16.1 C
London
Tuesday, April 22, 2025
Homeಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ಟಿ‌.ಎ.ಪೈ ಪ್ರೌಢಶಾಲೆ ಮಡಿಲಿಗೆ ಟಿ‌‌.ಸಿ.ಎ ಹೈಸ್ಕೂಲ್ ವಿಭಾಗದ ಪ್ರಶಸ್ತಿ

ಟಿ‌.ಎ.ಪೈ ಪ್ರೌಢಶಾಲೆ ಮಡಿಲಿಗೆ ಟಿ‌‌.ಸಿ.ಎ ಹೈಸ್ಕೂಲ್ ವಿಭಾಗದ ಪ್ರಶಸ್ತಿ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ಟಿ.ಸಿ.ಎ ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಹೈಸ್ಕೂಲ್ ವಿಭಾಗದ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿಯ ಟಿ.ಎ.ಪೈ‌.ಇ.ಎಮ್.ಹೆಚ್.ಎಸ್ ತಂಡ ಪ್ರಶಸ್ತಿ ಜಯಿಸಿದೆ.
ಹೈಸ್ಕೂಲ್ ವಿಭಾಗದಲ್ಲಿ ಒಟ್ಟು ಎಂಟು ತಂಡಗಳ ನಡುವೆ ಲೀಗ್ ಹಂತದಲ್ಲಿ ರೋಚಕ ಹಣಾಹಣಿ ಸಾಗಿತ್ತು.ಉಪಾಂತ್ಯ ಪಂದ್ಯದಲ್ಲಿ
ಗ್ರೀನ್ ಪಾರ್ಕ್ ಹಿರಿಯಡ್ಕ-ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿಯನ್ನು ಹಾಗೂ ಟಿ.ಎ.ಪೈ-ಸೈಲಸ್ ಉಡುಪಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು.
*ವೈದಿಕ್ ಶೆಟ್ಟಿ ಸಮಯೋಚಿತ ಆಟ-ಟಿ.ಎ ಪೈ ತಂಡ ಚಾಂಪಿಯನ್*
ಫೈನಲ್ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಗ್ರೀನ್ ಪಾರ್ಕ್ ಹೈಸ್ಕೂಲ್ ಹಿರಿಯಡ್ಕ
ಪವನ್ 34 ರನ್ ನೆರವಿನಿಂದ ನಿಗದಿತ 10 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 68 ರನ್ ಕಲೆ ಹಾಕಿತ್ತು.
‌ಇದಕ್ಕುತ್ತರವಾಗಿ ಟಿ‌.ಎ ಪೈ ತಂಡ ವೈದಿಕ್ ಶೆಟ್ಟಿ ಅಜೇಯ 35   ಗಳ ಜವಾಬ್ದಾರಿಯುತ ಆಟದ ನೆರವಿನಿಂದ ಕೊನೆಯ ಓವರ್ ನಲ್ಲಿ ಜಯ ಸಾಧಿಸಿತು.
ಸೈಲಸ್ ಉಡುಪಿ ಮತ್ತು ಗುರುಕುಲ ವಕ್ವಾಡಿ ತಂಡ ಮೂರನೇ ಸ್ಥಾನ ಪಡೆದುಕೊಂಡರು.
ಫೈನಲ್ ನ ಪಂದ್ಯಶ್ರೇಷ್ಟ ಮತ್ತು ಬೆಸ್ಟ್ ಬ್ಯಾಟರ್ ಪ್ರಶಸ್ತಿ ವೈದಿಕ್ ಶೆಟ್ಟಿ, ಗ್ರೀನ್ ಪಾರ್ಕ್ ನ ಮಾಝಿನ್ ಬೆಸ್ಟ್ ಬೌಲರ್ ಹಾಗೂ ಪವನ್ ಗ್ರೀನ್ ಪಾರ್ಕ್ ಸರಣಿಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ, ರಮೇಶ್  ಶೆಟ್ಟಿ, ಮನೋಜ್ ನಾಯರ್,ಕೆ.ಪಿ ಸತೀಶ್,ನಾರಾಯಣ ಶೆಟ್ಟಿ, ರಾಘವೇಂದ್ರ ಚರಣ್ ನಾವಡ,ನಾರಾಯಣ ಶೆಟ್ಟಿ ಮಾರ್ಕೋಡು,ಭಾಸ್ಕರ ಆಚಾರ್,ನಾಗೇಶ್ ನಾವಡ,
ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,ಶಿವನಾರಾಯಣ ಐತಾಳ್ ಕೋಟ,ಟಿ‌.ಸಿ.ಎ ಪದಾಧಿಕಾರಿಗಳು,ಸದಸ್ಯರು ಮತ್ತು ಪಂದ್ಯಾಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ಪೋರ್ಟ್ಸ್ ಕನ್ನಡ ಟಿ.ವಿ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಂಡಿತು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

19 + four =