Home ಕ್ರಿಕೆಟ್ ಯುನೈಟೆಡ್ ಕಾಪು ಟ್ರೋಫಿ – ಸೀಸನ್ 7: ಟ್ರೋಫಿ ಅನಾವರಣ ಸಮಾರಂಭಕ್ಕೆ ಸಜ್ಜು

ಯುನೈಟೆಡ್ ಕಾಪು ಟ್ರೋಫಿ – ಸೀಸನ್ 7: ಟ್ರೋಫಿ ಅನಾವರಣ ಸಮಾರಂಭಕ್ಕೆ ಸಜ್ಜು

ಯುನೈಟೆಡ್ ಕಾಪು ಟ್ರೋಫಿ – ಸೀಸನ್ 7: ಟ್ರೋಫಿ ಅನಾವರಣ ಸಮಾರಂಭಕ್ಕೆ ಸಜ್ಜು

ಯುನೈಟೆಡ್ ಕಾಪು ಟ್ರೋಫಿ – ಸೀಸನ್ 7: ಟ್ರೋಫಿ ಅನಾವರಣ ಸಮಾರಂಭಕ್ಕೆ ಸಜ್ಜು

ದುಬೈ: ಯುನೈಟೆಡ್ ಕಾಪು ಟ್ರೋಫಿ ಸೀಸನ್ 7 – 2026 (ಯುಎಇ) ಕ್ರಿಕೆಟ್ ಟೂರ್ನಮೆಂಟ್‌ಗೆ ಅಧಿಕೃತ ಚಾಲನೆ ನೀಡುವ ಟ್ರೋಫಿ ಅನಾವರಣ ಸಮಾರಂಭವು ಜನವರಿ 2, 2026ರ ಶುಕ್ರವಾರ ದುಬೈನ ಅಲ್ ಕುಸೈಸ್‌ನಲ್ಲಿರುವ ದ ಸ್ವಾಗತ್ ರೆಸ್ಟೋರೆಂಟ್‌ನಲ್ಲಿ ಸಂಜೆ 8 ಗಂಟೆಯಿಂದ ನಡೆಯಲಿದೆ.

ಈ ಭವ್ಯ ಸಮಾರಂಭಕ್ಕೆ VID One Oilfield Equipment Manufacturing LLC ಶೀರ್ಷಿಕೆ ಪ್ರಾಯೋಜಕರಾಗಿ ಕೈಜೋಡಿಸಿದ್ದು,ಸಮಾರಂಭದಲ್ಲಿ ಟೂರ್ನಮೆಂಟ್‌ನ ಅಧಿಕೃತ ಟ್ರೋಫಿ ಅನಾವರಣದ ಜೊತೆಗೆ, ತಂಡಗಳ ಜರ್ಸಿ ಬಿಡುಗಡೆ, ಅಧಿಕೃತ ಪಂದ್ಯಗಳ ವೇಳಾಪಟ್ಟಿ ಘೋಷಣೆ (ಫಿಕ್ಸ್ಚರ್ ಡ್ರಾ) ಹಾಗೂ ಹಿಂದಿನ ಸೀಸನ್‌ಗಳ ಪ್ರಮುಖ ಹೈಲೈಟ್‌ಗಳ ಪ್ರದರ್ಶನವೂ ನಡೆಯಲಿದೆ.

ಯುನೈಟೆಡ್ ಕಾಪು ಟ್ರೋಫಿ ಯುಎಇಯಲ್ಲಿ ನೆಲೆಸಿರುವ ಕ್ರಿಕೆಟ್ ಪ್ರೇಮಿಗಳಿಗೆ ಪ್ರಮುಖ ಕ್ರೀಡಾಕೂಟವಾಗಿದ್ದು, ಕಳೆದ ಆರು ಸೀಸನ್‌ಗಳಲ್ಲಿ ಅತ್ಯುತ್ತಮ ಸಂಘಟನೆ, ಕ್ರೀಡಾಸ್ಫೂರ್ತಿ ಹಾಗೂ ಸಮುದಾಯ ಸೌಹಾರ್ದತೆಯನ್ನು ಪ್ರದರ್ಶಿಸಿಕೊಂಡಿದೆ. ಸೀಸನ್ 7 ಇನ್ನಷ್ಟು ವೈಭವ, ಸ್ಪರ್ಧಾತ್ಮಕ ಪಂದ್ಯಗಳು ಮತ್ತು ಹೊಸ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಲಿದೆ ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಟೂರ್ನಮೆಂಟ್‌ಗೆ GHS, Atithi Veg Restaurant LLC, SIA Logistics, Ranger, du Pay ಸೇರಿದಂತೆ ಹಲವು ಪ್ಲಾಟಿನಂ ಪ್ರಾಯೋಜಕರು ಬೆಂಬಲ ನೀಡಿರುವುದು ಕ್ರೀಡಾ ಚಟುವಟಿಕೆಗಳಿಗೆ ಉದ್ಯಮ ವಲಯದ ಸದೃಢ ಸಹಕಾರವನ್ನು ತೋರಿಸುತ್ತದೆ.

ಯುನೈಟೆಡ್ ಕಾಪು ಆಯೋಜನಾ ಸಮಿತಿಯು ಕ್ರೀಡಾಭಿಮಾನಿಗಳು, ಪ್ರಾಯೋಜಕರು ಹಾಗೂ ಆಹ್ವಾನಿತ ಅತಿಥಿಗಳನ್ನು ಟ್ರೋಫಿ ಅನಾವರಣ ಸಮಾರಂಭಕ್ಕೆ ಆಗಮಿಸಿ ಈ ಕ್ರೀಡೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದೆ.

LEAVE A REPLY

Please enter your comment!
Please enter your name here

19 − seven =

ಯುನೈಟೆಡ್ ಕಾಪು ಟ್ರೋಫಿ – ಸೀಸನ್ 7: ಟ್ರೋಫಿ ಅನಾವರಣ ಸಮಾರಂಭಕ್ಕೆ ಸಜ್ಜು

ಯುನೈಟೆಡ್ ಕಾಪು ಟ್ರೋಫಿ – ಸೀಸನ್ 7: ಟ್ರೋಫಿ ಅನಾವರಣ ಸಮಾರಂಭಕ್ಕೆ ಸಜ್ಜು ದುಬೈ: ಯುನೈಟೆಡ್ ಕಾಪು ಟ್ರೋಫಿ ಸೀಸನ್ 7 – 2026 (ಯುಎಇ) ಕ್ರಿಕೆಟ್ ಟೂರ್ನಮೆಂಟ್‌ಗೆ ಅಧಿಕೃತ ಚಾಲನೆ ನೀಡುವ ಟ್ರೋಫಿ ಅನಾವರಣ ಸಮಾರಂಭವು ಜನವರಿ 2, 2026ರ ಶುಕ್ರವಾರ ದುಬೈನ ಅಲ್ ಕುಸೈಸ್‌ನಲ್ಲಿರುವ ದ ಸ್ವಾಗತ್ ರೆಸ್ಟೋರೆಂಟ್‌ನಲ್ಲಿ ಸಂಜೆ 8 ಗಂಟೆಯಿಂದ ನಡೆಯಲಿದೆ. ಈ ಭವ್ಯ ಸಮಾರಂಭಕ್ಕೆ VID One Oilfield Equipment Manufacturing LLC ಶೀರ್ಷಿಕೆ ಪ್ರಾಯೋಜಕರಾಗಿ ಕೈಜೋಡಿಸಿದ್ದು,ಸಮಾರಂಭದಲ್ಲಿ ಟೂರ್ನಮೆಂಟ್‌ನ ಅಧಿಕೃತ ಟ್ರೋಫಿ ಅನಾವರಣದ ಜೊತೆಗೆ, ತಂಡಗಳ ಜರ್ಸಿ ಬಿಡುಗಡೆ, ಅಧಿಕೃತ ಪಂದ್ಯಗಳ ವೇಳಾಪಟ್ಟಿ ಘೋಷಣೆ (ಫಿಕ್ಸ್ಚರ್ ಡ್ರಾ) ಹಾಗೂ ಹಿಂದಿನ ಸೀಸನ್‌ಗಳ ಪ್ರಮುಖ ಹೈಲೈಟ್‌ಗಳ ಪ್ರದರ್ಶನವೂ ನಡೆಯಲಿದೆ. ಯುನೈಟೆಡ್ ಕಾಪು ಟ್ರೋಫಿ ಯುಎಇಯಲ್ಲಿ ನೆಲೆಸಿರುವ ಕ್ರಿಕೆಟ್ ಪ್ರೇಮಿಗಳಿಗೆ ಪ್ರಮುಖ ಕ್ರೀಡಾಕೂಟವಾಗಿದ್ದು, ಕಳೆದ ಆರು ಸೀಸನ್‌ಗಳಲ್ಲಿ ಅತ್ಯುತ್ತಮ ಸಂಘಟನೆ, ಕ್ರೀಡಾಸ್ಫೂರ್ತಿ ಹಾಗೂ ಸಮುದಾಯ ಸೌಹಾರ್ದತೆಯನ್ನು ಪ್ರದರ್ಶಿಸಿಕೊಂಡಿದೆ. ಸೀಸನ್ 7 ಇನ್ನಷ್ಟು ವೈಭವ, ಸ್ಪರ್ಧಾತ್ಮಕ ಪಂದ್ಯಗಳು ಮತ್ತು

Send this to a friend