ಬೆಂಗಳೂರು-ಫ್ರೆಂಡ್ಸ್ ಬೆಂಗಳೂರು ಕಪ್-2023 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟದ ಎಂಟರ ಘಟ್ಟದ ಪಂದ್ಯದಲ್ಲಿ ಮೈಟಿ ಮುರಳಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮೈಟಿ ಸ್ಮೈಲ್- ರಂಗ ಇಲೆವೆನ್ ವಿರುದ್ಧ ಗೆಲುವಿನ ನಗೆ ಬೀರಿದೆ ಹಾಗೂ ಮೂರನೆ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ರಂಗ ಇಲೆವೆನ್ ಅನಿಲ್ 20,ಗಿರೀಶ್ 17 ರನ್ ಗಳ ನೆರವಿನಿಂದ 8 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 63 ರನ್ ಪೇರಿಸಿತ್ತು.
ಸವಾಲಿನ ಗುರಿಯನ್ನು ಬೆಂಬತ್ತುವ ವೇಳೆ ಆರಂಭಿಕ ಆಟಗಾರ ಮುರಳಿ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ನೆರವಿನಿಂದ 31 ಗಳಿಸಿದರು.ಮುರಳಿಗೆ ಸಾಥ್ ನೀಡಿದ ಕಿರಣ್ 16 ರನ್ ಗಳಿಸಿ 6 ಓವರ್ ಗಳಲ್ಲಿ ಗುರಿ ತಲುಪಿದರು.
ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ ಮುರಳಿ ಅರ್ಹವಾಗಿ ಪಂದ್ಯಶ್ರೇಷ್ಟ ಗೌರವಕ್ಕೆ ಭಾಜನರಾದರು.