‘ಗೆಟ್ ರೆಡಿ..’ ಎಂಬ ಆರಂಭಿಕ ಸುಳಿವು ನೀಡಿದ ಜಿಪಿಎಲ್ ಮ್ಯಾನೇಜ್ಮೆಂಟ್
ಜಿಪಿಎಲ್ 2025ಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಆ ಮೂಲಕ ಇಲ್ಲಿಯವರೆಗೆ 8 ಜಿಪಿಎಲ್ ಲೀಗ್ಗಳು ನಡೆದಿವೆ. ಮುಂದಿನ ವರ್ಷದ 9ನೇ ಋತುವಿನ ಜಿಪಿಎಲ್ ಸರಣಿಗಾಗಿ ಮೆಗಾ ಹರಾಜು ನವೆಂಬರ್ 10 ರಂದು ಮಂಗಳೂರಿನಲ್ಲಿ ನಡೆಯಲಿದೆ. ಈ ಮೆಗಾ ಹರಾಜಿನ ನಿರೀಕ್ಷೆ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಿರುವಾಗ ಪ್ರತಿದಿನ ಜಿಪಿಎಲ್ ಸರಣಿಯ ಕುತೂಹಲಕಾರಿ ಮಾಹಿತಿ ಹೊರಬೀಳುತ್ತಿದೆ.

ಅಲ್ಲದೆ, ಮುಂದಿನ ವರ್ಷ ಜಿಪಿಎಲ್ ಸರಣಿ ಯಾವಾಗ ಆರಂಭವಾಗುತ್ತದೆ ಎಂಬ ಘೋಷಣೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಬಹು ನಿರೀಕ್ಷಿತ ಜಿಪಿಎಲ್ ಟೂರ್ನಿಯನ್ನು ಫೆಬ್ರವರಿಯಲ್ಲಿ ನಡೆಸಲು ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ (KSA) ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಮುಂಬರುವ ಜಿಪಿಎಲ್ ಸೀಸನ್ 9, ಮುಂದಿನ ವರ್ಷದ ಫೆಬ್ರವರಿ 14 ರಿಂದ 16 ಅವಧಿಗೆ ನಿಗದಿಪಡಿಸಲಾಗಿದೆ.

ಹೊಸ ಋತುವಿನ ಆರಂಭದ ಮೊದಲು ಜಿಪಿಎಲ್ ಹರಾಜು ಪ್ರಕ್ರಿಯೆಯ ಮೂಲಕ ಎಲ್ಲಾ ಹದಿನಾರು ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲ್ಲಿದ್ದಾರೆ. ಜಿಪಿಎಲ್ ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರ ಖರೀದಿಗಾಗಿ ಎಲ್ಲಾ ಜಿಪಿಎಲ್ ತಂಡಗಳು ಪ್ಲಾನ್ ಮಾಡಿಕೊಂಡಿವೆ. ಹೇಗಾದ್ರೂ ಮಾಡಿ ಮುಂದಿನ ಸಲ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ತಂಡಗಳು ಬಲಿಷ್ಠ ತಂಡ ಕಟ್ಟಲು ಮುಂದಾಗಿವೆ. ಈಗಾಗಲೇ ಭಾರಿ ಕುತೂಹಲ ಹೆಚ್ಚಿಸಿರುವ 2025ರ ಜಿಪಿಎಲ್ ಮೆಗಾ ಹರಾಜು (GPL Mega Auction) ಪ್ರಕ್ರಿಯೆಯಲ್ಲಿ ಯಾವ ಆಟಗಾರ ಯಾವ ತಂಡದಲ್ಲಿ ಆಯ್ಕೆ ಆಗಲಿದ್ದಾರೆ ಅನ್ನುವುದು ಅಭಿಮಾನಿಗಳ ಮುಂದಿನ ನಿರೀಕ್ಷೆ. ಜಿಎಸ್ ಬಿ ಪ್ರೀಮಿಯರ್ ಲೀಗ್ ಸೀಸನ್ಗಾಗಿ ಇಡೀ ಜಿಎಸ್ ಬಿ ಕ್ರೀಡಾಲೋಕವೇ ಕಾಯುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಮತ್ತು ಉತ್ಸಾಹಿಗಳು ಫೆಬ್ರವರಿಯಲ್ಲಿ ನಡೆಯಲಿರುವ ಆಕ್ಷನ್-ಪ್ಯಾಕ್ಡ್ ಸೀಸನ್ಗಾಗಿ ಸಜ್ಜಾಗುತ್ತಿದ್ದಾರೆ. ಜಿಎಸ್ ಬಿ ಕ್ರಿಕೆಟ್ ಅಭಿಮಾನಿಗಳಿಗೆ ಜಿಪಿಎಲ್ ರಸದೌತಣ ನೀಡಲಿದೆ.




