ಇತರೆಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನೆ.

ಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನೆ.

-

- Advertisment -spot_img

ಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನೆ.

ಉಡುಪಿಯ-ಶ್ರೀಮಧ್ವಾಚಾರ್ಯ ಕರಾರ್ಚಿತ ಶ್ರೀಕೃಷ್ಣದೇವರಿಗೆ,ಶ್ರೀವಾದಿರಾಜ ಗುರುಸಾರ್ವಭೌಮ ಪ್ರತಿಷ್ಠಾಪಿತ ಶ್ರೀಮುಖ್ಯ ಪ್ರಾಣದೇವರಿಗೆ 47 ವರ್ಷಗಳ ಕಾಲ ವಿಧಿವತ್ತಾಗಿ ಪೂಜೆಗಳನ್ನು ಸಲ್ಲಿಸಿ ಪೊಡವಿಗೊಡೆಯನಿಗೆ ನಿರಂತರ ಮುನ್ನೂರು ವೈವಿದ್ಯಮಯ ಅಲಂಕಾರ ಸೇವೆಯ ಮುಖಾಂತರ ಮೂರು ವೈಭವದ ಪರ್ಯಾಯ ಮಹೋತ್ಸವವನ್ನು ಭಗವಂತನ ಪಾದಕಮಲಗಳಿಗೆ ಸಮರ್ಪಿಸಿದ ಶ್ರೀಶಿರೂರು ಮಠದ ಕೀರ್ತಿಶೇಷ ಪರಮಪೂಜ್ಯ ಶ್ರೀಲಕ್ಷ್ಮೀವರತೀರ್ಥಶ್ರೀಪಾದರ ಏಳನೇವರ್ಷದ ಆರಾಧನೆಯು ವಿಶ್ವಾವಸು ಸಂ!ರದ ಕರ್ಕಾಟಕಮಾಸ ದಿನ15 ಸಲುವ ಶ್ರಾವಣಶುದ್ಧ ಸಪ್ತಮೀ ಗುರುವಾರ ಜುಲೈ 31ರಂದು ಉಡುಪಿ ರಥಬೀದಿಯಲ್ಲಿರುವ ಶ್ರೀರಾಘವೇಂದ್ರಸ್ವಾಮಿಗಳವರ ಮಠದಲ್ಲಿ ವಿಧಿವತ್ತಾಗಿ ವೈಭವದಿಂದ ನೆರವೇರಿತು.

ಪ್ರಾತಃಕಾಲ 6.30ಕ್ಕೆ ಶ್ರೀರಾಘವೇಂದ್ರಮಠದಲ್ಲಿ  ಶ್ರೀರಾಯರ ವೃಂದಾವನದ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮ ಜರಗಿತು.ತದನಂತರ ಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥರ ಮೃತ್ತಿಕಾ ವೃಂದಾವನಕ್ಕೆ ಪಿ.ಲಾತವ್ಯ ಆಚಾರ್ಯರು ಕಲಶಾಭಿಷೇಕ ಸಲ್ಲಿಸಿದರು.ವೇದಮೂರ್ತಿ ಶ್ರೀಕೆಮುಂಡೆಲ್ ಸುಬ್ರಮಣ್ಯ ಭಟ್ ಹಾಗೂ ವೇದಮೂರ್ತಿ ಶ್ರೀಗಣೇಶಣ್ಣನವರು ಧಾರ್ಮಿಕ ಪ್ರಕ್ರಿಯೆಗಳನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು. ಮಧ್ಯಾಹ್ನ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗಿತು.

ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಬಂಧುಗಳು ನೆರವೇರಿಸಿದ ಈ ಆರಾಧನಾ ಮಹೋತ್ಸವದಲ್ಲಿ ಉಡುಪಿ ಶ್ರೀರಾಘವೇಂದ್ರ ಮಠದ ಮುಖ್ಯಸ್ಥರಾದ ಶ್ರೀಜಯತೀರ್ಥ ಆಚಾರ್ಯ, ಶ್ರೀಅಪ್ಪಣ್ಣ ಆಚಾರ್ಯ, ಶ್ರೀವಾಸುದೇವಣ್ಣ ಪೂರ್ವಾಶ್ರಮದ ಕುಟುಂಬಿಕರಾದ ವೇದಮೂರ್ತಿ ಶ್ರೀಅನಂತ ತಂತ್ರಿ,ಶ್ರೀಲಕ್ಷ್ಮೀನಾರಾಯಣ ತಂತ್ರಿ,ಶ್ರೀಪ್ರಹ್ಲಾದ ಆಚಾರ್ಯ ಸೊಂಡೂರು,ಶ್ರೀರಾಜಗೋಪಾಲ್,ಡಾ!!ವ್ಯಾಸರಾಜ ತಂತ್ರೀ, ಶ್ರೀಪಿ.ವಾದಿರಾಜ ಆಚಾರ್ಯ, ಶ್ರೀಪಿ.ಶ್ರೀನಿವಾಸ ಆಚಾರ್ಯ, ಶ್ರೀಪಿ.ವೃಜನಾಥ ಆಚಾರ್ಯ, ಶ್ರೀವಿ.ನಾಗೇಶ ಆಚಾರ್ಯ, ಶ್ರೀವಿ.ಮಹೇಶ ಆಚಾರ್ಯ, ಶ್ರೀರಾಜೇಂದ್ರ ಕಾರ್ಪ್ ಬ್ಯಾಂಕ್,ಶ್ರೀಮೋಹನದಾಸ ಭಟ್, ಶ್ರೀಜಯರಾಂ ರಾವ್, ಶ್ರೀಅನಂತಉಪಾಧ್ಯ ಸಾಂತ್ಯಾರ್,ಶ್ರೀರಾಜೇಂದ್ರ ಆಚಾರ್ಯ ಬಡಗುಬೆಟ್ಟು, ಶ್ರೀಶಂಕರನಾರಾಯಣ ಹೊಳ್ಳಮಿನರ್ವ ಕುಂದಾಪುರ, ಶ್ರೀಅರ್ಜುನ್ ಆಚಾರ್ಯ, ಶ್ರೀಅಕ್ಷೋಭ್ಯ ಆಚಾರ್ಯ, ಶ್ರೀವಿಶಾಲ್ ಆಚಾರ್ಯ ಸೇರಿದಂತೆ ಇನ್ನೂ ಅನೇಕ ಗಣ್ಯರು ಅತಿಥಿಗಳು ಉಪಸ್ಥಿತರಿದ್ದರು.

ಕೇಮಾರು ಸಾಂದೀಪನಿ ಮಠದ ಶ್ರೀಈಶವಿಠಲದಾಸ ಸ್ವಾಮೀಜಿಯವರು ಶ್ರೀಕೇಮಾರುಮಠದಲ್ಲಿ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನಾ ಉತ್ಸವದ ನಿಮಿತ್ತ ವಿಶೇಷ ಪೂಜೆ ನೆರವೇರಿಸಿ ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಹಾಗೂ ಉಡುಪಿ ಹಿರಿಯಡಕ ಸಮೀಪದ ಶ್ರೀಶಿರೂರಿನ ಮೂಲಮಠದಲ್ಲೂ ಕೂಡಾ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ವೈಭವದ ಆರಾಧನೆ ಜರಗಿತು.

LEAVE A REPLY

Please enter your comment!
Please enter your name here

6 + 12 =

Latest news

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

Retro Bet Online Casino: Quick Wins for the Busy Player

Retro Bet has carved out a niche for those who crave instant gratification and fast-paced gaming. If you’re someone...

Spinch Casino: Quick Spin Thrills für Fans des schnellen Spiels

1. Quick Burst Gaming: Warum kurze Sessions wichtig sindWenn die Uhr runterzählt, steigt der Adrenalinspiegel. Spieler, die kurze, hochintensive...

LevelUp Casino: Schnelle Gewinne und rasantes Action für den modernen Spieler

In der heutigen schnelllebigen Welt ist ein Casino, das Ihre Zeit respektiert, ein echtes Juwel. LevelUp Casino hat sich...
- Advertisement -spot_imgspot_img

BildBet Casino: Fast‑Track Slots für schnelle Gewinne

Wenn Sie unterwegs sind—zwischen Meetings, beim Zugfahren oder einfach während einer Mittagspause—bietet BildBet eine Möglichkeit, das Casino-Feeling zu erleben,...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

Must read

- Advertisement -spot_imgspot_img

You might also likeRELATED
Recommended to you