Categories
ಕ್ರಿಕೆಟ್

ಮೂಲ್ಕಿ: ವರ್ಲ್ಡ್ ಬಂಟ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಸುರಗಿರಿ ಸ್ಟ್ರೈಕರ್ಸ್

ಮೂಲ್ಕಿ ಫೆ 26:  ಸುರಗಿರಿ ಸ್ಟ್ರೈಕರ್ಸ್ ವರ್ಲ್ಡ್ ಬಂಟ್ಸ್  ಪ್ರೀಮಿಯರ್ ಲೀಗ್ 2023 (ಸಂಜೀವಿನಿ ಬಂಟ್ಸ್  ಟ್ರೋಫಿ 2023) ಹರಾಜು ಆಧಾರಿತ  ಲೀಗ್‌ನ ಚಾಂಪಿಯನ್ ಆಗಿ ಹೊರಹೊಮ್ಮಿತು.
ಈ  ಪಂದ್ಯಾವಳಿಯನ್ನು ಫೆಬ್ರವರಿ 25, 26 ರಂದು  ವಿಜಯ ಕಾಲೇಜ್  ಮೈದಾನದಲ್ಲಿ  ಫ್ರೆಂಡ್ಸ್ ಮೂಲ್ಕಿ ವತಿಯಿಂದ ಆಯೋಜಿಸಲಾಗಿತ್ತು.
ಟೂರ್ನಮೆಂಟ್ ಉದ್ಘಾಟನೆಗೆ ಮುಖ್ಯ ಅತಿಥಿಗಳಾಗಿ ಮೂಲ್ಕಿ- ಮೂಡಬಿದಿರೆ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ,ರಾಷ್ಟ್ರೀಯ ಕಾಂಗ್ರೆಸ್ ನ ಯುವ  ನೇತಾರ ಮಿಥುನ್ ರೈ, , ಮುಲ್ಕಿ ನಗರ ಪಂಚಾಯತ್ ನ ಅಧ್ಯಕ್ಷರು   ಶ್ರೀ ಸುಭಾಷ್ ಶೆಟ್ಟಿ ,  ಮೂಲ್ಕಿ ವಿಜಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಶ್ರೀಮಣಿ ಶೆಟ್ಟಿ ಆಗಮಿಸಿದ್ದರು. ಶ್ರೀ ಡೆವೆಲಪರ್ಸ್ ಕಟೀಲಿನ ಶ್ರೀ ಗಿರೀಶ್ ಶೆಟ್ಟಿ ಟ್ರೋಫಿ ಯನ್ನು ಅನಾವರಣ ಗೊಳಿಸಿದರು.
ಶ್ರೀ ಐಕಳ ಹರೀಶ್ ಶೆಟ್ಟಿ , ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತು ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿ, ಉಪಾಧ್ಯಕ್ಷರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇವರ ಮಾರ್ಗದರ್ಶನದಲ್ಲಿ, ಊರಿನ ಹಿರಿಯರು, ರಾಜಕೀಯ ಧುರೀಣರು,ಬಂಟ ಸಮಾಜದ ಗಣ್ಯಾತಿ ಗಣ್ಯರು ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆಗೆ ಅತಿಥಿಗಳಾಗಿದ್ದರು.
ಈ ಪಂದ್ಯಾವಳಿಯ ಮೂಲಕ ಸಂಗ್ರಹಿಸಿದ ಹಣವನ್ನು ಅಶಕ್ತ ಕುಟುಂಬಗಳ ಸಹಾಯಾರ್ಥವಾಗಿ  ದೇಣಿಗೆ  ನೀಡಲಾಗುವುದು.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಿಂದ ತಂಡಗಳು ಭಾಗವಹಿಸಿತ್ತು.
ಭಾಗವಹಿಸಿದ ತಂಡಗಳ ವಿವರಗಳು ಈ ರೀತಿ ಇವೆ
1. ಎ. ಬಿ. ಶೆಟ್ಟಿ ವಸಾಯಿ,ಮಹಾರಾಷ್ಟ
2. ಫೈಟರ್ ಶೆಟ್ಟೀಸ್ ಎಸ. ಕೋಡಿ  ಪುನರೂರು
3. ಯುವ ಬಂಟ್ಸ್ ಕಾಸರೋಡ್
4. ಇಲೈಟ್ XI ಕಾಪು
5. ಯುನೈಟೆಡ್ ವಾರಿಯರ್ಸ್ ಬೆಂಗಳೂರು
6. ತನಿಷ್ಕಾ ಲೀಲಾ  ಹೋಟೆಲ್ಸ್  ಮುಂಬೈ
7. ಸುರಗಿರಿ  ಸ್ಟ್ರೈಕರ್ಸ್
8. ಎಸ. ಎಸ. ಕೆ ಮಂಗಳೂರು ( ಶಿವಂ  ಸೂಪರ್ ಕಿಂಗ್ಸ್  ಕುಡ್ಲ )
9. ಎಂ. ಡಿ. ಯು ಹೊಯ್ಸಳ
ಫಲಿತಾಂಶಗಳು:
ಸಂತೋಷ್ ಶೆಟ್ಟಿ ಮತ್ತು ಧೀರಜ್ ಶೆಟ್ಟಿ ಮಾಲಕತ್ವದ ಸುರಗಿರಿ ಸ್ಟ್ರೈಕರ್ಸ್ ವರ್ಲ್ಡ್ ಬಂಟ್ಸ್ ಪ್ರೀಮಿಯರ್ ಲೀಗ್  2023 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಸುನೀಲ್ ಶೆಟ್ಟಿ ಮತ್ತು ಲಕ್ಷ್ಮಣ್ ಶೆಟ್ಟಿ ಮಾಲಕತ್ವದ ಯುನೈಟೆಡ್  ವಾರಿಯರ್ಸ್ ಬೆಂಗಳೂರು ರನ್ನರ್ಸ್ ಅಪ್  ಆಯಿತು.
ವಿನೀತ್ (ಸುರಗಿರಿ  ಸ್ಟ್ರೈಕರ್ಸ್ ) ಅವರಿಗೆ ‘ಅತ್ಯುತ್ತಮ ಬೌಲರ್’ ಮತ್ತು ಜೀವನ್ ( ಯುನೈಟೆಡ್ ವಾರಿಯರ್ಸ್ ಬೆಂಗಳೂರು ) ಅವರಿಗೆ ‘ಅತ್ಯುತ್ತಮ ಬ್ಯಾಟ್ಸ್‌ಮನ್’ ಪ್ರಶಸ್ತಿಯನ್ನು ನೀಡಲಾಯಿತು. ಸುರಗಿರಿ  ಸ್ಟ್ರೈಕರ್ಸ್ ನ ವಿನೀತ್   ‘ಮ್ಯಾನ್ ಆಫ್ ದಿ ಸೀರೀಸ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಫೈನಲ್ ಪಂದ್ಯದ ‘ಮ್ಯಾನ್ ಆ ದಿ ಮ್ಯಾಚ್’ ಸುರಗಿರಿ  ಸ್ಟ್ರೈಕರ್ಸ್ ನ ಕಿಶೋರ್ ಪಾಲಾಯಿತು. ಸುರಗಿರಿ  ಸ್ಟ್ರೈಕರ್ಸ್ ನ  ರವಿ ‘ಬೆಸ್ಟ್ ಆಲ್ ರೌಂಡರ್’ ಪ್ರಶಸ್ತಿಗೆ ಭಾಜನರಾದರು.
ಸಂದೀಪ್ ಶೆಟ್ಟಿ, ಅವಿನಾಶ್ ಶೆಟ್ಟಿ  ಹಾಗೂ  ಸುನೀಲ್ ಶೆಟ್ಟಿ ಇವರುಗಳ ಮುಂದಾಳುತ್ವದಲ್ಲಿ 9 ಫ್ರ್ಯಾಂಚೈಸೀಗಳ  ನಡುವೆ ನಡೆದ ಕ್ರಿಕೆಟ್ ಪಂದ್ಯಾವಳಿಯನ್ನು  ವಿಜಯಾ  ಕಾಲೇಜು ಮೈದಾನದಲ್ಲಿ ಸಾವಿರಾರು ಜನರು ವೀಕ್ಷಿಸಿದರು ಮತ್ತು ಬಹಳ ಮೆಚ್ಚುಗೆ ಗಳಿಸಿದರು.  ಶ್ರೀ  ದಾಮೋದರ್ ಶೆಟ್ಟಿ – ಸಂಚಾಲಕರು  ಯುವ ವಿಭಾಗ ಬಂಟರ ಸಂಘ ಮುಲ್ಕಿ ( ರಿ ) ಸಹಕರಿಸಿದರು.
ಸಾಮಾಜಿಕ ಕಾರ್ಯಕರ್ತ ವಸಂತ್ ಶೆಟ್ಟಿ ಪುಣೆ, ಮತ್ತು  ಲೋಹಿತ್  ರೈ , SSK ತಂಡದ ಮಾಲೀಕರು ಇವರನ್ನು ಸನ್ಮಾನಿಸಲಾಯಿತು
M9 ಸ್ಪೋರ್ಟ್ಸ್ ಯೂಟ್ಯೂಬ್ ನಲ್ಲಿ ಟೂರ್ನಮೆಂಟ್ ನ ನೇರ ಪ್ರಸಾರವನ್ನು ಬಿತ್ತರಿಸಿತು. ರಾಜೇಶ್ ಆಚಾರ್ಯ ಬೆಳ್ಮಣ್ಣು, ಶಿವಪ್ರಸಾದ್ ಶಿರ್ವ ಹಾಗೂ  ಚರಣ್ ಶೆಟ್ಟಿ ಮಣಿಪಾಲ ಪಂದ್ಯಾಕೂಟದ ತೀರ್ಪುಗಾರರಾಗಿದ್ದರು.  ಶ್ರೀಶ ಸರಾಫ್ ಐಕಳ,  ಸುರೇಶ್ ಭಟ್ ಮೂಲ್ಕಿ ಹಾಗೂ ಮನೀಶ್ ಶೆಟ್ಟಿ  ಕಾರ್ಕಳ  ಕ್ರಿಕೆಟ್ ಕಾಮೆಂಟ್ರಿಯಲ್ಲಿ ಸಾಥ್  ನೀಡಿದರು.  ಶ್ರೀ  ಸಾಯಿನಾಥ್ ಶೆಟ್ಟಿ ಮುಂಡ್ಕೂರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಬಡ ಕುಟುಂಬಗಳ ನೆರವಿಗಾಗಿ ಒಂದು ಒಳ್ಳೆಯ ಸದುದ್ದೇಶವನ್ನು ಇಟ್ಟು ಆಯೋಜಿಸಿದ ಈ ಟೂರ್ನಮೆಂಟ್ ಗೆ ಸ್ಪೋರ್ಟ್ಸ್ ಕನ್ನಡ  ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದೆ.
Authored by ಸುರೇಶ್ ಭಟ್, ಮೂಲ್ಕಿ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

eighteen − 9 =