ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ಟೆನಿಸ್ಬಾಲ್ ಕ್ರಿಕೆಟ್ ಗೆ ಪುನರ್ಜನ್ಮ ನೀಡುವ ಟಿ‌‌‌.ಸಿ.ಎ ಉಡುಪಿ ಪ್ರಯತ್ನ ಶ್ಲಾಘನೀಯ-ಪ್ರಶಾಂತ್...

ಟೆನಿಸ್ಬಾಲ್ ಕ್ರಿಕೆಟ್ ಗೆ ಪುನರ್ಜನ್ಮ ನೀಡುವ ಟಿ‌‌‌.ಸಿ.ಎ ಉಡುಪಿ ಪ್ರಯತ್ನ ಶ್ಲಾಘನೀಯ-ಪ್ರಶಾಂತ್ ಕುಂದರ್

-

- Advertisment -spot_img
*ಸ್ಪೋರ್ಟ್ಸ್ ಕನ್ನಡ ವರದಿ*
ಕುಂದಾಪುರ-ಇಲ್ಲಿನ ಗಾಂಧಿಮೈದಾನದಲ್ಲಿ ಟಿ.ಸಿ.ಎ ಉಡುಪಿ ಆಶ್ರಯದಲ್ಲಿ  ಉಡುಪಿ-ದ.ಕ ಜಿಲ್ಲಾ ಶಾಲಾ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ದೊರಕಿತು.
ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಪ್ರಶಾಂತ್ ಕುಂದರ್ “ಗಿಡ ಸುಂದರವಾಗಿ ಕಾಣಲು ಹೂವು ಎಷ್ಟು ಮುಖ್ಯವೋ,ಪದಾರ್ಥಕ್ಕೆ ಉಪ್ಪು ಖಾರ ಎಷ್ಟು ಮುಖ್ಯವೋ ಅಂತೆಯೇ ಮನುಷ್ಯನ ಜೀವನದಲ್ಲಿ ಕ್ರೀಡೆಯೂ ಮುಖ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಟೆನಿಸ್ಬಾಲ್ ಕ್ರಿಕೆಟ್ ಉಳಿಸುವ ಟಿ.ಸಿ.ಎ ಪ್ರಯತ್ನ ಶ್ಲಾಘನೀಯ” ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಟಿ‌‌.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ “ಅಂತರಾಷ್ಟ್ರೀಯ ಆಟಗಾರರೂ ಕೂಡ ತಮ್ಮ ಕ್ರೀಡಾ ಜೀವನವನ್ನು ಟೆನಿಸ್ಬಾಲ್ ಕ್ರಿಕೆಟ್ ನಿಂದಲೇ ಪ್ರಾರಂಭಿಸಿದ್ದು,ಲೆದರ್ ಬಾಲ್ ಕ್ರಿಕೆಟ್ ಕೆಲವೇ ಕೆಲವು ಅಕಾಡೆಮಿ ಹಾಗೂ ವಿದ್ಯಾಸಂಸ್ಥೆಗಳಿಗೆ ಸೀಮಿತವಾಗಿದೆ ಆದ್ದರಿಂದ ಉಡುಪಿ-ದ.ಕ ಜಿಲ್ಲಾ ವಿದ್ಯಾಸಂಸ್ಥೆಗಳಿಗೆ ಮುಕ್ತ ಆಹ್ವಾನ ನೀಡಿದ್ದು 64 ವಿದ್ಯಾಸಂಸ್ಥೆಗಳು ಈ ಟೂರ್ನಮೆಂಟ್ ನ ಭಾಗವಾಗಲಿವೆ.ಮುಂದಿನ ದಿನಗಳಲ್ಲಿ ಟೆನಿಸ್ಬಾಲ್ ಕ್ರಿಕೆಟ್ ಪ್ರತಿಭೆಗಳಿಗೂ ಭವಿಷ್ಯದಲ್ಲಿ ಕ್ರೀಡಾಜೀವನಕ್ಕೆ ಸರ್ವ ಸಹಕಾರ ನೀಡಲಿದ್ದೇವೆ” ಎಂದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಪಂದ್ಯಾಟದಲ್ಲಿ ಭಾಗವಹಿಸಿದ ಶಾಲಾ-ಕಾಲೇಜು ತಂಡದ ವಿದ್ಯಾರ್ಥಿಗಳಿಗೆ ಹಸ್ತಲಾಘವ ನೀಡಿ ಶುಭ ಹಾರೈಸಿದರು.ಈ ಸಂದರ್ಭ ರೋಶನ್ ಕುಮಾರ್ ಶೆಟ್ಟಿ,ಉದ್ಯಮಿ
ಚಿತ್ತರಂಜನ್ ಹೆಗ್ಡೆ ಹರ್ಕೂರು,ರಮೇಶ್ ಶೆಟ್ಟಿ, ಕುಸುಮಾಕರ್ ಶೆಟ್ಟಿ, ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ,ಯಾದವ್‌ ನಾಯಕ್ ಕೆಮ್ಮಣ್ಣು,ಸದಾನಂದ ಶಿರ್ವ,
ನಾರಾಯಣ ಶೆಟ್ಟಿ ಮಾರ್ಕೋಡು,ಶಂಕರ್ ಅಂಕದಕಟ್ಟೆ,ಸುಧೀರ್.ಕೆ.ಎಸ್,
ಚೇತನ್ ಕುಮಾರ್ ದೇವಾಡಿಗ,ಕೋಟ ರಾಮಕೃಷ್ಣ ಆಚಾರ್ ಸ್ಪೋರ್ಟ್ಸ್ ಕನ್ನಡ,ಶಿವನಾರಾಯಣ ಐತಾಳ್ ಕೋಟ,ಟಿ‌.ಸಿ.ಎ ಪದಾಧಿಕಾರಿಗಳು ಮತ್ತು ಸದಸ್ಯರು,ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
*ಪ್ರಥಮ ದಿನ ಭಾಗವಹಿಸಿದ 12 ತಂಡಗಳು*
ಟಿ‌.ಸಿ.ಎ ಉಡುಪಿ ಆಯೋಜಿಸಿದ ಶಾಲಾ-ಕಾಲೇಜು ಮಟಯ ಕ್ರಿಕೆಟ್ ಪಂದ್ಯಾಟದ ಮೊದಲ ದಿನ,
ಭಂಡಾರ್ಕರ್ಸ್ ಕಾಲೇಜು ಕುಂದಾಪುರ,ಜಿ.ಎಫ್.ಜಿ.ಸಿ ಶಂಕರನಾರಾಯಣ,ಯು.ಪಿ.ಎಂ.ಸಿ ಉಡುಪಿ,ಎಮ್.ಪಿ.ಯು‌.ಸಿ ಮಣಿಪಾಲ,ಗೋವಿಂದದಾಸ್ ಕಾಲೇಜ್ ಸುರತ್ಕಲ್,ಭಂಡಾರ್ಕರ್ಸ್ ಪಿ.ಯು ಕಾಲೇಜ್,ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮಣಿಪಾಲ,ಐ.ಎಮ್‌.ಜೆ ಮೂಡ್ಲಕಟ್ಟೆ,ಜಿ.ಎಫ್.ಜಿ.ಸಿ ತೆಂಕನಿಡಿಯೂರು,ಜಿ.ಪಿ.ಟಿ ಮಣಿಪಾಲ,ಬಿ.ಬಿ ಹೆಗ್ಡೆ ಕಾಲೇಜ್ ಕುಂದಾಪುರ ಹೀಗೆ ಒಟ್ಟು 12 ತಂಡಗಳು ಭಾಗವಹಿಸಿದ್ದವು.
*4 ತಂಡಗಳು ಕ್ವಾರ್ಟರ್ ಫೈನಲ್ ಗೆ*
ಪ್ರಥಮ ದಿನದಾಂತ್ಯದಲ್ಲಿ
ಜಿ‌.ಎಫ್.ಜಿ‌‌.ಸಿ ಶಂಕರನಾರಾಯಣ,
ಭಂಡಾರ್ಕರ್ಸ್ ಪಿ.ಯು ಕಾಲೇಜ್,
ಐ.ಎಮ್.ಜೆ ಮೂಡ್ಲಕಟ್ಟೆ ಮತ್ತು ಜಿ‌.ಪಿ‌‌.ಟಿ ಮಣಿಪಾಲ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಭರತ್ ಪಟೇಲ್,ಪ್ರೀತೇಶ್ 2 ಬಾರಿ,ರೋಹಿತ್,ಸುಹಾಗ್,ಅನ್ವಿತ್,ಫಲ್ಗುಣ್,ಕೌಶಿಕ್,ಶ್ರೇಯಸ್,
ಪ್ರೀತೇಶ್,ಶ್ರೇಯಸ್ ಶೆಣೈ ಮತ್ತು ಸಂತೋಷ್  ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

18 − one =

Latest news

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ 15 ವರ್ಷದ...

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್, ಉಡುಪಿ...

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...
- Advertisement -spot_imgspot_img

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

Must read

- Advertisement -spot_imgspot_img

You might also likeRELATED
Recommended to you