ಸ್,ಕರ್ಮಾರ್ ಡಿ.ಜೆ ಚಾಲೆಂಜರ್ಸ್,ದುಬೈ ಬ್ರದರ್ಸ್,ಟೀಮ್ ಎಲಿಗೆಂಟ್ ಮತ್ತು ವಿದ್ವಾರ್ ಬಾಯ್ಸ್ ಈ ಎಂಟು ತಂಡಗಳ ಕದನವನ್ನು ಈ ಟೂರ್ನಮೆಂಟ್ನಲ್ಲಿ ವೀಕ್ಷಿಸಬಹುದು
ಯುನೈಟೆಡ್ ಕಾಪು ಟ್ರೋಫಿಯ ಪ್ರಶಸ್ತಿಯ ಒಟ್ಟು ಮೊತ್ತ AED 10000 ಮೌಲ್ಯದ್ದಾಗಿದ್ದು,
ಪಂದ್ಯಾವಳಿಯ ವಿಜೇತರು AED 5005 ಮತ್ತು ಟ್ರೋಫಿಯನ್ನು ಪಡೆಯಲಿದೆ. ರನ್ನರ್ಸ್ ಅಪ್ 2505 AED ಮತ್ತು ಟ್ರೋಫಿಯನ್ನು ಪಡೆಯುತ್ತದೆ.
ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರೀಸ್, ಬೆಸ್ಟ್ ಬೌಲರ್ ಮತ್ತು ಬೆಸ್ಟ್ ಬ್ಯಾಟರ್ ಗಳಿಗೆ ಕೂಡಾ ಬಹುಮಾನವೂ ಇರುತ್ತದೆ.
ಶೃಂಗೇರಿಯ ಪ್ರಸಿದ್ಧ ವೆರಿಕೋಸ್ ವೈನ್ ತಜ್ಞ ವೈದ್ಯರಾದ ವಾಸುದೇವ ಉರಾಳ ಇವರ “ಡಾ.ಉರಾಳ್ಸ್ ವೆರಿಕೋಸ್ ವೈನ್ಸ್ ಆಯುರ್ವೇದ ಕೇರ್” ಪಂದ್ಯಾವಳಿಯ ಮುಖ್ಯ ಪ್ರಾಯೋಜಕರಾಗಿರುತ್ತಾರೆ.ಡಾ.ವಾಸುದೇ ವ್ ಉರಾಳರು ಮೊತ್ತ ಮೊದಲ ಬಾರಿಗೆ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಭಾಗವಹಿಸಲು ದುಬೈಗೆ ಆಗಮಿಸಲಿದ್ದಾರೆ.
ಜೊತೆಯಲ್ಲಿ ಅತಿಥಿ ವೆಜಿಟೇರಿಯನ್ ರೆಸ್ಟೋರೆಂಟ್, ದುಬೈ ಸಹ ಪ್ರಾಯೋಜಕರಾಗಿರುತ್ತಾರೆ.
ಪಂದ್ಯಾವಳಿಯ ಇತರ ವಿವರಗಳಿಗಾಗಿ +971 50 628 8509 , + 971 52 799 9564 ಅಥವಾ + 971 52 829 1122 ಅನ್ನು ಸಂಪರ್ಕಿಸಬಹುದು.