ಉದ್ಯಾವರ-ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಸಂಸ್ಥೆ ಪಿತ್ರೋಡಿ ಇವರ ವತಿಯಿಂದ ಹತ್ತು ದಿನದ ಪತಂಜಲಿ ಯೋಗ ಮತ್ತು ಪ್ರಾಣಾಯಾಮ ಶಿಬಿರವು ಇಂದು ಪ್ರಾರಂಭಗೊಂಡಿತು.

ಮಂಡಲ ಪ್ರಭಾರಿ ಶ್ರೀ ರಾಘವೇಂದ್ರ ರಾವ್ ಯೋಗ ತರಬೇತಿ ನಡೆಸಿಕೊಟ್ಟರು. ಸಂಸ್ಥೆಯ ಅಧ್ಯಕ್ಷರಾದ ನವೀನ್ ಸಾಲ್ಯಾನ್,ಉಪಾಧ್ಯಕ್ಷರಾದ ವಿಜಯ್ ಕೋಟ್ಯಾನ್, ಭಜನಾ ಮಂಡಳಿಯ ಅಧ್ಯಕ್ಷರಾದ ಗಂಗಾಧರ್ ಕರ್ಕೇರ,

ಮಹಿಳಾ ಮಂಡಳಿಯ ಅಧ್ಯಕ್ಷರಾದ ಭಾರತಿ, ಮಾಜಿ ಅಧ್ಯಕ್ಷರಾದ ಮಲ್ಲೇಶ್ ಕುಮಾರ್, ಉಮೇಶ್ ಕರ್ಕೇರ, ಪ್ರಕಾಶ್ ಶೆಟ್ಟಿ,ಸಂದೀಪ್ ಕುಮಾರ್,ಉಮಾನಾಥ್ ಕರ್ಕೇರ ಸಹಿತ ಮೂವತ್ತು ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡರು.
